ಪುಟ:ಜಗನ್ಮೋಹಿನಿ .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

/* * * `yk ”-h y ಜಗನ್ನೊಹಿನೀ, ಪಾರು ಸತ್ಯಗಾರ.- ಒಡೆಯನೇ ಮನ್ನಿಸಬೇಕು; ಆಯು ಧಗಳನ್ನು ಉಪಯೋಗಿಸದೇ ಅವರನ್ನು ಉಪಾಯದಿಂದ ಕೈಸೆರೆ ಹಿಡಿದುಕೊಂಡು ಬರಬೇಕೆಂದು ಅಪ್ಪಣೆಯಾಗಿರಲಿಲ್ಲವೆ ? ಭೈರವಾನಂದ- ಓಹೋ ! ಅಹುದು ! ಅಮೇಲೆ ಏ ನಾಯಿತು ? ಪಾರುಪತ್ಯಗಾರ.-ನಾನೊಬ್ಬನು ಮಾತ್ರ ದೈವಗತಿಯಿಂದ ಹೇಗೋ ಅವರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡುಹೋದೆನು. ಹೋಗುವ ಸಂಭ್ರಮದಲ್ಲಿ ನನ್ನ ಪ್ರಿಯ ವಾದ ಕುದುರೆಯು ಒಂದು ದೊಡ್ಡ ಕೊರಕಲಿನೊಳಕ್ಕೆ ಬಿದ್ದು ಸತ್ತು ಹೋಯಿತು. ಭೈರವಾನಂದ-ನಿನ್ನ೦ತಹ ರಣಹೇಡಿಯನ್ನು ಹೊತ್ತು ಕೊಂಡು ಭೂಮಿಯಮೇಲೆ ಸುತ್ತುವುದಕ್ಕಿಂತಲೂ ಆ ಬಡಪ್ರಾ ಣಿಯು ಸತ್ತು ಹೋದುದೇ ಲೇಸಾಯಿತು. ನಾಚಗೆಗೆಟ್ಟವನೇ ಆಬಳಿಕ ನೀನು ಮಾಡಿದುದೇನು ? ಪಾರುಪತ್ಯಗಾರ, ಮೆತ್ತಗೆ ತೆಪ್ಪತ್ತು ಕೊಂಡು ಪರುಶು ರಾಮಕ್ಷೇತ್ರದ ಕಡೆಗೆ ಓಡಿದೆನು. ಭೈರವಾನಂದ-ಕತೆ ! ಯಮಲೋಕದ ಕಡೆಗೆ ಓಡಬಾರದಾಗಿತ್ತೆ ? ನೀನತ್ತ ಕಡೆಗೆ ಓಡಿದುದೇಕೆ ? ಪಾರುಪತ್ಯಗಾರ.-ಬುದ್ದೀ, ನಾನು ಅಲ್ಲಿಗೆ ಬುದ್ದಿ ಗೆಟ್ಟು ಓಡಲಿಲ್ಲ. ಭೈರವಾನಂದ-ಮತ್ತೇತಕೆ ಓಡಿದೆ ? ಜಾಗ್ರತೆಯಾಗಿ ಭೂಗಳು.