ಪುಟ:ಜಗನ್ಮೋಹಿನಿ .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ - » ಜಗನ್ನೊ ಹಿನೀ ಗುರುತು ಹಿಡಿಯಬೇಕೆಂಬ ಆಶಯ ದಿಂದ, ನೀನು ನಿನ್ನ ಜಾತಕ ವನ್ನು ತರುವಂತೆ ಕಾಗದವನ್ನು ಬರೆದು ಕಳುಹಿಸಿದ್ದೆನು ನಿಮ್ಮ ತಂದೆಯಾದ ಧರ್ಮನರ್ವನು ಜೀವನನಾಗಿದ್ದರೆ, ಈ ಕಾರ್ಯ ಕ್ಕಾಗಿ ನಾನಿಷ್ಟು ಪ್ರಯತ್ನ ಪಡಬೇ ಕಾಗೆ ಆಶ್ಯಕವಿರುತ್ತಿರಲಿಲ್ಲ. ಆದೇ ತಕೆಂದರೆ, ಆ ಮಹಾವೀರನು ನನ ಪರಮಾಪ್ತನಾದ ಮಿತ್ರನು-ಮಿತ್ರ ಶಬ್ಬಾರ್ಥಕ್ಕೆ ಅನುಗುಣನಾದ ಮಿತ್ರನಿಗೆ ಮನವೆ ಮಾಡಿಕೊಂಡ ಕಾರ್ಯ ವು ಎಂದಿಗೂ ನೆರವೇರದೇ ಇರು ವದಿಲ್ಲ ನಷ್ಮೆ, ಪ್ರಕೃತ, ನೀನು ಆ ಮಹಾ ಯೋಗಿಗಳಾದ ಆರ ಎನ್ನ ಬಾನ್ದವರ ಸಂಕನುಸಾರವಾಗಿ ಅವರ ಪ್ರಿಯ ಪುತ್ರಿಯಾದ ಜಗನ್ನೊ ಹಿನಿಯನ್ನು ಸಿವಾಹನಾಡಿಕೊಂಡು ಅವರ ಮನೋರಥ ವನ್ನು ಸಿದ್ಧಗೊಳಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು. ಈ ಸಮ್ಮಂಧವು ನಿನಗೂ ನಿನ್ನ ಸಂತತಿಗೂ ಪರಮ ಶೇ‌ಸ್ಕರ ವಾದುದು. ” ಎಂದು ಹೇಳಿದರು. ಕುಶನಾಭರು ತಮ್ಮ ಸಂಭಾಷಣೆಯು ಮುಗಿಯುವವರೆಗೂ ಅನ್ತರ್ಗತವಾದ, ಅಪರಿಮಿತವಾದ ಜ್ಞಾನವನ್ನು ಪ್ರಕಟಿಸುತಿದ್ದ ತಮ್ಮ ವಿಶಾಲವಾದ ಲಲಾಟದ ಮೇಲೆ, ಪೂರ್ಣಾಧಿಕವಾದ ವಯ ಸ್ಪಿಗೆ ಸಾಕ್ಷಿ ಭೂತವಾಗಿ, ಮಡಿಕೆ ಮಡಿಕೆಯಾಗಿ, ಒಂದರಮೇ ಲೊಂದು ಪದರು ಗಟ್ಟಿ ಕೊಂಡಿದ್ದ ಸುಕ್ಕು ಗಳು ಹುರಿಯಾಗುವಂತೆ ಜೋಲು ಹುಬ್ಬುಗಳನ್ನು ಮೇಲಕ್ಕೆ ನೀಡಿ, ವಾರ್ಧಕ್ಯದಶೆಯಿಂದ ಸಂಕುಚಿತವಾಗಿದ್ದ ವಿಶಾಲವಾದ ಕಣ್ಣುಗಳನ್ನು ಪ್ರಯತ್ನ ಪೂರ್ವ ಕವಾಗಿ ತೆರದು ನಮ್ಮ ಕಥಾನಾಯಕನ ಮುಖವನ್ನೇ ಸೌಮ್ಯವಾಗಿ ನಿಟ್ಟಿಸಿ ನೋಡುತ್ತಿದ್ದರು, ಅದೇತಕೆಂದರೆ, ಮುಖಭಾವದಿಂದ ಮನೋಭಾವವನ್ನು ಊಹಿಸುವ ಕಲಾಕೋವಿದರಲ್ಲಿ ಅಗ್ರೇಸರ ಅದ ಅವರು, ರವಿವರ್ಮನು ತನ್ನ ಅಭಿಪ್ರಾಯವನ್ನು ಕಂಠ