ಪುಟ:ಜಗನ್ಮೋಹಿನಿ .djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಗಮ. ೫೫ - * * * * * ಸಿಲುಕಿದ ಪ್ರಾಣಿಗಳನ್ನು ದಡಕ್ಕೆ ಸಾಗಿಸಿಕೊಂಡು ಹೋಗುವು ದಕ್ಕೆ ತಕ್ಕ ಅಂಬಿಗರ ನೆರವಿಯೊಡನೆ ಸರಿಗೊಳಿಸಿದ್ದ ಹಲವು ಹರಗೋಲುಗಳು ತಿರುಗಾಡುತ್ತಿದ್ದುವು. ನದಿಯ ಕರೆಯ ಮೇಲೆ ಆಪದ್ಧ ತರಾದವರನ್ನು ಆದರಿಸುವ ಸಲುವಾಗಿ ದೊಡ್ಡದೊಂದು ಗುಡಾರವು ಹಾಕಲ್ಪಟ್ಟಿದಿತು. ಇದರಲ್ಲಿ ಅರಮನೆಯ ವೈದ್ಯರು ಮಹಾರಾಜನ ಅಪ್ಪಣೆಯ ಮೇರಿಗೆ ಬೇನೆಯವರ ಬೇನೆಗಳನ್ನು ಅರಿತು ಅ ತ್ಯಭಿಮಾನದಿಂದ ಚಿಕಿತ್ಸೆ ಮಾಡುತ್ತಿದ್ದರು. ಇದಲ ದ ಬಲೆಗೆ ಸಿಲುಕಿದ ಹುಲಿ, ಕರಡಿ ಮುಂತಾದ ಕಾಡುಮೃಗಗಳನ್ನು ಕೂಡಾ ಬಹು ಪ್ರಯತ್ನದಿಂದ ಹಿಡಿದು ದಡಕ್ಕೆ ತಂದು ಕಾಪಾಡಿ ಅರಮನೆಯ ಉದ್ಯಾನದಲ್ಲಿ ಇರಿಸು ತಿದ್ದರು. ಮಹಾರಾಜನು ಗಂಗೆಯ ಪೂಜೆಯನ್ನು ತೀರಿಸಿಕೊಂಡು ಸತಿಸುತರೊಡನೆ ತವಕದಿಂದ ಡೇರೆಗೆ ಬಂದು ಜಲದೊಷದಿಂದ ಸಂಕಟ ಪಡುತ್ತಿದ್ದವರನ್ನು ಉಪಚರಿಸತೊಡಗಿದನು. ಅಲ್ಲಿ ನಾಲ್ಕು ಮಂದಿ ಮಾತ್ರ ಜೀವಂತರಾಗಿದ್ದರು. ಅವ ರಲ್ಲಿ ಮೂವರು ರಾಜಕುಮಾರರಂತೆ ಸುಕುಮಾರರಾಗಿದ್ದಾ ಗ್ರೂ ಕಷ್ಟ ಸಹಿಷ್ಣುಗಳಾಗಿಯ ಮಹಾಪ್ರವಾಹಕ್ಕೆ ಬಿದ್ದು ತೊಳಲಿ ಬಳಲಿ ಬಸವಳಿದು ಬಣ್ಣಗೆಟ್ಟಿ ದ್ದಾ . ವರ್ಚಸ್ವಿಗಳಾಗಿಯ ಕಂಗೆಟ್ಟು ಕಳವಳಿಸುವದಕ್ಕೆ ಕಾರಣವಿದ್ದಾಗ್ಯೂ ಸಮಾ ಹಿತ ಚಿತ್ತರಾಗಿಯ ಕಾಣುತ್ತಿದ್ದರು. ಬಹು ಸಂಪತ್ಸಮೃದ್ದ ವಾದ ಆ ಮಹೋದಯದ ಮೇಲೆ ಆಗಿನ ಕಾಲದಲ್ಲಿ ಅನೇಕರಿಗೆ, ಕಣ್ಣಿದ್ದಿತು, ಆಗಾಗ್ಗೆ ಅಲ್ಲಲ್ಲಿ