ಸಂಕಲನದ ವ್ಯಾಪ್ತಿ ನನ್ನ ಅಧ್ಯಯನಾಸಕ್ತಿಯಿಂದ ತುಂಬ ಭಿನ್ನವಾದುದು. ಆಳವಾದದ್ದು.ವಿವೇಚನೆಯ ಸಾಧ್ಯತೆಗಳನ್ನು ಡಾ| ಜೋಶಿ ಅವರು ಈ ಪುಸ್ತಕದಲ್ಲಿ ತುಸು ವಿಸ್ತಾರವಾಗಿಸ್ಪರ್ಶಿಸಿದ್ದಾರೆ. ಅವನ್ನೆಲ್ಲ ಒಂದು ಗುಬ್ಬಚ್ಚಿ ಪಕ್ಷಿ ನೋಟಕ್ಕೂ ಒಳಪಡಿಸಲಾಗದ ಚಿಂದಿ ಚಿಂತನೆಗಳ ಸರದಾರ ನಾನು.ಆದರೂಬರೆಯಲೊಪ್ಪಿದ್ದೇನೆ. ಕಾರಣ,ಪುಟ12ರಲ್ಲಿಜೋಶಿಹೇಳಿಕೊಂಡಂತೆ...ಅವರು(ಪಾದೇಕಲ್ಲು) ನನ್ನ ಬಗೆಗಿರಿಸಿದ ಪ್ರೀತಿವಿಶ್ವಾಸಗಳಿಂದ ಈ ಬರೆಹ ಅಷ್ಟೆ...' ಜೋಶಿ ಅವರ ಈ ಮಾತೇ ನನಗೂ ಶ್ರೀರಕ್ಷೆ.
ಇರಲಿ, ಈ ಪ್ರೀತಿ ವಿಶ್ವಾಸದ ನೋಟಗಳ ಪರಸ್ಪರ ವಿನಿಮಯ ಕೇವಲ ಹೊಗಳಿಕೆಯ ಗಾಳಿಬೀಸು ಆಗಬಾರದಲ್ಲ. ಸಂಕಲನದ ವಿವಿಧ ಪ್ರಬಂಧಗಳು ಒಳಗೊಂಡಹಲವಾರು ಹಿರಿಮೆಗಳ ಪರಿಮಳವನ್ನು ತುಸು ಸ್ಪಂದನಾತ್ಮಕವಾಗಿ ಹೊತ್ತು ಸಾಗಲಿ ಎಂದೇ ನನ್ನಾಸೆ. ಪ್ರಾರಂಭದಲ್ಲಿಯೇ ಹಲವು ನೋಟಗಳನ್ನೊಳಗೊಂಡ ಹೊತ್ತಗೆ ಎಂದೆ. ಒಂದೆ ಮಾತಿನಲ್ಲಿ ಹೇಳುವುದಾದರೆ ಈ ಹಲವು ನೋಟಗಳೇ ಈ ಪುಸ್ತಕದ ಹಿರಿಮೆ, ಹಲವು ಎಂದರೆ ಒಂದೆರಡಲ್ಲ. ಒಂದು ಪ್ರದೇಶದ ಸುತ್ತಮುತ್ತ ಯಕ್ಷಗಾನದ ಜಗತ್ತು ಹೇಗೆ ಸೃಷ್ಟಿಯಾಗಿದೆ, ಕ್ರಿಯಾಶೀಲವಾಗಿದೆ, ಎಂಥ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನೆಲ್ಲ'ಮಂಗಳೂರಿನಲ್ಲಿ ಯಕ್ಷಗಾನ' (ಪು 22ರಿಂದ) ಎಂಬ ನನಗೆ ತುಂಬ ಆಪ್ತವಾದ ಸಂಶೋಧನೆಯ ನೆರಳನ್ನು ಹಾಯಿಸುವ ಲೇಖನದಿಂದ ಹಿಡಿದು'ಸಂಪಾಜೆ ಮಹಾ ವಿದ್ಯಮಾನ' (ಪು 53ರಿಂದ) ಎಂಬ ಆತ್ಮೀಯ ದಾಖಲೆಯ
ಲೇಖನದ ತನಕ ಡಾ|ಜೋಶಿ ಅವರ ಚಿಂತನೆಗಳ ಜುಗಲ್ಬಂದಿ (ಅವರೇ ನನ್ನಕೇಳಿಕೆಗೆ ಸ್ಪಂದಿಸಿ ಮಾಡಿದ ಏಕವ್ಯಕ್ತಿ ತಾಳಮದ್ದಲೆ ಪ್ರಯೋಗದಂತೆ) ಸಾಗಿದೆ ಈ ಗ್ರಂಥದಲ್ಲಿ.
ಹೌದಲ್ಲ. ನನ್ನ ಅನೇಕ ಪ್ರಯೋಗಗಳಿಗೆ ಜೋಶಿ ಅವರದು ಏಕವ್ಯಕ್ತಿ ಸ್ಪಂದನವೆ.ಸಂದರ್ಭ ಬಂದಾಗಲೆಲ್ಲ ನನ್ನಾಹಚ್ಚಾಟಗಳನ್ನು ಮೆಚ್ಚಿ ಸ್ಮರಿಸಿದ್ದಾರೆ. 'ಏಕವ್ಯಕ್ತಿ ತಾಳಮದ್ದಲೆ ಮಾಡುವ' ಎಂದೆ. ಬಹು ಎತ್ತರವಾಗಿ ಬೆಳೆದ ತಾಳಮದ್ದಲೆಯ ಮೂಲಸ್ವರೂಪಕ್ಕೆಪೆಟ್ಟು ಕೊಡುವಂಥ ಈ ಕಲ್ಪನೆಗೆ ಪರಂಪರೆಯ ಪ್ರೀತಿಗರು ಒಪ್ಪದಿದ್ದರೂ ಡಾ.ಜೋಶಿ ಅವರು ಬಂದು ಭಾಗವಹಿಸಿದ್ದರು (25-03-2002). ಅದೇ ರೀತಿ
ಕಡೆಂಗೋಡ್ಲು ಕೃತಿ 'ಸೀತಾಪಹಾರವನ್ನು ಆಧರಿಸಿ ಪ್ರಯತ್ನಿಸಿದ 'ಕಾವ್ಯ ತಾಳಮದ್ದಲೆ(25-10-1998) ಎಂಬ ಹೊಸ ಸಾಧ್ಯತೆಗೆ ಸಹಕಾರ ಸಾಧ್ಯವೇ ಎಂದು ಕೇಳಿದ್ದೆ.ಹಿಂದೆ ಮುಂದೆ ನೋಡದೆ ಒಪ್ಪಿ ಬಂದಿದ್ದರು. ಆ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿ ತನ್ನ ಅಪಾರ ತಾಳಮದ್ದಲೆ ವಾಗಿತೆಯನ್ನು ಆ ಕಲ್ಪನೆಗೆ ಇಂಬು ಕೊಡುವಂತೆಗಂಗಾಪ್ರವಾಹವಾಗಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ - ಹಿಮ್ಮೇಳವೇ ಇಲ್ಲದೆಆಶು 'ತರ್ಕ ಮದ್ದಳೆ'ಯ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದಾಗ ಆತ್ಮೀಯರಾದ ವಾಸುದೇವ ರಂಗಾಭಟ್ಟರನ್ನು ಕೂಡಿಕೊಂಡು ನಮ್ಮ ಊರ್ವಶೀ ವಿಲಾಸ ವಿಲಾಪ'ಕ್ಕೆ ಒಂದು
ಜಾಗರದ ಜೋಶಿ / 101
-