ಪುಟ:ಜಗನ್ಮೋಹಿನಿ .djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಗಮ. ೫೩ • , * * * * * * * * * * ಕುಶಾವತೀನದಿಯ ದಡದ ಮೇಲೆ ಸುಪ್ರಸಿದ್ದ ವಾದ ರಾಜ ಧಾನಿಯಾಗಿದ್ದ ಮಹೋದಯವೆಂಬ ಪಟ್ಟಣದಲ್ಲಿ ಮಣಿಕರ್ಣಿಕ ಘಟ್ಟದ ಬಳಿ ವಿಶ್ವಕರ್ಮನಿಂದ ಕಟ್ಟಲ್ಪಟ್ಟಿದ್ದ ಆದಿನಾರಾಯಣ ಸ್ವಾಮಿಯ ದೇವಾಲಯದ ಮಹಾದ್ವಾರದ ಮುಂದುಗಡೆಯ ಸೋ ಪಾನವನ್ನು ಪ್ರವಾಹವು ಹತ್ತಿದರೆ ಅಲ್ಲಿಯ ಜನರು ಆಗ ಪೂರ್ಣ ಪ್ರವಾಹಮಹೋತ್ಸವವನ್ನು ಮಾಡುತ್ತಿದ್ದರು. ಬೆಳಿಗ್ಗೆ ಸುಮಾರು ಆರು ಗಂಟೆಯ ಸಮಯ ವಾಗಿದೆ. ಮೇ ಘಮಂಡಲವು ಏಕಕಾಲದಲ್ಲಿ ಭೂ ಮಂಡಲಕ್ಕೆ ಇಳಿಯುತ್ತದೆ ಯೋ ಎಂಬಂತೆ ಆಕಾಶವನ್ನು ಆವರಿಸಿಕೊಂಡಿದ್ದ ಹಿಮದ ಸಂದ ಣಿಯನ್ನು ದಿವಾಕರನ ಕಿರಣಗಳು ಪ್ರತಿಭಟಿಸುತ್ತಿದ್ದುವು. ಈ ವೇಳೆಯಲ್ಲಿ ಗಂಗೆಯು ತನ್ನ ಜನ್ಮಸ್ಥಾನವಾದ ವಿಷ್ಣು ಪಾದವನ್ನು ಸೇವಿಸುವುದಕ್ಕೆ ಹೋಗುತ್ತಿರುವಳೋ ಎಂಬಂತೆ, ಕುಶಾವತಿಯು ಮುತ್ತಿನ ಪದಕ ಗಳಂತೆ ಕಣ್ಮಳಿಸುತ್ತಿದ್ದ ಬಿಳಿ ಯ ನೊರೆಯಿಂದ ಕೂಡಿದ ಪೊಂಬಣ್ಣದ ಉತ್ತುಂಗತರಂಗ ಮಲೆಯಿಂದ ಅಲಂಕೃತಳಾಗಿ ಆದಿನಾರಾಯಣನ ಆಲಯದ ಮಹಾದ್ವಾರದ ಸೋಪಾನವನ್ನು ಹತ್ತುತ್ತಿದ್ದಳು. ಅಷ್ಟು ಹೊತ್ತಿಗಾಗಲೇ ಮ ಹೊ ದಯದಲ್ಲಿ ಪೂರ್ಣ ಪ್ರವಾಹ ಮಹೋತ್ಸವಕ್ಕೆ ಉಪಕ್ರಮವಾಗಿದೆ. ಪುರಜನರೆಲ್ಲ ರೂ ಗಂಧಫವಾದಿ ಪೂಜಾಸಾಮಗಿ ಗಳಿಂದ ಸಮೇತರಾಗಿ ಸಡಗರದಿಂದ ನದಿಯ ತಡಿಗೆ ತರಂಗ ತರಂಗವಾಗಿ ಬರುತ್ತಿದಾರೆ. ಮಹಾರಾಜನು ಗಂಗೆಯ ಸೇವೆಗೆ ಬರುತ್ತಾನೆಂದು ಅರ ಮನೆಯ ಉದ್ಯೋಗಸ್ಥರೆಲ್ಲ ರೂ ತಮ್ಮ ತಮ್ಮ ಕಾರ್ಯಗಳಲ್ಲಿ ಅಪಮತ್ತರಾಗಿ ದಾರಿನೋಡುತ್ತ ಆದಿನಾರಾಯಣಸಾಮಿಯ