ಪುಟ:ಜಗನ್ಮೋಹಿನಿ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ནང་ ་ ཀ་ ཁ་ ནར ན ལ ན ་ བ

  • *** * * * * * * * * * *

ಜಗನ್ನೊಹಿನೀ, ಹನ್ನೆರಡು ಬಾರು ಉದ್ದದ ಅಗ್ನಿ ಕುಂಡ ಒಂದಿದ್ದಿ ತು, ಇದಕ್ಕೂ ಗುಡಿಗೂ ನಡುವೆ ಗಡತರವಾದ ಕಲಕಂಬ ಒಂದಿದ್ದಿತು. ಇದರ ಮುಂದುಗಡೆ ಬಾರು ಬಾರುದ್ದ ಕೋಡಿನ ಕೋಣದ ತಲೆ ಯೊಂದು ಇಡಲ್ಪಟ್ಟಿದ್ದಿ ತು, ಇದರ ಮೇಲೆ ಒಂದು ಪರಿವಾಣ ದಲ್ಲಿ ದೀಪವು ಧಣ ಧಣನೆ ಉರಿಯುತ್ತಿದ್ದಿ ತು; ಅದರ ಕಣಕಾಲು ಅದರ ಬಾಯಿಯಲ್ಲಿ ಇಡಲ್ಪಟ್ಟಿದ್ದಿ ತು; ಇದರ ಸುತ್ತಲೂ ರಕ್ತ ದ ಕಾಲುವೆಗಳು ಹರಿದು ಹೆಪ್ಪುಕಟ್ಟಿ ಕೊಂಡಿದ್ದು ವು. ಕತ್ರಗೆ ಕುರೂಪಿಗಳಾದ ಕೆಲವರು ಆ ಗುಡಿಯ ಇದಿರಿಗೆ ನಿಂತುಕೊಂಡು ದೇವಿಯನ್ನು ನೋಡಿ ಅಪಸ್ವರದಿಂದ ಪಾಡು ತಿದ್ದರು. ಈ ಜನರು ಆ ಪದಾತಿಗಳನ್ನು ನೋಡಿದ ಕೂಡಲೇ ಕಿಶಿ ಬಿಶಿ ಮಾತಾಡಿಕೊಂಡು ಸದ್ದು ಮಾಡದೇ ನಿಂತರು. ಆಗ ಆ ಪದಾತಿಗಳಲ್ಲಿ ಒಬ್ಬನು ಆ ಗುಡಿಯ ಬಾಗಿಲ ಪಕ್ಕ ದಲ್ಲಿ ಮುರಿದುಬಿದ್ದಿದ್ದ ಕಲ್ಲಿನ ಆನೆಯ ಮೇಲೆ ಕುಳಿತು ಕೊಂಡನು. ಅವನನ್ನು ಹಿಂಬಾಲಿಸಿ ಬರುತ್ತಿದ್ದ ಭಟರಿಬ್ಬರೂ ಅವನ ಇದಿರಿಗೆ ಕೈಗಟ್ಟಿ ಕೊಂಡು ವಿಧೇಯರಾಗಿ ನಿಂತರು. ಆನೆಯ ಮೇಲೆ ಕುಳಿತು ಕೊಂಡವನ ಆಕಾರವು ಸ್ಕೂಲ ವಾಗಿಯೂ ನೀಳವಾಗಿಯೂ ಇದ್ದಿ ತು ; ಶರೀರ ಛಾಯೆಯು ಕೆಂಚಾಗಿದ್ದಿ ತು; ಮುಖವು ಗುಂಡಾಗಿದ್ದಿ ತು; ಹಣೆಯು ವಿಶಾಲ ವಾಗಿದ್ದಿ ತು; ಕಣ್ಣು ಗುಡುಗಳು ಕೆಂಡಗಳಂತೆ ಕೆಂಪಾಗಿದ್ದುವು ; ಕೆನ್ನೆ ಮಾಸೆಗಳು ಕೆದರಿಕೊಂಡಿದ್ದು ವು. ಒಟ್ಟಿನ ಮೇಲೆ ಹೇಳ ಬಹು ಹೇನಂದರೆ, ಆಗ ಅವನ ಆಕಾರವು ಸಿಟ್ಟುಗೊಂಡ ಸಿಂಹ ದಂತ ಭೀಕರವಾಗಿದ್ದಿತು.