ಪುಟ:ಜಗನ್ಮೋಹಿನಿ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಗಮ. ೫೭

      • ೪ `vy ಕ\ \ " M*Yy *** FY+ * * * * * * * * * * * * *

ರಾಜ-ಕೊಂಕಣವನ್ನು ಸುತ್ತಿಕೊಂಡು ಮೈಲಾರಕ್ಕೆ ಹೋದಹಾಗಾಯಿತು. ನೇರವಾದ ರಾಜಮಾರ್ಗವನ್ನು ಬಿಟ್ಟು ನೀವು ಆ ಕೆಟ್ಟ ದಾರಿಯನ್ನು ಹಿಡಿದುದೇಕೆ ? ರಾಜಕುಮಾರ.-ಆ ದಾರಿಯು ನಿರಪಾಯ ವಾದುದೆಂತ ಲೂ ಸವಿಾಪವಾದುದೆಂತಲೂ ನನಗೊಬ್ಬ ತಪಸ್ವಿಯು ಹೇಳಿದನು. ರಾಜ-ಆ ದಾರಿಯು ಕೇವಲ ತಪಸ್ವಿಗಳಿಗಲ್ಲ ದೇ ಮತ್ತಾ ರಿಗೂ ಅನುಕೂಲವಾದುದಲ್ಲ. ರಾಜಕುಮಾರ.-ಸಾಧುಗಳು ಸರ್ವ ಭೂತಗಳ ವಿಷಯ ದಲ್ಲಿಯೂ ತಮ್ಮ ಉಪಮಾನದಿಂದಲೇ ವ್ಯವಹರಿಸುವುದು ಸ್ವಭಾವ ವಿರುದ್ಧ ವಾದುದೇನೂ ಅಲ್ಲ. ರಾಜ, -ಯುವಕನೇ ಆಧರ್ಮವು ಕಲಿಯುಗದಲ್ಲಿ ಬಹು ಮಟ್ಟಿಗೆ ಮಲಿನವಾಗುತ್ತಾ ಬರುತ್ತಿದೆ. ಆದರೆ, ಯಾರಿಗೆಯಾವ ಸಾಧುವಿನ ಸಾಧುತ್ವದ ವಿಷಯದಲ್ಲಿ ವಿವಾದವಿಲ್ಲ ವೆಂದು ನಂ ಬುಗೆಯುಂಟೋ ಅವರು ಆ ಸಾಧುವಿನ ಮಾತನ್ನು ಸಾಧಾರಣ ವಾಗಿ ನಂಬಬಹುದು. ರಾಜಕುಮಾರ.-ಸಾಧುವೇ ಆಗಲಿ ಅಸಾಧುವೇ ಆಗಲಿ, ಯಾವಕಾಲದಲ್ಲಿ ಯಾದರೂ ಕರ್ಮಕ್ಕೆ ವಿರುದ್ಧ ವಾದ ಸಾಹಾಯ್ಕ ವನ್ನು ಮಾಡಲಾರನು. ರಾಜ, -ಅದು ಶಾಸ್ತ್ರಸಮ್ಮತವಾದ ಮಾತು, ಒಳ್ಳೆಯದು! ಮುಂದೆ ? ರಾಜಕುಮಾರ.-ಆ ದಾರಿಯಲ್ಲಿ ಯಾರೋ ಅನಾರ್ಯರು ನಮ್ಮನ್ನು ಮೋಸಗೊಳಿಸಿ ಕಬ್ಬಿಣದ ಬೋನಿನೊಳಕ್ಕೆ ಸಿಕ್ಕಿಸಿ ಕೊಂಡು ಯಾವದೋ ಒಂದು ಸೇತುವೆಯ ಮೇಲೆ ಎತ್ತಲೋ