ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಸ್ಥಿತಿಗತಿ, 2016

ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ

ಅತ್ಯುತ್ತಮ ಸಾಂದ್ರ ಸಮಗ್ರ ವಿನ್ಯಾಸಗಳ ಸೃಜನಶೀಲ ಚಿಂತನ ವಿನ್ಯಾಸ

ಪ್ರೊ. ಕೆ. ಚಿನ್ನಪ್ಪ ಗೌಡ

ಯಕ್ಷಗಾನ ಪರಂಪರೆ ಮತ್ತು ಪ್ರಯೋಗ, ಸ್ವರೂಪ ಮತ್ತು ವಿವಿಧ ತಿಟ್ಟುಗಳು, ವಸ್ತು ಮತ್ತು ಆಕರಗಳು, ಉದ್ದೇಶ ಮತ್ತು ಸ್ಥಿತ್ಯಂತರಗಳು - ಹೀಗೆ ಯಕ್ಷಗಾನದ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಈಗಾಗಲೇ ಪ್ರಕಟಿಸಿದೆ. ಪುತ್ತೂರು ಶೀನಪ್ಪ ಭಂಡಾರಿಯವರ ಅನುಭವ ಕಥನ 'ಯಕ್ಷಭಂಡಾರಿ', 'ಯಕ್ಷ' (ಸ್ತ್ರೀವೇಷ, ಸ್ತ್ರೀಪಾತ್ರ ಮತ್ತು ಮಹಿಳಾ ಯಕ್ಷಗಾನ ವಿವೇಚನೆ) 'ಯಕ್ಷತರು, ಯಕ್ಷಮುಡಿ, ಯಕ್ಷಸಿರಿ, ಯಕ್ಷಕೇದಗೆ, ಕೋಟ ಶಿವರಾಮ ಕಾರಂತರು' (ಯಕ್ಷಗಾನ ಚಿಂತನೆ ಮತ್ತು ಪ್ರಯೋಗ) – ಮೊದಲಾದ ಕೃತಿಗಳು ಯಕ್ಷಗಾನ ರಂಗದ ಅರಿವು ಮತ್ತು ತಿಳುವಳಿಕೆಯನ್ನು ವಿಸ್ತರಿಸಿವೆ. ಒಟ್ಟಂದದ ಯಕ್ಷಗಾನದ ಪರಂಪರೆ ಮತ್ತು ಆಧುನಿಕತೆಯ ಕುರಿತ ಅರಿವನ್ನು ಇನ್ನಷ್ಟು ವಿಸ್ತರಿಸುವ ಡಾ.ಎಂ.ಪ್ರಭಾಕರ ಜೋಶಿಯವರ 'ಯಕ್ಷಗಾನ ಸ್ಥಿತಿಗತಿ' ಎಂಬ ಸಂಪುಟವನ್ನು ಪ್ರಕಟಿಸಲು ಅತೀವ ಸಂತೋಷವಾಗುತ್ತದೆ.

ಯಕ್ಷಗಾನ ಸ್ಥಿತಿಗತಿ ಎಂಬ ಈ ಸಂಪುಟದಲ್ಲಿ ಒಟ್ಟು ಇಪ್ಪತ್ತೆರಡು ಲೇಖನಗಳಿವೆ. ಆಖ್ಯಾನ-ವ್ಯಾಖ್ಯಾನವನ್ನೊಳಗೊಂಡಿರುವ ಯಕ್ಷಗಾನದ

ಜಾಗರದ ಜೋಶಿ / 97