ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಭಾರತೀಯ ದರ್ಶನ ಶಾಸ್ತ್ರವನ್ನು ಅದರ ಗಹನತೆಯನ್ನು ಬಿಡದೆ, ಸರಳವಾಗಿ ನಿರೂಪಿಸಿದ ಡಾ.ಜೋಶಿ ಮತ್ತು ಪ್ರೊ.ಎಂ.ಎ.ಹೆಗಡೆಯವರ ಬರಹಗಳ ರೀತಿ ವಿಶಿಷ್ಟವಾದುದು.

- ಎ. ಈಶ್ವರಯ್ಯ

(ಭಾರತೀಯ ತತ್ವಶಾಸ್ತ್ರ ಗ್ರಂಥದಲ್ಲಿ)

ಅಧ್ಯಾಪನ, ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಲವು, ಅಭಿಮಾನ, ವಿದ್ವತ್ತು ವ್ಯಕ್ತಿತ್ವ, ವಿವಿಧ ಅಭಿರುಚಿಗಳು, ಸರಳತೆಗಳಲ್ಲಿ ಜೋಶಿಯವರು ಓರ್ವ ಅಸಾಮಾನ್ಯ ಮಾದರಿ ವ್ಯಕ್ತಿ.

ಪ್ರಾ.ಶ್ರೀಮತಿ ಸುಶೀಲಾ ಆರ್.ರಾವ್

ಸಹೋದ್ಯೋಗಿ, ಲೇಖಕಿ

ಉಡುಪಿ

... ಯಾವ ವಿಚಾರವನ್ನಾದರೂ ಒಂದೇ ಮಗ್ಗುಲಿನಿಂದ ನೋಡುವವರಲ್ಲ.ಒಳ್ಳೆಯ ವಿಚಾರದ ಕೆಟ್ಟ ಮುಖಗಳನ್ನೂ, ಕೆಟ್ಟ ವಿಚಾರದ ಮುಖಗಳನ್ನೂ ನಿರ್ಲಿಪ್ತವಾಗಿ ನೋಡಬಲ್ಲರು. ಎಷ್ಟೇ ಕೆಟ್ಟ ಕಲಾವಿದನಾದರೂ ಅವರಿಗೆ ಅಲ್ಲೊಂದು ಒಳ್ಳೆಯ ಅಂಶ ಕಾಣಸಿಗುತ್ತದೆ. ದೊಡ್ಡ ಕಲಾವಿದರ ದೌರ್ಬಲ್ಯಗಳೂ ಅವರಿಗೆ ತಿಳಿದಿದೆ. ಕಲಾವಿದನಾಗಿ ಅವರದು ಕಣ್ಣಿಗೆ ಕಟ್ಟುವ ಪಾತ್ರ ಚಿತ್ರಣವಲ್ಲ. ಆದರೂ ತೀಕ್ಷವಾದ ವೈಚಾರಿಕತೆ,ಪಾತ್ರದ ಒಳನೋಟ, ಹಾಸ್ಯಮಯ ಅಭಿವ್ಯಕ್ತಿಯಿಂದ ಅವರು ಎಲ್ಲರನ್ನೂ ಸೆಳೆಯುತ್ತಾರೆ.ಮತ್ತೆ ಮತ್ತೆ ಬೇಕೆನಿಸುತ್ತಾರೆ. ಅವರ ಭಾಷಾ ಜ್ಞಾನದ ಹರಹೂ ದೊಡ್ಡದೆ. ಕನ್ನಡ, ತುಳು, ಕೊಂಕಣಿ, ಹಿಂದಿ,ಇಂಗ್ಲಿಷ್, ಸಂಸ್ಕೃತ, ಮರಾಠಿ ಮುಂತಾದ ಭಾಷೆಗಳಲ್ಲದೆ ಉಪಭಾಷೆಗಳಾದ ಹವ್ಯಕ,ಶಿವಳ್ಳಿ, ಚಿತ್ಪಾವನಿ ಮೊದಲಾದ ಉಪಭಾಷೆಗಳಲ್ಲೂ ನಿರಾಯಾಸವಾಗಿ ವ್ಯವಹರಿಸಬಲ್ಲರು.ಅವುಗಳ ಒಂದೊಂದು ಶಬ್ದ, ವ್ಯುತ್ಪತ್ತಿ, ಬೇರೆ ಭಾಷೆಗಳಲ್ಲಿ ಅವುಗಳಿಗೆ ಸಂವಾದಿ ಶಬ್ದಗಳು, ಅವುಗಳು ಹುಟ್ಟಿದ ಬಗೆ ಇತ್ಯಾದಿ ಎಲ್ಲವೂ ಅವರ ಚಿಂತನೆಗೆ ವಸ್ತುಗಳೆ,ಅವರು ಶೀಘ್ರಕೋಪಿಗಳಾದರೂ ದೀರ್ಘಕೋಪಿಗಳಲ್ಲ. ಹಿರಿಯರಾದ ಶೇಣಿಯವರಿಂದ ಹಿಡಿದು ಹಲವು ಹಿರಿಕಿರಿಯರ ಜೊತೆಗೂ ಜಗಳವಾಡಿದ್ದಾರೆ. ಆದರೆ ಯಾರೊಂದಿಗೂ ಮುನಿಸು ಇರಿಸಿಕೊಂಡವರಲ್ಲ...

-ವೆಂಕಟರಾಮ ಭಟ್ಟ, ಸುಳ್ಯ

ಪ್ರಾಚಾರ್ಯರು, ಪ್ರತಿಭಾ ವಿದ್ಯಾಲಯ

ಶ್ರೀರಾಮ ಪೇಟೆ, ಸುಳ್ಯ - 574239



ಜಾಗರದ ಜೋಶಿ / 123