ಮೇಳವೊಂದನ್ನು ಟೀಕಿಸುವುದು ಯಾ ಹೊಗಳುವುದು ಪತ್ರಿಕೆಯ ಕೆಲಸವಲ್ಲ. ಎಲ್ಲಕ್ಕೂ ಹೆಚ್ಚು ಕಲಾ ಲೇಖನಗಳು ಕಲಾ ಪುರವಣಿಯ ಮೊದಲ ಪುಟದಲ್ಲೇ ಪ್ರಕಟವಾಗಿ ಜನರನ್ನಾಕರ್ಷಿಸಬೇಕು. ಸಿನೆಮಾದಂತಹ ಬರಹ, ಚಿತ್ರಗಳನ್ನು ಎಲ್ಲಿ ಪ್ರಕಟಿಸಿದರೂ ಜನ ಓದುತ್ತಾರೆ.
* ಯಕ್ಷಗಾನ ವಿಮರ್ಶಾ ಲೇಖನ, ಗೋಷ್ಠಿ-ಕಮ್ಮಟಗಳಿಂದ ಕಲೆ / ಕಲಾವಿದರ ಮೇಲೆ ಏನಾದರೂ ಧನಾತ್ಮಕ ಪರಿಣಾಮವಾಗಿದೆಯೇ?
ಸ್ವಲ್ಪ ಮಟ್ಟಿಗೆ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ನಿಜ, ಕಲೆಯ ಬಗ್ಗೆ
ಕಲಾವಿದರಿಗೆ, ಕಲಾರಸಿಕರಿಗೆ ಜಾಗೃತಿ ಮೂಡಿಸುವಲ್ಲಿ ನಿಧಾನವಾಗಿ ಪರಿಣಾಮ
ಬೀರುತ್ತಿದೆ, ಬೀರಿದೆ.
* ಗೋಷ್ಠಿ, ವಿಚಾರ ಕಮ್ಮಟಗಳಲ್ಲಿ ವೃತ್ತಿ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಇದೆಯಲ್ಲಾ? ಇಲ್ಲವಾದಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗಲು ಕಾರಣವೇನು?
ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿಲ್ಲ ಎಂದೇ ನನ್ನ ಅಭಿಪಾಯ. ವೃತ್ತಿ ಕಲಾವಿದರು ತಮ್ಮ ಆರ್ಥಿಕ ಸಂಕಷ್ಟ, ಸಮಯದ ಹೊಂದಾಣಿಕೆಯ ಸಮಸ್ಯೆ, ಕಮ್ಮಟ-ಗೋಷ್ಠಿಗಳ ಅಗತ್ಯತೆಯ ಬಗ್ಗೆ ಅರಿವಿಲ್ಲದಿರುವುದರಿಂದ ಅವರ ಭಾಗವಹಿಸುವಿಕೆ ವಿರಳವಾಗಿರಲು ಕಾರಣವಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ ವೃತ್ತಿ ಕಲಾವಿದರು ಹೆಚ್ಚೆಚ್ಚು ಭಾಗವಹಿಸುವಂತಾಗಬೇಕು. ಕಲೆಯ ಪರಿಷ್ಕಾರದಲ್ಲಿ ಅವರ ಪಾತ್ರ ಮಹತ್ವ
ವಾದುದು. ಆ ದೃಷ್ಟಿಯಿಂದ ಅವರಿಗೆ ಕರೆ ಹೋಗದಿದ್ದಲ್ಲಿ ಖಂಡಿತಾ ತಪ್ಪು. ಕರೆ ಹೋಗಲೇ ಬೇಕು.
* ತುಳು ಪ್ರದರ್ಶನಗಳಿಗೆ (ಆಟಗಳಿಗೆ) ಹೋಲಿಸಿದಾಗ, ತುಳು ತಾಳಮದ್ದಳೆಗಳು ಯಾಕೆ ಹೆಚ್ಚು ಪ್ರಚಾರಕ್ಕೆ ಬರುತ್ತಿಲ್ಲ?
ಅಷ್ಟೇ. ತುಳು ತಾಳಮದ್ದಳೆ ಹೆಚ್ಚು ಹೆಚ್ಚು ಪ್ರಯೋಗ ಆಗಲೇ ಬೇಕು. ಆದರೆ ಪ್ರೌಢ ಚರ್ಚೆಗೆ ಬಳಸುವಂತಹ ಶ್ರೀಮಂತ ಭಾಷೆ ತುಳುವಲ್ಲ ಎನ್ನುವ ಅಭಿಪ್ರಾಯ ಸಂಪ್ರದಾಯಸ್ಥ ಕಲಾವಿದರಲ್ಲಿದೆ. ಆದರೆ ತುಳು ಸತ್ವಯುತವಾದ ಶ್ರೀಮಂತ ಭಾಷೆ ಎನ್ನುವುದಲ್ಲಿ ಎರಡು ಮಾತಿಲ್ಲ. ಯಾವುದೇ ಭಾಷೆ ತನ್ನಿಂದ ತಾನೆ ಶ್ರೀಮಂತವಾಗಿರುವುದಿಲ್ಲ. ಅದರ ಯೋಗ್ಯ ಬಳಕೆಯಿಂದ ಶ್ರೀಮಂತಗೊಳಿಸಬೇಕು. ಆ ಶಕ್ತಿ, ಸತ್ವವು ತುಳುವಿಗಿದೆ. ತಾಳಮದ್ದಳೆ ಕ್ಷೇತ್ರದಲ್ಲಿ ಬಳಸಬಲ್ಲ ಕಲಾವಿದರೂ ಇದ್ದಾರೆ. ಕಾರ್ಯಕ್ರಮ ಯೋಜಿಸುವವರು ಆ ಕಡೆಗೆ ಗಮನ ಹರಿಸಬೇಕಷ್ಟೇ. ಇನ್ನೂ ಒಂದು ಕಾರಣವಿದೆ - ಯಕ್ಷಗಾನ ಆಟದ ಪ್ರೇಕ್ಷಕರೂ, ತಾಳಮದ್ದಳೆ ಪ್ರೇಕ್ಷಕರೂ ಒಂದೇ ಆಗಿರುವುದು
1