ಪುಟ:ಜಗನ್ಮೋಹಿನಿ .djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಗಮ. ೫ಳ wwxv • •••••• YYY** * * YYY • ••••• ಬಲೆಯ ಹತ್ತಿರಕ್ಕೆ ಬಂದೆನು, ಆವೇಳೆಗೆ ಬೆಳಗೂ ಆಯಿತು ; ನನ್ನಂತೆಯೇ ತೊಲೆಗಳ ಮೇಲೆ ಏರಿಕೊಂಡು ಎಂದಿನಂತೆ ನನ್ನ ಹಿಂದೆಯೇ ಬರುತ್ತಿದ್ದ ನನ್ನ ಮಿತ್ರರೂ ಕಣ್ಣಿಗೆ ಬಿದ್ದರು. ರಾಜ-ನಿಮ್ಮ ಬಂಧನಕ್ಕಿಂತಲೂ ವಿಮೋಚನೆಯು ಐಂದ್ರ ಜಾಲಿಕದಂತೆ ಬಲು ಸೋಜಿಗವಾಗಿದೆ. “ವನದಲ್ಲಿಯ ರಣ ರಂಗದಲ್ಲಿ ಯ ಶತ್ರು, ಜಲ, ಅಗ್ನಿ, ಇವುಗಳ ಮಧ್ಯದಲ್ಲಿ ಯ ಪುರಾಕೃತವಾದ ಪುಣ್ಯವು ಕಾಪಾಡುತ್ತದೆ' ಎಂಬ ಶಾಸ್ತ್ರಕ್ಕೆ ನಿಮ್ಮ ಚರಿತ್ರೆಯೊಂದು ನಿದರ್ಶನವಾಗಿದೆ. ನಿಮ್ಮ ಬಂಧವಿಮೋಚ ನೆಗೆ ದೈವದ ಸಹಾಯದ ಹೊರತು ಬೇರೆ ಕಾರಣವಾವುದೂ ಕಾಣು ವುದಿಲ್ಲ, ಇಂ ತಹ ದೈವಾನುಗ್ರಹಕ್ಕೆ ಪಾತ್ರರಾದ ನಿಮ್ಮನ್ನು ಕುರಿತು ಹಲವು ವಿಷಯಗಳನ್ನು ವಿಚಾರಮಾಡಬೇಕೆಂದು ನನ್ನ ಮನವು ಆತುರಪಡುತ್ತಿದೆ ; ಆದರೆ, ವಿಧಿವಶದಿಂದ ಕಳವಳ ಗೊಂಡಿರುವ ನಿಮ್ಮನ್ನು ಬೇಡದ ಪ್ರಶ್ನೆ ಗಳಿಂದ ಪ್ರಯಸಬಡಿಸು ವುದು ಯುಕ್ತವಲ್ಲ. ಆದುದರಿಂದ ನಾನಿನ್ನು ಹೆಚ್ಚು ಮಾತ ನಾಡದೇ ನಿಮ್ಮ ಕೈಂಕರ್ಯಕ್ಕೆ ಸಿದ್ದ ನಾಗುವೆನು, ನಿಮ್ಮ ಪ್ರಕೃತ ಕಾರ್ಯಕ್ಕೆ ಈ ದಾಸನಿಂದ ಏನಾದರೂ ಉಪಯೋಗವಾಗುವು ದಾಗಿದ್ದರೆ ಅಪ್ಪಣೆಯಾಗಬಹುದು. ರಾಜಕುಮಾರ.-ಆರ್ಯನೇ ಈ ಸಂಗತಿಗಳ ಪರಂಪರೆ ಯು ನನಗೆ ಸ್ವಪ್ನದಂತೆ ಕಾಣುತ್ತಿದೆ. ಆದುದರಿಂದ ನಾವು ಈಗ ಯಾವ ದೇಶಕ್ಕೆ ಬಂದು ಸೇರಿರುವೆವೋ ? ಯಾವ ಮಹಾನು ಭಾವನ ಸಂಗಡ ಮಾತನಾಡುವ ಗೌರವಕ್ಕೆ ಪಾತ್ರರಾಗಿರುವೆವೋ? ಯಾವ ಸತ್ಕಾರಿಯ ಆತಿಥ್ಯವನ್ನು ಅನುಭವಿಸುತ್ತಿರುವೆವೋ ? ಕರುಳಿಸಿ ಹೇಳಿ ನನ್ನ ಬುದ್ಧಿಯನ್ನು ಬೆಳಗ ಮಾಡಬೇಕು.