ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

'ಉಪದೇಶ ಸಂಹಿತೆಯಾಗುತ್ತದೋ, ಅಲ್ಲ 'ನನಗೆ ಚೆನ್ನಾಗಿ ಪರಿಣತಿ ಇರುವ ಪ್ರಸಂಗವಾದಅಧಿಕಪ್ರಸಂಗವಾಗಿ ಬಿಡುತ್ತದೋ ಎಂಬ (ಕುಶಿ ಅವರು ಟಂಕಿಸಿದ ಒಂದು ನುಡಿನಾಣ್ಯ) ಭೀತಿಯಿಂದಲೇ ಕೆಲವು ವಿಚಾರಗಳನ್ನು ಮಂಡಿಸುತ್ತೇನೆ. ಇದು ಮಾರ್ಗದರ್ಶಿಪ್ರವಚನವಲ್ಲ. ನಾವು ನೀವೆಲ್ಲ ಸೇರಿ ಸಹಚಿಂತನ ಮಾಡಬಹುದಾದ 'ಸಂಗತಿ ಪ್ರಸಂಗ',ಇದು ನಿಮ್ಮದೇ ಸಂಭಾಷಣ,

 ಯಕ್ಷಗಾನ - ಯಕ್ಷಗಾನಗಳು

ಯಕ್ಷಗಾನವೆಂಬ, ಪ್ರಾಯಃ ಗೀತ ಪ್ರಬಂಧ ಜಾತಿಯಿಂದ ತನ್ನ ಹೆಸರನ್ನುಹೊಂದಿರುವ ಈ ಸಾಂಪ್ರದಾಯಿಕ ರಂಗ ಪ್ರಕಾರವು ಕರ್ನಾಟಕವು ಹೆಮ್ಮೆಪಟ್ಟುಕೊಳ್ಳಬಹುದಾದ ಕಲಾ ಸಂಪದ, ಆಟ, ಬಯಲಾಟ, ದಶಾವತಾರ ಆಟ, ಕೇಳಿಕೆ ಹೀಗೆಬೇರೆ ಬೇರೆ ಹೆಸರುಗಳಿಂದ ಬಂದಿರುವ, ಕರಾವಳಿ-ಮಲೆನಾಡುಗಳಲ್ಲಿ ಪ್ರದರ್ಶನದಿಂದಅಭಿವೃದ್ಧಿ ಹೊಂದಿರುವಯಕ್ಷಗಾನವುಭಾರತಾದ್ಯಂತ ಕಾಣಿಸುವ, ವಿಶೇಷತಃ ಅಸ್ಸಾಂನಿಂದಶ್ರೀಲಂಕಾ ತನಕ 'ಭಕ್ತ ಪಥ' (ಬತ್ತದ ದಾರಿ, ಅಕ್ಕಿ ಪಟ್ಟಿ, Rice Belt)ದ ಸಬಲವಾದ ಚೈತನ್ಯಶಾಲಿ ಕಲೆಗಳ ಕುಟುಂಬಕ್ಕೆ ಸೇರಿದ್ದು ಈ ಎಲ್ಲಾ ಕಲೆಗಳೂ ಪರಸ್ಪರ ಸಂಬಂಧವುಳ್ಳವು, ಏಕಮೂಲವೆಂಬಷ್ಟು ಸಾಮ್ಯ,ಹಾಗೆಯೆ ವಿಚಿತ್ರ ಭಿನ್ನತೆಗಳು ಇವುಗಳೊಳಗಿವೆ.ಕರ್ನಾಟಕದಲ್ಲಿ ಕರಾವಳಿಯ ಯಕ್ಷಗಾನ ತೆಂಕು, ಬಡಗು, ಉತ್ತರಕನ್ನಡತಿಟ್ಟುಗಳಲ್ಲದೆ; ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಪಾರಿಜಾತ, ಗಟ್ಟದ ಕೋರೆ,ಕೇಳಿಕೆ, ದಾಸರಾಟ ಮೊದಲಾದ ವಿವಿಧ ರೀತಿಯ ಬಯಲಾಟಗಳಿವೆ. ಇವುಗಳುಒಂದೇ ಸಮೂಹದ ಕಲೆಗಳಾದರೂ ಬೆಳೆದು ಬಂದ ಸ್ಥಿತಿ ಗತಿಗಳು ಬೇರೆ, ಎಲ್ಲಪ್ರಕಾರಗಳಿಗೆ ಹೊಂದುವಂತೆ ಅಡಕವಾದ ವಿವೇಚನೆ ಕಠಿಣ, ಆದರೂ ಇಲ್ಲಿ ಪ್ರಸ್ತಾಪಿಸಿದಅಂಶಗಳಲ್ಲಿ ಎಲ್ಲಾ ಭಾಗಶಃಹೊಂದಿಕೆಯಾಗಬಹುದಾದವು. ಹತ್ತನೆಯಶತಮಾನದ ಬಳಿಕ ವಿಶೇಷ ಉತ್ಕರ್ಷವನ್ನು ಕಂಡ ಭಕ್ತಿ ಪಂಥದಿಂದ ರೂಪಗೊಂಡುಇಂದಿನವರೆಗೆ ಬೆಳೆದು ಬಂದಿರುವ ಕಲೆ ಬಯಲಾಟ. ಇದಕ್ಕೆ ಎಂಟು ಶತಮಾನಗಳಖಚಿತವಾದ ಹಿನ್ನೆಲೆ ಇದೆ. (ಜನ್ನನ ಯಶೋಧರ ಚರಿತೆಯ 'ಕೇಳಿಕೆ'ಯ ಉಲ್ಲೇಖಕುಕ್ಕಿಲ ಸಂಪುಟ. ಕುಕ್ಕಿಲ ಕೃಷ್ಣ ಭಟ್ಟ, ಕರ್ನಾಟಕ ಸಂಘ, ಪುತ್ತೂರು)

   ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ಕಾಣುವ ನಾಟ್ಯರಂಗದ ಅನೇಕ ವಿವರಗಳುನಮ್ಮ ಅಖಿಲ ಭಾರತೀಯ ಬಯಲಾಟಗಳ ಅನೇಕ ಅಂಶಗಳನ್ನು ತದ್ವತ್ತಾಗಿ ಹೋಲುತ್ತವೆ.(ಉಲ್ಲೇಖ ಅದೇ) ಅಂದರೆ, ಭಾರತದಲ್ಲಿ ಈ ಬಗೆಯ ನಾಟ್ಯ ಪರಂಪರೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನಕ್ಕೂ ಮೊದಲಿನದು, ನಾಟ್ಯ ಶಾಸ್ತ್ರಕಾರನು ಸಂಗ್ರಹಿಸುವ ಕಾಲಕ್ಕೆಅವನ ಮುಂದೆ ಇದ್ದದ್ದು ಎಂಬುದು ಸ್ಪಷ್ಟ. ಅಲ್ಲಿಂದ ಮುಂದೆ ಇದು ಹಲವು ಹಂತಗಳನ್ನು ದಾಟಿ ಕವಲುಗಳಾಗಿ ಬೆಳೆದು ಬಹುಶಃ ಹದಿನಾರನೆಯ ಶತಮಾನಕ್ಕಾಗುವಾಗ,ಇಂದು ನಾವು ಕಾಣುವ ರೂಪಗಳ ಮಾತೃಕೆಯಾಗಿ ಆಕಾರಗೊಂಡಿರಬೇಕು.

ಜಾಗರದ ಜೋಶಿ