ಪುಟ:ಜಗನ್ಮೋಹಿನಿ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mw++++~~vvvvv ೫೦ ಜಗನ್ನೊಹಿನೀ, ಬಟ್ಟೆ ಬರೆಗಳನ್ನು ಕಿತ್ತು ಕೊಂಡು ನಾನು ದಾಸೈಯ್ಯನ ವೇಷ ವನ್ನು ಹಾಕಿಕೊಂಡು ಆ ರಾಜಪುತ್ರರ ಇದಿರಿಗೆ ಹೋದೆನು. ಆಗ ಹೊತ್ತು ಬೀಳುವ ಹೊತ್ತಾಗಿದ್ದು ದರಿಂದ, ಅವರು ನಾನು ಬಗೆದಿದ್ದಂತೆಯೇ ತವಕದಿಂದ ನನ್ನನ್ನು ಮಹೋದಯಕ್ಕೆ ದಾರಿ ಕೇಳಿದರು, ನಾನು ಅವರಿಗೆ ಬೋನಿನ ದಾರಿಯನ್ನು ತೋರಿಸಿ ದೆನು. ಅವರು ಆ ದಾರಿಯಲ್ಲಿ ಕಣ್ಣಿಗೆ ಕಾಣದಷ್ಟು ದೂರ ಹೋದಬಳಿಕ ನಾನು ತಕ್ಕ ಸಿಬ್ಬಂದಿಯೊಡನೆ ಗಂಧರ್ವ ಕುಮಾ ರಿಯ ಸಹಾಯಕ್ಕೆ ಹೋದೆನು. - ಭೈರವಾನಂದ- -ಒಳ್ಳೆಯದು! ಇದಾದರೂ ನೆರವೇರಿತೋ? ಪಾರುಪತ್ಯಗಾರ.- ಒಡೆಯ ನೇ 1 ಗಂಧರ್ವ ಕುಮಾರಿಯ ಚಾತುರ್ಯವು ಬಣ್ಣಿಸಲು ಅಸದಳವಾಗಿದೆ. ಆಹಾ ! ಆ ಚದುರೆ ಯು ಆ ಮಹಾವೀರರು ತಾವಾಗಿ ತಾವೇ ಬೋನಿನೊಳಕ್ಕೆ ಹೋಗುವ ಹಾಗೆ ಮಾಡಿದಳು. ಭೈರವಾನಂದ-ಶಾಬಾಸು ! ಶಾಬಾಸು ! ! ನಿನಗಿಂತ ಲೂ ಆ ಹೆಂಗಸೇ ಮೇಲು. ಪಾರುಪತ್ಯಗಾರ.ಆದರೆ ಫಲವೇನು? ಹಾವನ್ನು ಹೊ ಡದು ಹದ್ದಿಗೆ ಹಾಕಿದಂತಾಯಿತು. ಭೈರವಾನಂದ-ಹಾಗಂದರೇನು ? ಪಾರುಪತ್ಯಗಾರ, -ಒಡೆಯನೇ ! ನಾವು ಬೋನನು ಸೇತುವೆಯ ಮೇಲೆ ಸಾಗಿಸಿಕೊಂಡು ಬರುತ್ತಿದ್ದಾಗ ಆ ಸೇತು ವೆಯು ಅಕಸ್ಮಾತಾಗಿ ಒಡೆದುಹೋಯಿತು. ಬೋನೂ ಅದರ ಹಿಂದೆಮುಂದೆ ಬರುತ್ತಿದ್ದ ಪಂಜಿನವರೂ ಬೋನಿಗೆ ಕಟ್ಟಿದ್ದ ಕೋಣಗಳೂ ಬೋನನ್ನು ಹೊಡೆಯುತ್ತಿದ್ದವರೂ ಪ್ರವಾಹದ