ಪುಟ:ಜಗನ್ಮೋಹಿನಿ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೈರವಾಷ್ಟ್ರದ ೪೩ + * *

  • ** * * * * *

• • • • • :

    • * * * *

ಈ ವ್ಯಕ್ತಿಯ ಹೆಸರನ್ನು ನಾವು ಇನ್ನೇಕೆ ರಹಸ್ಯವಾಗಿಟ್ಟು ಕೊಂಡಿರಬೇಕು? ಆಗಿನ ಕಾಲದಲ್ಲಿ ವಿಂಧ್ಯ ಪರ್ವತಕ್ಕೆ ಉತ್ತರ ದಲ್ಲಿಯ ನಾಡುಗಳ ಆಬಾಲವೃದ್ದರಿಗೂ ಸಿಂಹಸ್ವಪ್ನ ಪ್ರಾಯ ವಾಗಿದ್ದ, ಬೈರವಾನಂದನೆಂಬ ಹೆಸರು ಈ ಮಹಾಪುರುಷನನ್ನು ಸೇರಿ ಅನ್ವರ್ಥಕವಾಗಿದ್ದಿತು. ಇವನೇ ಆ ಸುಪ್ರಸಿದ್ಧನಾಗಿದ್ದ ಗಿರಿ ದುರ್ಗದ ಪಾಳೆಯಗಾರನು. ಅವನ ಇದಿರಿಗೆ ನಿಂತಿದ್ದ ಭಟರಲ್ಲಿ ಒಬ್ಬನು ಅವನಮುಖ್ಯ ಮಂತ್ರಿಯು; ಮತ್ತೊಬ್ಬನು ಅವನ ಸೇನಾನಾಯಕನು. ಭೈರವಾನಂದನು ಆ ಕಲ್ಲಿನ ಮೇಲೆ ಕುಳಿತುಕೊಂಡ ಕೂಡಲೇ 'ಆಲಸ್ಯ ವಿಳಂಬಗಳನ್ನು ನಾನು ಒಂದು ಕ್ಷಣವಾದರೂ ಸಹಿಸಲಾರೆನು ಎಂದಿಗೂ ಇಲ್ಲದ ಇಂದಿನ ವಿಳಂಬವು ನನಗೆ ಬಹು ಭಯಂಕರವಾಗಿದೆ' ಎಂದು ತನ್ನ ಸೊಂಟದಲ್ಲಿದ್ದ ಕರ ವಾಳವನ್ನು ಸಕ್ರನೆ ಕೈಗೆ ಸೆಳೆದುಕೊಂಡು ಎದ್ದು ನಿಂತು, ಗುಡಿ ಯಬಾಗಿಲ ಮುಂದೆ ನಿಂತಿದ್ದ ಆ ಜನರನ್ನು ನೋಡಿ 'ಓಹೋ! ಇಂದು ದೇವಿಗೆ ಕೋಣನ ಬಲಿಯೋ? ಕುರಿಕೋಣಗಳ ಬಲಿ ಇಲ್ಲ ದಿದ್ದರೆ ಈ ಸೋಮಾರಿಗಳಿಗೆ ಇಷ್ಟು ಚಟುವಟಿಕೆ ಎಲ್ಲಿ ಯದು? ' ಎಂದು ಹಿಂದಿರುಗಿ ತನ್ನ ಪರಿಜನರನ್ನು ನೋಡಿ “ಎಲೈ ! ಈ ದಿನ ಆ ತೊತ್ತಿನ ಮಕ್ಕಳು, ನೇಮಿಸಿದ ಕೆಲಸವನ್ನು ನೆರವೇರಿಸದೇ ಬಂದರೆ, ಅವರನ್ನೆಲ್ಲಾ ಒಂದೇ ಬಾರಿ, ಈ ದೇವಿಗೆ ಬಲಿಕೊಡಬಾರದೇಕೆ? ಎಂದು ಕೇಳಿದನು. ಪರಿಜನರು, ಒಕ್ಕಟ್ಟಾಗಿ, “ಅವರಿಗೆ ಹಾಗೆಯೇ ಮಾಡ ಬೇಕು; ಬುದ್ದಿ, ಹಾಗೆಯೇ ಮಾಡಬೇಕು !!” ಎಂದರು.