ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಿಗುಟಲ್ಲ. ಪ್ರಯೋಗ ವಿರೋಧಿಯಲ್ಲ, ನಾವೀನ್ಯ ನಿರಾಕರಣ ಶೀಲವಲ್ಲ. ಸಮಕಾಲೀನ ರಂಗ ನಾಟಕದ ಹಾಗೆ ಮುಕ್ತವೂ ಅಲ್ಲ. ಅ-ಶಿಷ್ಟವೂ ಅಲ್ಲ”, “ಇತ್ತೀಚೆಗೆ ಯಕ್ಷಗಾನದಲ್ಲಿಕಾಣುವ ಅನೇಕಾನೇಕ ನರ್ತನಗಳು, ಪದಾಭಿನಯಗಳು, ಚಲನೆಗಳು 'ವಿಕೃತಿ'ಗಳಾಗಿ ಕಾಣುವುದು ಈ ಕೃತಿಯ ಒಟ್ಟು ವ್ಯಾಕರಣ, ಕಲಾಭಾಷೆಯ ಗ್ರಹಿಕೆ ಇಲ್ಲದ ರಚನೆಗಳಾಗುವುದರಿಂದ”, “ಕಲೆಯ ಕುರಿತು ಅಭಿಮಾನವನ್ನು ತಾಳುವುದರೊಂದಿಗೆ ಇದರ ಮಿತಿಗಳನ್ನು ಮೀರುವ, ಇದನ್ನು ಕಾಲೋಚಿತವಾಗಿ ಬೆಳೆಸುವ ಪರಿಶ್ರಮಪೂರ್ವಕಬುದ್ಧಿಪೂರ್ವಕವಾದ, ಗಂಭೀರವಾದ ಪ್ರಯತ್ನಗಳು ನಡೆಯಬೇಕಾಗಿರುವುದು ಅಗತ್ಯ,“ಯಕ್ಷಗಾನ ಪಾತ್ರದ ಪದ, ಪದ್ಯಾಭಿನಯ ಹಾಗೆ ಸ್ವತಂತ್ರವಲ್ಲ. ಅದು ಆ ಪಾತ್ರದ ಭಾವ ಮತ್ತು ಪ್ರತಿಕ್ರಿಯೆ, ಪದಗಳಲ್ಲಿ ಬರುವ ಇತರ ಪಾತ್ರ, ಘಟನೆಗಳ ಸಾಂದರ್ಭಿಕಚಿತ್ರಣಗಳಿಗೆ ಸೀಮಿತ. ಅದು ಪಾತ್ರಾನುಕೃತಿ ಹೊರತು 'ಏಕಪಾತ್ರಾಭಿನಯ'ದಂತಹನಾಟ್ಯವಲ್ಲ”, “ಸಂವಾದ ನಿರತ ಪಾತ್ರಗಳು, ಒಬ್ಬರನ್ನೊಬ್ಬರು ಸಂವಾದಕ್ಕೆಬಳಸಿಕೊಳ್ಳುವಾಗ ಅವರವರ ಮಾತಿನ ರೀತಿ, ಅಧ್ಯಯನದ ನೆಲೆ ಹಿನ್ನೆಲೆ, ಅಭಿವ್ಯಕ್ತಿ ವಿಧಾನಗಳನ್ನುಅನುಸರಿಸಿ ಪದಗಳನ್ನು ಅತ್ತಿತ್ತ ವಿನಿಮಯ ಮಾಡಿದಾಗ, ಟಾಸ್ ಮಾಡಿದಾಗ ಆಗುವಒಟ್ಟು ರೂಪಕಸೃಷ್ಟಿ ಉತ್ತಮ ಅನುಭವವನ್ನು ನಿರ್ಮಿಸುತ್ತದೆ. ಶಾಸ್ತ್ರೀಯ ಅಧ್ಯಯನ ಸಾಹಿತ್ಯದ ಪರಿಶ್ರಮ, ತರ್ಕದ ಪರಿಣತಿ, ವ್ಯಾವಹಾರಿಕ ಜಾಣ್ಮಯ ಅನುಭವ, ಪೌರಾಣಿಕಮಾಹಿತಿಗಳ ಜ್ಞಾನ, ಗಾದೆ ಮೊದಲಾದ ಭಾಷಾಂಗಗಳ ಹಿಡಿತ, ನವೀನ ವ್ಯಾಖ್ಯಾನಪ್ರತಿಭೆ, ತಟ್ಟನೆ ಪ್ರತಿಕ್ರಿಯೆಗೆ ಒದಗುವ ಸಾಮರ್ಥ್ಯ, ಪ್ರಾಸ ಲಾಲಿತ್ಯಗಳ ಹಿಡಿತ – ಹೀಗೆಅರ್ಥದಾರಿಗಳಲ್ಲಿ ಒಂದೊಂದು ಬಗೆಯ ಅಥವಾ ಹಲವು ಸಾಮರ್ಥ್ಯಗಳ ಪ್ರಾವೀಣ್ಯವುಳ್ಳವರು ಇರುತ್ತಾರೆ".

  ಇಂತಹ ಅನೇಕ ಮಾತುಗಳು ಡಾ.ಜೋಶಿಯವರ ಯಕ್ಷಗಾನದ ಕುರಿತ ಚಿಂತನವಿನ್ಯಾಸವನ್ನು ಸ್ಪಷ್ಟಪಡಿಸುತ್ತವೆ. ಯಕ್ಷಗಾನ ಸಂಘಟನೆ, ಯಕ್ಷಗಾನದಲ್ಲಿ ಏಕವ್ಯಕ್ತಿ ಪ್ರದರ್ಶನ,ಹರಕೆ ಬಯಲಾಟಗಳ, ಕಾಲಮಿತಿ ಯಕ್ಷಗಾನ - ಮೊದಲಾದ ಸಂಗತಿಗಳ ಬಗೆಗೂತಮ್ಮ ಖಚಿತ ನಿಲುವನ್ನು ಪ್ರಕಟಿಸಿದ್ದಾರೆ....

(ಪುಸ್ತಕದ ಉಪೋದ್ಘಾತದ ಆಯ್ದ ಭಾಗ)

ಜಾಗರದ ಜೋಶಿ | 99