ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನದ ಬಹುರೂಪಿ

ಕೆ. ಶ್ರೀಕರ ಭಟ್

ಡಾ. ಎಂ. ಪ್ರಭಾಕರ ಜೋಶಿಯವರು ಒಳ್ಳೆಯ ಮಾತುಗಾರ,ಭಾಷಣಕಾರ, ಅರ್ಥದಾರಿ, ಅಸಾಧಾರಣ ದರ್ಜೆಯ ಲೇಖಕ, ವಿಮರ್ಶಕ,ಉಪನ್ಯಾಸಕಾರ, ವಾಗ್ಮಿ, ಚಿಂತಕ, ಕಲೆ, ಸಾಹಿತ್ಯ, ಸಂಸ್ಕೃತಿ, ತತ್ವಜ್ಞಾನ-ಮುಂತಾಗಿ ಬಹುಮುಖಿ ಆಸಕ್ತಿ, ಬಹುಮುಖ ಅಧ್ಯಯನ - ಅನುಭವ ಹೊಂದಿದ ದಕ್ಷ ಸಂಘಟಕ, ಸಂಯೋಜಕ, ಸಂಪನ್ಮೂಲ ವ್ಯಕ್ತಿ.
ಹುಟ್ಟು ಪ್ರತಿಭಾಶಾಲಿ ಜೋಶಿಯವರ ಯಶಸ್ವಿನ ಹಿಂದೆ ಇರುವುದು ಅಧ್ಯಯನ ಪರಿಶ್ರಮ ಇವೆರಡೇ, ಯಕ್ಷಗಾನ ರಂಗದಲ್ಲಿ ಜೋಶಿ ಯವರದ್ದು ಅಕ್ಷರಶಃ ಸ್ವಯಂ ನಿರ್ಮಿತ ವ್ಯಕ್ತಿತ್ವ ಶಾಸ್ತ್ರಿ, ಸಾಮಗ,ಶೇಣಿ, ದೇರಾಜೆ, ಪೆರ್ಲ ಮುಂತಾದ ದಿಗ್ಗಜರ ಅರ್ಥಗಳನ್ನು ಮತ್ತೆ ಮತ್ತೆ ಆಲಿಸುತ್ತಾ, ನೂರಾರು ಕೂಟಗಳಲ್ಲಿ ಪಾಲ್ಗೊಂಡು ರಣರಂಗದಲ್ಲೆ ಶಸ್ತ್ರಾಭ್ಯಾಸ ಮಾಡಿದವರು. ಒಳ್ಳೆಯ ಸ್ಮರಣ ಶಕ್ತಿ, ಗ್ರಹಣ ಸಾಮರ್ಥ್ಯ, ವಾದವನ್ನು ಮಂಡಿಸುವ - ಖಂಡಿಸುವ ತರ್ಕ ನೈಪುಣ್ಯ ಜೋಶಿಯವರ ದೊಡ್ಡ ಬಲ. ಅರ್ಥಗಾರಿಕೆಯಲ್ಲಿ ಭಾವುಕತೆಗಿಂತ ವಿಚಾರಕ್ಕೆ ಆದ್ಯತೆ.ಯಾರ ಅನುಕರಣೆಯನ್ನೂ ಮಾಡುವವರಲ್ಲ.

ಜಾಗರದ ಜೋಶಿ / 19