ಪುಟ:ಜಗನ್ಮೋಹಿನಿ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿನಯ ಪ್ರಕರಣ. ರಹಸ್ವಾರ್ಥಿ ಸ್ವೀ, ಟಕನ. ಈಗಿನ ಕಾಲದಲ್ಲಿ ಹಲವು ಮೈಗಳ್ಳರು ಮಹಾತ್ಮರಂತ ನಟಿಸುತ್ತಾ ಸಾತ್ವಿಕರನ್ನು ಮೋಸಗೊಳಿಸಿ ತಮ್ಮ ಜೀವನವನ್ನೂ ಗೌರವವನ್ನೂ ಅನಾಯಾಸವಾಗಿ ಜರಗಿಸಿಕೊಳ್ಳುತಿರುವರು. ಮಹಾ ತ್ಮರು ತಮ್ಮ ಮಾ ಹಾಳ್ಮೆಯನ್ನು ಎಂದಿಗೂ ಅಂಗಡಿ ಇಡು ವುದಿಲ್ಲ, ಅವರು ಒಹುಶಃ ಜನಗಳಿದ್ದೆಡೆಯಲ್ಲಿ ಇರುವುದೇ ಇಲ್ಲ ... ಒಂದು ವೇಳೆ ಇದ್ದರೂ, ಏನೂ ಅರಿಯದ ಮರುಳರಂತ ಯ ಮಂಕರಂತೆಯ ಕಾಣುತ್ತಿರುವರು ; ತಮ್ಮ ದಿವ್ಯದೃಷ್ಟಿ ಯನ್ನು ೮ ಕಿಕ ವ್ಯವಹಾರಕ್ಕಾಗಿ ಸಾಮಾನ್ಯವಾಗಿ ಉಪಯೋಗಿಸಿ ಕೊಳ್ಳುವುದಿಲ್ಲ. ಮಹಾತ್ಮರಾದ ಕುಶನಾಥರು ಸಾಮಾನ್ಯರಂತೆ ವೀರಮುಖ್ಯ ರನ್ನು ಕೊಂಚ ಹೊತ್ತು ದಿಟ್ಟಿ ಸಿನೋಡಿ ವೀರನನ್ನು ಕುರಿತು 'ಆರಿವರೀರ್ವರು ? ಎಂದು ಅವನ ಜತೆಗಾರರನ್ನು ನೋಡಿದರು. ವೀರ:-ಕೈಎತ್ತಿ ತನ್ನ ಮೊದಲನೆಯ ಸವಾರನನ್ನು ತೋರಿ' ಮಹಾಸ್ಯಾ ಖಾ, ಈತನು ನಮ್ಮ ಮಂತ್ರಿಯಾದ ಸೋಮ ದತ್ತನ ಮಗನು; ಇವನ ಹೆಸರು ಸುಮಂತ್ರ; ಇವನೇ ನಮ್ಮ ಸೇನಾನಾಯಕನು, ಎಂದು ಎರಡನೆಯ ಸವಾರನನ್ನು ತೋರಿ “ ಈತನು ನಮ್ಮ ನ್ಯಾಯಾಧಿಪತಿಯ ಮಗನು; ಇವನ ಹೆಸರು ವಿಕ್ರಮಸಿಂಹ, ಈತನು ನನ್ನ ಪರಮಾಪ್ತನಾದ ಸ್ನೇಹಿ ತನು. ಇವರೀರ್ವರೂ ನನಗೆ ಮೈಗಾವಲಗಿ ಬಂದಿರುವರು.