ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೂಕ್ಷ್ಮ ಸಂವೇದಿ ವಿಮರ್ಶಕ

ಗ, ನಾ, ಭಟ್ಟ, ಮೈಸೂರು

ಯಕ್ಷಗಾನವಿರಲಿ ಅಥವಾ ಸಂಗೀತ, ನೃತ್ಯ, ತಬಲಾ,ಶಿಲ್ಪ ಮುಂತಾದ
ಇತರ ಯಾವುದೇ ಕಲಾಪ್ರಕಾರವಿರಲಿ, ಆಯಾ ಕಲಾಪ್ರಕಾರದಲ್ಲಿ
ಅತಿಶ್ರೇಷ್ಠ ಕಲಾವಿದರು ದೊರೆಯುತ್ತಾರೆ.ಆದರೆ ಕಲಾವಿದರೆಲ್ಲರೂ
ಲೇಖಕರಾಗಲೀ,ವಿಮರ್ಶಕರಾಗಲೀ,ಚಿಂತಕರಾಗಲೀ,ಭಾಷಣಕಾರರಾಗಲೀ
ಆಗಿರುವುದಿಲ್ಲ. ಯಕ್ಷಗಾನ ರಂಗಭೂಮಿಯಲ್ಲಿ ವಾದಚಮತ್ಕಾರಗಳಿಂದ
ಮೆರೆಯುವ, ಉದ್ದುದ್ದ ಮಾತುಗಳಿಂದ, ಲೋಕೋಕ್ತಿಗಳಿಂದ ರಂಜಿಸುವ,
ಅದ್ಭುತವಾಗಿ ನರ್ತಿಸುವ, ತಮ್ಮ ಕಂಠಶ್ರೀಯಿಂದ ಅದ್ಭುತವಾಗಿ ಹಾಡಿ
ಜನಸಂದೋಹವನ್ನು ಆಕರ್ಷಿಸುವ ಕಲಾವಿದರು ಅಸಂಖ್ಯ ಸಂಖ್ಯೆಯಲ್ಲಿ
ಇದ್ದಾರೆ. ಅದೇ ಕಲಾವಿದರಿಗೆ 'ಹತ್ತು ನಿಮಿಷ ಭಾಷಣ ಮಾಡಿ'
ಎಂದರೆ ಹೌಹಾರುತ್ತಾರೆ. ನಿಮ್ಮ ವಿಷಯಕ್ಕೆ ಸಂಬಂಧಪಟ್ಟಂತೆ 'ಎರಡು
ಪುಟ ಲೇಖನ ಬರೆದುಕೊಡಿ' ಅಂದರೆ ಅವರ ಕೈಗಳಿಗೆ ಪೆನ್ನು-
ಹಾಳೆ ಸಿಗುವುದಿಲ್ಲ! ನೀವು ಮಾಡಿದ ಈ ಅದ್ಭುತ ಅಭಿನಯ
ಯಾವುದರಿಂದ ಪ್ರೇರಿತ? ಇದರ ಔಚಿತ್ಯವೇನು? ಇದರ ಸಾಂಕೇತಿಕಾರ್ಥ
ಏನು ಅಂತ ಅವರನ್ನು ಕೇಳಿದರೆ ಅವರು ಮೂಕರಾದಾರು ಅಥವಾ

ಜಾಗರದ ಜೋಶಿ / 9