ಈ ಪುಟವನ್ನು ಪ್ರಕಟಿಸಲಾಗಿದೆ
'ಯಕ್ಷಗಾನ' ಒಂದು - ಅದರೊಳಗೆ ಹಲವು
ನಾವು ಕಲಾ ದೃಷ್ಟಿಯಿಂದ ಒಂದು ಬಗೆಯ 'ಆದರ್ಶ ರೂಪ'ವನ್ನು ಕಲ್ಪಿಸಿಕೊಂಡುಆ ಮಾನದಿಂದ ವಿಮರ್ಶಿಸುವುದು ಸಹಜವೇ. ಅದು ಕಲಾವಿಮರ್ಶೆಯ ದೃಷ್ಟಿಯಾದರೆ,ಅಧ್ಯಯನ ದೃಷ್ಟಿಯಿಂದ ಹಲವು ಬಗೆಯ ಯಕ್ಷಗಾನಗಳಿವೆ. ಸಾಂಪ್ರದಾಯಿಕ, ನಾಟಕಮಿಶ್ರಿತ, ಹವ್ಯಾಸಿ - ವ್ಯವಸಾಯಿ ಇತ್ಯಾದಿ ಪ್ರಾಯೋಗಿಕ ರೂಪವಾಗಿ ಬೇರೆಯೇ ಆಗಿಗಣನಾರ್ಹ. ಹೀಗೆ ಯಕ್ಷಗಾನ ಇದೆ, ಯಕ್ಷಗಾನಗಳೂ ಇವೆ.
ಪಾರಂಪರಿಕ ಕಲೆ - ಸ್ವತ್ವದ ಸತ್ವ ಯಕ್ಷಗಾನವೂ, ತತ್ಸಮಾನವಾದ ಅನೇಕ ಸಾಹಿತ್ಯ ಕಲೆಗಳೂ (ಉದಾ - ಜಾತ್ರಾ,ತೆರುಕ್ಯುತ್, ಭಾಗವತರು, ದಶಾವತಾರಿ.. ಇತ್ಯಾದಿ) ಸಾರತಃ ಪಾರಂಪರಿಕ ರಂಗಕಲೆಗಳು,ನೃತ್ಯ ವಾದ್ಯ, ನಾಟಕ, ಆಹಾರಾದಿ ಅಂಶಗಳ ಮಿಶ್ರಣವಾಗಿರುವ 'ಸಮಗ್ರ' ರಂಗಗಳು,ಇವು ಜಾನಪದವೋ, ಶಾಸ್ತ್ರೀಯವೋ (Folk classical) ಎಂಬ ಪ್ರಶ್ನೆಯನ್ನೆತ್ತಿಕೊಂಡುಚರ್ಚೆ ನಡೆದಿದ್ದು ಹಲವು ಬಗೆಯ ನಿರ್ಣಯಗಳು ಬಂದಿವೆ. ಪಾಶ್ಚಾತ್ಯ Folk ಮತ್ತುclassical ಎಂಬ ವಿಭಜನೆ ನಮ್ಮ ಪ್ರಾಕಾರಗಳಿಗೆ ಹಲವು ಬಾರಿ ಹೊಂದುವುದಿಲ್ಲ.ನಮ್ಮ 'ದೇಶಿ' - 'ಮಾರ್ಗ' ಎಂಬ ವಿಭಾಗವು ಜಾನಪದ ಮತ್ತು ಶಾಸ್ತ್ರೀಯ ಎಂಬಅರ್ಥದವು ಅಲ್ಲ. ಯಕ್ಷಗಾನವು ಆಂತರಿಕವಾಗಿಯೇ ಖಚಿತವಾದನಿರ್ಣಯಗಳನ್ನುಅರ್ಥಾತ್ ಶಾಸ್ತ್ರವನ್ನು ಒಳಗೊಂಡ ಶಾಸ್ತ್ರೀಯ ಕಲೆ, ದೇಶಿ ಕಲೆ - ಇದನ್ನು ಪಾರಂಪರಿಕರಂಗಭೂಮಿ' (Traditional Theatre) ಅನ್ನುವುದು ಸೂಕ್ತ.
ಯಕ್ಷಗಾನದಂತಹ ಶೈಲಿಬದ್ಧವಾದ, ರಮ್ಯಾದ್ಭುತವಾದ ಮತ್ತು ಅವಾಸ್ತವ ರಂಗದಸತ್ವವು ನಿಂತಿರುವುದು ಅದರ ರೂಪ, ಸೌಂದರ್ಯ, ಗಾಂಭೀರ್ಯಗಳಲ್ಲಿ ಅರ್ಥಾತ್ ಅದರ ಗಾನ, ನರ್ತನ, ವೇಷಗಳ ಶೈಲಿ, ಅಭಿವ್ಯಕ್ತಿಯ ರಂಗ ವಿಧಾನಗಳು ಅಂಗೀಕೃತ ಮೂಲಾಂಶಗಳು, ಶೈಲಿಯ ಹೊರಗೆ ರೂಪವನ್ನು ಭಂಗಿಸಿ ಮಾಡುವ 'ಹೊಸತನವಾಗಲಿ, ರಂಗದ ಯಶಸ್ಸು ಆಗಲಿ ಇಲ್ಲಿ ಸ್ವೀಕಾರ್ಯವಲ್ಲ. ಯಕ್ಷಗಾನ ಯಕ್ಷಗಾನವಾಗಿ ಬಾಳಬೇಕು, ಬೆಳೆಯಬೇಕು, ಮೆರೆಯಬೇಕು, ಬೇರೆ ಏನೋ ಆಗಿ ಅಲ್ಲ. ಈ ಸ್ವರಕ್ಷಣೆ,ಪ್ರಜ್ಞೆ, ಗುರುತಿನ ಪ್ರತ್ಯೇಕ ಅದರ ಜೀವಶಕ್ತಿ.
ಜತೆಗೆ ಗಮನಿಸಬೇಕಾದುದು ಯಕ್ಷಗಾನದ ಕಲೆಯ ಪ್ರದರ್ಶನ ತಂತ್ರ, ರೂಪ,ಕಥಾನಕ, ಆಶಯಗಳಲ್ಲಿ ಕಲೋಚಿತವಾದ ಮತ್ತು ಕಾಲೋಚಿತವಾದ ಸುಧಾರಣೆಗಳಿಗೆ ಇದರಲ್ಲಿ ಅವಕಾಶ ಇದ್ದೇ ಇದೆ. ಕಲಾ ಸೌಂದರ್ಯ, ಪರಂಪರೆಯ ರಕ್ಷಣೆಯೆಂದರೆ ಇದ್ದಂತೆ ಇರುವುದು ಎಂದಷ್ಟೇ ಅಲ್ಲ. ನವೀನ ಜ್ಞಾನ ಪ್ರಭಾವ, ಪ್ರಗತಿಗಳನ್ನು ತನ್ನ ಹಾಗೆ ಜೀರ್ಣಿಸಿಕೊಂಡು ಆತ್ಮೀಕರಿಸಿಕೊಳ್ಳುವುದು, ಮುನ್ನೋಟದಿಂದ ಮುನ್ನಡೆಯುವುದೂ ಹೌದು.
ಶತಮಾನಗಳ ಕಾಲ ಬೆಳೆದು ಬಂದ ಒಂದು ರೂಪಕ್ಕೆ
ಸಂದಿರುವ, ವಿವಿಧ
ಜಾಗರದ ಜೋಶಿ