ಎತ್ತರವನ್ನು ಸಾಧ್ಯಗೊಳಿಸಿದ್ದರು. (11-01-2015)
ಹೀಗೇ ಸಂದರ್ಭವೊದಗಿದಾಗಲೆಲ್ಲ ತಮ್ಮ ಸಮಕಾಲೀನರ ಸಾಧನೆಗಳ ಶೋಧನೆಗಳಕಾಣೆಗಳ ಅಭಿಪ್ರಾಯಗಳ ದಾಖಲೆಯನ್ನು ತನ್ನ ಲೇಖನಗಳಲ್ಲೋ ಉಪನ್ಯಾಸಗಳಲ್ಲೋ ನೆನಪಿಸಿಕೊಂಡು ಹೇಳುವ ಪರಿಪಾಠವನ್ನು ಡಾ| ಜೋಶಿ ಅವರು ನಿಡುಗಾಲದಿಂದ ಮಾಡುತ್ತಾ ಬಂದಿದ್ದಾರೆ. ಈ ಗ್ರಂಥದ ಹಲವು ಲೇಖನಗಳಲ್ಲಿ ಅದಕ್ಕೆ ಆಧಾರದೊರಕುತ್ತದೆ. ಇದು ಇಂಥವರು ಹೇಳಿದ್ದು, ಇದು ಇಂಥವರ ಮಾತು, ಕೊಡುಗೆಎಂಬಿತ್ಯಾದಿಗಳನ್ನೆಲ್ಲ ಪ್ರಸ್ತಾಪಿಸಲು ಮರೆಯದಿರುವ 'ಸಾಕ್ಷಿ ಪ್ರಜ್ಞೆಯ ಬೌದ್ಧಿಕ ವ್ಯಕ್ತಿತ್ವ
ಅವರದ್ದಾದದ್ದರಿಂದಲೇ ಈ ಗ್ರಂಥದ ವಿವಿಧ ನೆಲೆಗಳಲ್ಲಿ ವಿವೇಚನೆಗಳು ಸಾಧ್ಯವಾಗಿದೆ.ಏನು ಋಣವೋ? ನನಗಂತು ಒಂದೆರಡು ಮುನ್ನುಡಿ ಎಂಬ ಶಿಷ್ಟಾಚಾರವನ್ನೂ ಮೀರಿ ಪ್ರಸ್ತಾಪಿಸಲೇ ಉದಾಹರಣೆಗೆ 'ಮಂಗಳೂರಿನಲ್ಲಿ ಯಕ್ಷಗಾನ' ಎಂಬ ಅವರ ವಿಶಿಷ್ಟ ಬಗೆಯ ಅಧ್ಯಯನ ನೋಟದಲ್ಲಿ ಸೇರಿಕೊಳ್ಳಬಹುದಾದ ಒಂದು ಸಂಗತಿ ಮುಳಿಯ ಶತಮಾನೋತ್ಸವ ಸಂದರ್ಭ ಸಂತ ಎಲೋಶಿಯಸ್ ಸಭಾಭವನದಲ್ಲಿ ನಡೆದ ತೆಂಕುತಿಟ್ಟಿನಲ್ಲಿ ಪ್ರಥಮ ಎನ್ನಬಹುದಾದ ಬ್ಯಾಲೆ ಪ್ರಯೋಗವಾದ 'ನವನೀತ ರಾಮಾಯಣ' ಆಧಾರಿತ ರಂಗಪ್ರಯತ್ನದ(18-03-1989) ಕುರಿತಾಗಿ ಡಾ| ಜೋಶಿ ಅವರು ಹಲವು ವೇದಿಕೆಗಳಲ್ಲಿ ಮೆಚ್ಚಿ ಆಡಿದ್ದನ್ನಾಗಲೀ (ಲೇಖನದಲ್ಲಿ ಆ ಮರೆವೆ ದೋಷವಾಗಿಲ್ಲ) ಡಾ| ಕಾರಂತರು ಸ್ತ್ರೀ ವೇಷಕ್ಕಾಗಿ ರೂಪಿಸಿದ ಶಿರೋಭೂಷಣ (ಸ್ತ್ರೀ ಕೇದಗೆ ಕಿರೀಟ)ದ ಒಟ್ಟಂದದ ಕೊಡುಗೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ (ಪು 73) ಪರ್ಯಾಯವಾಗಿ ಶ್ರೀ ಕೊಳ್ಳೂರು, ಶ್ರೀ ಪಾತಾಳ ಅವರು ವಿನ್ಯಾಸಗೊಳಿಸಿ ಪ್ರಯತ್ನಿಸಿದ (ನನ್ನ ಪಾಂಚಾಲಿಯಲ್ಲಿ 'ಕಮಲಮುಂದಲೆ' ಎಂಬ ಪರಿಕಲ್ಪನೆಯಲ್ಲಿ ರೂಪಿಸಿದ) ಆಹಾರ್ಯಗಳ ಕೊಡುಗೆಗಳನ್ನು ನೆನಪಿಸಿಕೊಳ್ಳುವಂತೆ ವಿವೇಚಿಸಿದ ಡಾ| ಜೋಶಿ ಅವರ ದಾಖಲೀಕರಣ ಪ್ರಯತ್ನ ವಿಶಿಷ್ಟ ಬಗೆಯದು. ಅವರು(ಕಾರಂತರು) ಸ್ತ್ರೀ ವೇಷಕ್ಕೆ ತಯಾರಿಸಿದ 'ಕಿರಣ'ದ ಮುಡಿ ಸ್ತ್ರೀ-ಪುರುಷ ವೇಷಗಳ ನಡುವಿನ ವಿಸಂವಾದ ವನ್ನು ನಿವಾರಿಸಿ ಆನುರೂಪ್ಯ (harmony) ಸಾಧಿಸಿತು. ಅದೊಂದು 'ಅಸಾಮಾನ್ಯ ಸೃಜನ' ಎಂಬ ಡಾ| ಜೋಶಿ ಅವರ ಮಾತು ಕೇವಲ ಒಂದು ವಾಕ್ಯವಲ್ಲ ಒಂದಷ್ಟು ಚಿಂತನೆಗಳಿಗೆ ಬುನಾದಿಯಾಗುವಂತಿದೆ ಎಂದೇ ನನ್ನೆಣಿಕೆ.
ಕಾರಂತರ ಮೂಲ ಚಿಂತನೆಯ ಕೊಡುಗೆಗಳ ಸುತ್ತಮುತ್ತ ಇಂದೀಗ ನಡೆಯುತ್ತಿರುವ ವಿಧ ವಿಧದ ಪ್ರಯೋಗ ವಿಸ್ತಾರಗಳೆಡೆಗೆ ಗಮನಹರಿಸಬೇಕೆಂದು ಸೂಚಿಸುವಂತಿದೆ ಇಂತಹ ಅನೇಕ ಪರಿಶೀಲನೆಗಳು, ಅದೇ ರೀತಿ ಪುಟ 30ರಲ್ಲಿ ದಾಖಲಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ, ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಮುಖ್ಯ ವಿದ್ಯಮಾನವೆಂದು ಗುರುತಿಸಿ ಪ್ರೊ. ಬಿ.ಎ. ವಿವೇಕ ರೈ ಅವರು ಈ ಬಗ್ಗೆ ಬಹಳ ಹಿಂದೆ ಚಿಂತಿಸಿ ಯೋಜನೆ ಹಾಕಿದಾಗ ಆ ಕುರಿತ ಸ್ಥೂಲ ನಕ್ಷೆ ತಯಾರು ಮಾಡುವಾಗ ಸಹಕರಿಸುವ ಅವಕಾಶ ದೊರಕಿದ ಮಧುರ
ಜಾಗರದ ಜೋಶಿ