ಪುಟ:ಜಗನ್ಮೋಹಿನಿ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಗಮ. ೬೧ Ars * * * * * . -

  • * * * * * * * *

`ಸಿ ರಾಜಕುಮಾರ.-ಸ್ವಾಮಿ! ನಾನು ಈ ಪಟ್ಟಣಕ್ಕೆ ಈಶಾ ವ್ಯದಲ್ಲಿರುವ ಧರ್ಮಾರಣ್ಯದಲ್ಲಿ ವಾನಪ್ರಸ್ಥಾಶ್ರಮದಲ್ಲಿ ರುವ ಮಹಾನುಭಾವರಾದ ಕುಶನಾಭರ ಸನ್ದರ್ಶನಕ್ಕೆ ಹೋಗಬೇಕಾಗಿದೆ. ಆದುದರಿಂದ ನಮಗೆ ಅಲ್ಲಿಗೆ ಹಾದಿ ತೋರಿಸುವುದಕ್ಕೆ ಯಾರನ್ನಾ ದರೂ ಒಬ್ಬ ಸಹಾಯಕನನ್ನು ಕರುಣಿಸಿ ಕಳುಹಿಸಿಕೊಡಬೇಕು. ಮಹಾರಾಜನು ತನ್ನ ಮಂತ್ರಿಯನ್ನು ನೋಡಿ ' ಎಲೈ | ಈ ಕುಮಾರರು ಸುರಕ್ಷಿತರಾಗಿ ಕುಶನಾಭರ ಆಶ್ರಮಕ್ಕೆ ಹೋಗಿ ಸೇರುವುದಕ್ಕೆ ತಕ್ಕ ಏರ್ಪಾಡನ್ನು ಒಡನೆಯೇ ಮಾಡಿಸತಕ್ಕದ್ದು ?' ಎಂದು ಬೆಸಸಿ ಮುಂದರಿದು ಅಲ್ಲಿ ಬಲೆಯಲ್ಲಿ ಸಿಕ್ಕಿ ದ್ದ ಮತ್ತೊಬ್ಬ ಬೇನೆಯ ವನ ಸನಿಹಕ್ಕೆ ಹೋದನು. - ಇವನು ಕಾಡಮನುಷ್ಯನಂತೆ ಕುಳ್ಳಾಗಿಯ ಕಪ್ಪಾಗಿಯ ವಿಕಾರವಾಗಿಯೂ ಇದ್ದನು. ಇವನ ತಲೆಗೂ ಕೈ ಕಾಲುಗಳಿಗೂ ಬಹಳ ಪೆಟ್ಟು ತಗುಲಿದ್ದಿ ತು. ಗಾಯಗಳಿಗೆಲ್ಲಾ ವೈದ್ಯರು ಮದ್ದು ಹಾಕಿ ಬಿಳಿಯ ಅರಿವೆಗಳನ್ನು ಕಟ್ಟಿದ್ದರು. ಇವನು ಮೈಯ್ಯ ಮೇಲೆ ಅಷ್ಟು ಗಾಯಗಳಾಗಿದ್ದಾ ಗ್ರೂ ಗೆಲುವಾಗಿಯೇ ಇದ್ದನು; ದೃಷ್ಟಿಯನ್ನು ಬೇರೆ ಕಡೆಯಲ್ಲಿ ಇಟ್ಟಿದ್ದಾಗ್ಯೂ ಮಹಾರಾಜನಿಗೂ ರಾಜಕುಮಾರನಿಗೂ ನಡೆದ ಸಂಭಾಷಣೆಯನ್ನು ಗುಟ್ಟು ಗಳ್ಳನಂತೆ ಕಿವಿಗೊಟ್ಟು ಕೇಳುತ್ತಿದ್ದನು. ಇವನನ್ನು ನೋಡಿ ಮಹಾರಾಜನು 'ಏನೈಯ್ಯಾ, ! ನೀನು ಆರೋಗ್ಯವಾಗಿರುವಿಯಾ ? ಕುಳ್ಳ.- ನಾನು ಸತ್ತು ಮತ್ತೆ ಹುಟ್ಟಿದಹಾಗಾಯಿತು, ಬುದ್ದಿ | ಮಲಯಕೀತು-ನೀನಾರು ?