ಪುಟ:ಜಗನ್ಮೋಹಿನಿ .djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೈರವಾನಂದ. ೫೧ ಪಾಲಾಗಿಹೋದರು. ಇಷ್ಟು ಹೊತ್ತಿಗೆ ಆ ಸೇತುವೆಯ ಕಲ್ಲು ಗಳು ಕೂಡ ಸಮುದ್ರಕ್ಕೆ ಸೇರಿಹೋಗಿರಬಹುದು. ಭೈರವಾನಂದ-ಕೋಪೋದ್ದೀಪಿತನಾಗಿ, ತನ್ನ ಮಂತ್ರಿ ಯ ಕಡೆಗೆ ತಿರುಗಿ “ಎಲೈ ! ಈ ಅನರ್ಥ ಪರಂಪರೆಗೆ ಕಾರಣವೇ ನಿರಬಹುದು. - ಮಂತ್ರಿ.- ಒಡೆಯನೇ ! ಈ ಕಾರ್ಯದಲ್ಲಿ ದೈವವು ನಮಗೆ ಪ್ರತಿಕೂಲವಾಗಿರುವ ಹಾಗೆ ಕಾಣುತ್ತದೆ ; ಇಲ್ಲ ದಿದ್ದರೆ, ಪ್ರಯತ್ನವು ವಿಫಲವಾಗುವುದಕ್ಕೆ ಕಾರಣವಿಲ್ಲ. ಭೈರವಾನಂದ-ರೇಗಿ ಒಳೆಯು ಮಂತಣ ! ದೈವ ವೆಂಬುದೊಂದು ಇಲ್ಲದಿದ್ದರೆ, ಲೋಕದ ಅವಿವೇಕಿಗಳು ತಮ್ಮ ತಪ್ಪುಗಳನ್ನು ಯಾರ ಮೇಲೆ ಹಾಕುತ್ತಿದ್ದರೋ ? ನಿನ್ನಂತಹ ದೈವಜ್ಞ ಶಿಖಾಮಣಿಯ ಉಪದೇಶವನ್ನು ಕೇಳಿದರೆ, ಲೋಕದಲ್ಲಿರುವ ಮಹಾವೀರರೆಲ್ಲರೂ ಕತ್ತಿಗಳನ್ನು ಬೀಸಾ ಡಬೇಕಾಗುತ್ತದೆ. ಎಂದು ಅಲ್ಲಿದ್ದವರನ್ನೆಲ್ಲಾ ನೋಡಿ, “ಒಳ್ಳೆಯದು ಪ್ರಕೃತ, ನೀವೆಲ್ಲ ರೂ ನಿಮ್ಮ ದೈವವಾದವನ್ನು ಮರೆತು, ಮೊದಲು ಮಂತಣ ಮಾಡಿದ್ದಂತೆ, ಈ ಕಾರ್ಯವು ಕೈಗೂಡುವವರೆಗೂ ನಿಮ್ಮ ನಿಮ್ಮ ಕೆಲಸಗಳನ್ನು ಬಹು ಜಾಗ ರೂಕತೆಯಿಂದ ಮಾಡುತ್ತಿರಬೇಕು, ಜೋಕೆ ! ಆ ರಾಜಪ್ಪ ತರು ಪ್ರವಾಹಕ್ಕೆ ಬಿದ್ದು ಹೋದಮಾತ್ರಕ್ಕೆ ಅವರು ಸತ್ತು ಹೋದರೆಂದು ನೀವು ಸರ್ವಥಾ ತಿಳಿಯಲಾಗದು, ನಾನು ಈ ಕಾರ್ಯವನ್ನು ಸಾಧಿಸದೇ ಎಂದಿಗೂ ಬಿಡುವುದಿಲ್ಲ, ಇನ್ನು ನೀವು ನಿಮ್ಮ ನಿಮ್ಮ ಕೆಲಸಗಳಿಗೆ ಹೋಗಿರಿ; ನಾನು ಆ ಬೈರಾ ಗಿಯನ್ನು ನೋಡಿರುವೆನು. ಎಂದು ಹೊರಟುಹೋದನು.