ಪುಟ:ಜಗನ್ಮೋಹಿನಿ .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ••••••••••••••••

  • \ \

೧ \ " •••• ಜಗನ್ನೊಹಿನೀ, ಪಾರುಪತ್ಯಗಾರ.~ ಬುದ್ದೀ ! ಮೊನ್ನೆ ರಾತ್ರಿ, ಅಪ್ಪಣೆ ಯಾದಂತೆ, ನಾನು ಇಪ್ಪತ್ತು ಮೂರು ಮಂದಿ ಸವಾರರನ್ನು ಸಂಗಡ ಕರೆದುಕೊಂಡು ಕಾಲಕ್ಕೆ ಸರಿಯಾಗಿ ಹೋಗಿ ಮಹೋದಯದ ಮಾರ್ಗದಲ್ಲಿ ಹೊಂಚಿಕೊಂಡಿದ್ದೆ ನು, ಆ ರಾಜಪುತ್ರನು ತನ್ನ ಇಬ್ಬರು ಜತೆಗಾರರೊಡನೆ ಹೊತ್ತು ಹುಟ್ಟುವ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದನು. ಭೈರವಾನಂದ.ತನ್ನ ಮಂತ್ರಿಯ ಮೊಗವನ್ನು ನೋಡಿ “ನೋಡಿದೆಯಾ ! ಭೈರಾಗಿಯು ಸ್ಥಳವನ್ನೂ ಕಾಲವನ್ನೂ ಬರುವ ಜನರ ಸಂಖ್ಯೆಯನ್ನೂ ಎಷ್ಟು ಸಮಂಜಸವಾಗಿ ಹೇಳಿರುವನು ? ಎಂದು, “ಒಳ್ಳೆಯದು! ಮುಂದೆ ? ?? ಪಾರುಪತ್ಯಗಾರ - ಆಗ ನಾವೆಲ್ಲರೂ ಏಕಕಾಲದಲ್ಲಿ ಅವರನ್ನು ಮುತ್ತಿ ಮೊಟ್ಟ ಮೊದಲು ಅವರ ಕುದುರೆಗಳ ಕಾಲು ಗಳನ್ನು ಒಂದು ಕ್ಷಣಮಾತ್ರದಲ್ಲಿ ಕತ್ತರಿಸಿಬಿಟ್ಟೆವು. ಭೈರವಾನಂದ-ಭಾ ಪುರೆ ! ಮಝಭಾವು 1 ಆಮೇಲೆ ? ಆಮೇಲೆ ? - ಪಾರುಪತ್ಯಗಾರ.-ಅವರು ತಮ್ಮ ಕುದುರೆಗಳ ಸಂಗಡ ಕಕ್ಕಾ ಬಿಕ್ಕಿಯಾಗಿ ಕೆಳಕ್ಕೆ ಬಿದ್ದ ರು. ಕೂಡಲೇ, ನಾವು ಅವ ರನ್ನು ಮೇಲಕ್ಕೆ ಎಳಬಿಡದೇ ಒಬ್ಬೊಬ್ಬರಿಗೆ , ಏಳೆಂಟು ಮಂದಿ ಸುತ್ತಿಕೊಂಡು ಅವರನ್ನು ನಿರಾಯುಧರನ್ನಾಗಿ ಮಾಡಲು ಉಜ್ಜು ಗಿಸಿದೆವು. ಭೈರವಾನಂದ,~ ಶಾಬಾಸು ! ಶಾಬಾಸು ! ಒಳ್ಳೆಯ ಕೆಲಸ ವನ್ನು ಮಾಡಿದಿರಿ, ಆಮೇಲೆ ಆಮೇಲೆ ?