ಪುಟ:ಜಗನ್ಮೋಹಿನಿ .djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ ಜಗನ್ನೊ ಹಿನೀ, MMಅನಂತ್ ೦೨:೦೨, ೨೦ ಫೆಬ್ರುವರಿ ೨೦೧೮ (UTC) v+ y//*//v/svvvvv ನಮ್ಮ ವೀರಮುನೀರ ಕ್ಷತ್ರಿಯೊ ಚಿತವಾದ ವೀರ್ಯಶರ್ಯಾದಿ ರಜೋಗುಣಗಳೆಲ್ಲ ವೂ ಎಲ್ಲಿಯೋ ಅಡಗಿ ಹೋದುವು; ಕೇವಲ ತಪಸ್ವಿಗಳಿಗೆ ಉಚಿತವಾದ ಭಕ್ತಿ ವೈರಾಗ್ಯಾದಿ ಸಾತ್ವಿಕಗುಣ ಗಳು ಪ್ರಾಬಲ್ಯವನ್ನು ಹೊ೦ದಿದುವು. ಇದೇನಾಶ್ಚರ್ಯವಲ್ಲ ; ಏತಕ್ಕೆಂದರೆ, ತೀರ್ಥ ಕ್ಷೇತ್ರಾದಿಗಳಲ್ಲಿ ಯ ಮಹಾತ್ಮರ ವಾತಾ ವರಣದಲ್ಲಿಯ ದುರಾಚಾರಿಗಳು ಆಚಾರಶೀಲರಾಗುವುದೂ ಲೋ ಭಿಗಳು ಔದಾಗ್ಯಶಾಲಿಗಳಾಗುವುದೂ ನಾಸಿಕ್ಯರಿಗೆ ಆಸ್ತಿ ಕ್ಯ ಬುದ್ದಿ ಯುಂಟಾಗುವುದೂ ನಿರ್ದಯರಾದವರು ದಯಾಳುಗಳಾಗು ವುದೂ ಸಾಮಾನ್ಯವಾಗಿ ಎಲ್ಲರ ಅನುಭವದಿಂದ ತಿಳಿಯ ಬಹು ದಾದಷ್ಟು ಸಹಜವಾಗಿಯ ಶಾಸ್ತ್ರಸಿದ್ಧ ವಾಗಿಯೂ ಇವೆ. ಆದು ದರಿಂದಲೇ ಆರ್ಯರು ತೀರ್ಥಕ್ಷೇತ್ರಗಳ ಯಾತ್ರೆಯ ನೂ ಮಹಾತ್ಮರುಗಳ ಸಂದರುಶನವನ್ನೂ ಅದ್ಯಾಪಿ ಆದರಾತಿಶಯದಿಂದ ಮಾಡುತ್ತಿರುವರು. ಆರಾತ್ರಿ ವೀರಮುಖರು ಮಾರ್ಗಾಯಾಸದಿಂದ ಅಷ್ಟು ಶ್ರಾಂತರಾಗಿದ್ದಾಗ , ಆ ಪರ್ಣಶಾಲೆಯ ಹಟಿಯೋಗ ವನ್ನು ಅಭ್ಯಾಸಮಾಡುತ್ತಿದ್ದ ಬ್ರಹ್ಮಚಾರಿಗಳನ್ನೂ ಸಾಮ ಗಾನ ವನ್ನು ಮಾಡುತ್ತಿದ್ದ ಬಾಲ ವಟು ಗಳನ್ನೂ ನೋಡುತ್ತಾ ನಿದ್ರೆ ಯನ್ನು ಮರೆತುಹೋದರು. ಮಾರನೆಯ ದಿನ ವೀರನು ಭೋಜನಾನಂತರ ತನ್ನ ಜತ ಗಾರರೊಡನೆ ನಿಯಮಿತವಾದ ಕಾಲಕ್ಕೆ ಸರಿಯಾಗಿ ಕುಶನಾಭರ ಸಂದರುಶನಕ್ಕೆ ಸಮಯವನರಿತು ಹೋದನು. ಅದು ಆ ಮಹಾತ್ಮರಿಗೆ ವಿರಾಮ ಕಾಲವಾದುದರಿಂದ ಅವ ರಿ' ಆಗತಾನೆ ಎ೦ರನ ನೆನಪು ಬಂದಿದ್ದಿ ತು, ವೀರಮುಖ್ಯರು ಸನಿಹಕ್ಕೆ ಹೋಗಿ ಸಾಷ್ಟಾಂಗ ನಮಸ್ಕಾರವನ್ನು ಮಾಡಿದರು.