ಅದ್ಭುತವಾಗಿ, ಜನರು ಕಾಣುವುದು ಅನುಭವಕ್ಕೆ ಬರುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯೋತ್ಸವಗಳಲ್ಲಿ ಯಕ್ಷಗಾನವನ್ನು ಕೊನೆಯ ಪ್ರದರ್ಶನವಾಗಿ ಇರಿಸುತ್ತಾರೆ. ಕಾರಣ,ಯಕ್ಷಗಾನದ ಬಳಿಕ ಉಳಿದ ಯಾ ಪ್ರದರ್ಶನವೂ ಸಪ್ಪೆಯಾಗುತ್ತದೆ! ಇದು ಹೆಮ್ಮೆತರುವ ಧೈರ್ಯ ಮತ್ತು ಜಾಗ್ರತೆಯನ್ನು ಬೋಧಿಸುವ ಸಂಗತಿ, ಯಕ್ಷಗಾನದಂತಹ ಸಮೃದ್ಧ ರಂಗಗುಣದ ಕಲೆಯ ಹಸಿವು ಸರ್ವತ್ರ ಇದೆ. ಅದನ್ನು ಬಳಸಿ ವಿಸ್ತರಿಸುವುದು ನಮ್ಮ ಕೆಲಸ. ಇಂದಿನ ಪ್ರಸಾರ ಸಂಪರ್ಕ, ಪ್ರಯಾಣ ಸೌಲಭ್ಯಗಳ ದಿನಗಳಲ್ಲಿ ಇದು ಸುಲಭ, ಸರಿಯಾದ ನಿಷ್ಠಾವಂತರ ನೇತೃತ್ವ ಮತ್ತು ಈ ಕೆಲಸಕ್ಕೊಪ್ಪುವ ಕಲಾವಿದರುಇದ್ದರೆ, ಸಿದ್ಧರಾದರೆ ಅನೇಕ ಸಾಧ್ಯತೆಗಳು ಈ ದಿಕ್ಕಿನಲ್ಲಿ ಇವೆ.
ತನ್ನೊಳಗೆ
ಇದೆಲ್ಲ ಸಾಧಿತವಾಗುವುದು ಕಲೆ ತನ್ನತನದಲ್ಲಿ, ತನ್ನೊಳಗೆ ತಾನಾಗಿದ್ದು ಹೊಸಸಾಧ್ಯತೆಗಳಿಗೆ ಚಾಚಿಕೊಂಡಾಗ, ಅದು ಹೇಗೆ? ಎರಡು ಬಗೆ; ವಸ್ತು ಕಥಾನಕಗಳಲ್ಲಿ, ಅಭಿವ್ಯಕ್ತಿಯ ವಿಧಾನ ವಿಸ್ತಾರದಲ್ಲಿ ಬೆಳೆ ಬೆಳವಣಿಗೆಯಲ್ಲಿ ಕ್ರಿ.1800ರಿಂದಲೇ ವಸ್ತುವಿಸ್ತಾರ ಜರುಗುತ್ತಾ ಬಂದಿದೆ. (ಉದಾ: ಮಾನಸ ಚರಿತ್ರೆ) ಇಂದಿಗೂ ನಡೆದಿದೆ.ಅದರ ಕಲಾಮೌಲ್ಯ ಯೋಗ್ಯತೆಯ ವಿಮರ್ಶೆ ಪ್ರತ್ಯೇಕ. ಇಲ್ಲಿ ಹೊಸ ಚಾಚುವಿಕೆಗಳ ಭರ,ವಾಣಿಜ್ಯಕರಣದ ಅಬ್ಬರ, ನಾವಿನೈಕ ದೃಷ್ಟಿಯ ನಿರ್ಭರಗಳಲ್ಲಿ ಹಿಂತಿರುಗಿ
ನೋಡದೆ, ಕಳೆದ ಅರ್ಧಶತಮಾನದಲ್ಲಿ ಶತಶತ ನೂತನ ಪ್ರಸಂಗಗಳೂ ಬಂದಿವೆ.ಕೆಲವು ನಿಜಕ್ಕೂ ನೈಜ ಪಂಥಾಹ್ವಾನಯುತ ನಾವೀನ್ಯವನ್ನು ಸಾಧಿಸಿದ್ದೂ ಹೌದು.ಇದಕ್ಕೆ ಬೇರೆ ಬೇರೆ ಕಾಲಗಳಲ್ಲೂ, ತಿಟ್ಟುಗಳಲ್ಲೂ ಉದಾಹರಣೆಗಳಿವೆ. ಡಾ. ಕಾರಂತರಿಂದ ತೊಡಗಿ, ಇತ್ತೀಚಿನವರೆಗೆ ಪ್ರಾಯೋಗಿಕ ಯಕ್ಷಗಾನಗಳ ಒಂದು ದೀರ್ಘ ಪರಂಪರೆಇದೆ. ನವೀನ ಪ್ರಯೋಗರಂಗ (Experimental Theatre) ಒಂದು ಗಹನವಾದ ವಿಚಾರ,ಪರಿವರ್ತನೆಯನ್ನೆಲ್ಲಾ ಪ್ರಯೋಗವೆಂದೂ, ವಿಕಾರಗಳನ್ನು ಪ್ರಗತಿಯೆಂದೂಸಮರ್ಥಿಸಲು ಈ ಪದ ಬಳಕೆ ಆಗಬಾರದು.
ದೈವಿಕ - ಲೌಕಿಕ
ಕಳೆದ ಹಲವು ವರ್ಷಗಳಲ್ಲಿ ಯಕ್ಷಗಾನದ ಪ್ರಧಾನರಂಗದಲ್ಲಿ ಕಾಣಿಸಿಕೊಂಡ ಕಥಾನಕಗಳಲ್ಲಿ ರಂಜನೆ, ಕಥನ ಕುತೂಹಲಗಳು ಮುಖ್ಯವಾಗಿ ಬಂದದ್ದು ನಿಜ.
ಆದರೆ ನಾಟಕಗಳಿಂದ, ಕಾಲ್ಪನಿಕ, ಜಾನಪದ, ಸಿನಿಮೀಯ, ಸಮ್ಮಿಶ್ರ - ಹೀಗೆ ಹಲವು ಕಥೆಗಳು ಬಂದು ಜನಪ್ರಿಯವಾಗುವುದಕ್ಕೆ ಇನ್ನೊಂದು ಕಾರಣವೂ ಇದೆ. ಆನಾಭಿರುಚಿಯು ವಿಶಿಷ್ಟ ವರ್ಗದಿಂದ ಸಾಮಾನ್ಯಕ್ಕೆ,ಪೌರಾಣಿಕತೆಯಿಂದ ಲೌಕಿಕಕ್ಕೆಬದಲಾಗಿರುವುದು(Sacred to Secular) ಇದಕ್ಕೆ ಕಾರಣ. ಕಲಾಸಹೃದಯತೆಯಲ್ಲಿ ಅಡಿ (Taste-Base)ವಿಸ್ತರಿಸಿದ್ದೂ ಇದಕ್ಕೆ ಕಾರಣ. ಹಾಗಾಗಿ ಗುಣಸುಂದರಿ, ಕನಕರೇಖೆ, ಸಿರಿಗಿಂಡೆ,
ಜಾಗರದ ಜೋಶಿ # 115