ಪುಟ:ಜಗನ್ಮೋಹಿನಿ .djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೈರವಾನಂದ, ೪೫ ན འ ་ ་འབའ་ ಭೈರವಾನಂದ, -ಅವನು ತನಗೆ ಚನ್ನಾಗಿ ತಿಳಿಯದ ವೃ ತಾಂತವನ್ನು ಎಂದಿಗೂ ಹೇಳುವುದಿಲ್ಲ, ಇಂತಹ ಮಾಯಾ ಪ್ರಯೋಗಗಳಲ್ಲಿ ಅವನಿಗೆ ಸಮಾನರು ನಮ್ಮಲ್ಲಿ ಮತ್ತಾರೂ ಇಲ್ಲ, ಆದುದರಿಂದಲೇ, ನಾನು ಅವನಿಗೆ ಈ ಕಾರ್ಯವನ್ನು ನೇಮಿಸಿರುವೆನು. ಅವರು ಈರೀತಿಯಾಗಿ ಮಾತನಾಡಿಕೊಳ್ಳುತಿರುವಾಗಲೇ ದಳಪತಿಯು ಹಿಂದಿರುಗಿ ಓಡಿಬಂದು 'ಒಡೆಯನೇ ಪಾರುಪತ್ಯಗಾ ರನು ಇಲ್ಲಿಯೇ ಬರುತ್ತಿರುವನು.' ಎಂದು ಬಿನ್ನವಿಸಿದನು ಭೈರವಾನಂದನು ತವಕದಿಂದ ಮುಂದರಿದು ಅವನನ್ನು ಇದಿರುಗೊಂಡನು, ಪಾರುಪತ್ಯಗಾರನು ಅವನನ್ನು ನೋಡಿದ ಕೂಡಲೇ ಥರಥರನೆ ನಡುಗುತ್ತ ಮಾತನಾಡದೆ ಮೂಕನಂತ ನಿಂತನು. ಭೈರವಾನಂದ.-ಅವನನ್ನು ನೋಡಿ, “ಎಲೈ ! ನಿನಗೇನು ಪಿಶಾಚಿಹಿಡಿಯಿತೋ ? ಅದುರುವಾಯು ಬಂದಿತೋ? ಈ ಕಳ್ಳ ವಿದ್ಯೆಗಳು ಹಾಗಿರಲಿ, ಇವುಗಳಿಗೆ ತಕ್ಕ ಚಿಕಿತ್ಸೆಯನ್ನು ನಾನು ಮಾಡಬಲ್ಲೆನು, ಒಳ್ಳೆಯದು ; ಜಯವೋ ಅಪಜಯವೋ ಜಾಗ್ರತೆಯಾಗಿ ಹೇಳು. " ಪಾರುಪತ್ಯಗಾರ. - ತೊದಲು ಡಿಯಿ೦ದ , “ಜಯವೂ ಅಲ್ಲ ; ಅಪಜಯವೂ ಅಲ್ಲ.” - ಭೈರವಾನಂದ-ಛೇ ! ಮುಟ್ಬಾಳಾ ! ಅಸಂಭವವನ್ನು ಬೊಗಳಬೇಡ, ನಡೆದಸಂಗತಿಯನ್ನು ವಿವರವಾಗಿ ಹೇಳು, ಹೆದ ಕುವಿಯೇಕೆ ?