ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗುಣಮಟ್ಟ ಎರಡರಲ್ಲೂ ಮಹತ್ವದ್ದು...
...ಇವರ ಕಲಾವಿದರ ಕುರಿತಾದ ವಿವರಗಳು, ಸಂಘಟಕರಿಗೆ ನೀಡುವ ಸಲಹೆ ಮಾರ್ಗದರ್ಶನಗಳು, ಇತರರಿಗೆ ಬೇಸರಿಕೆ ಬಾರದಂತೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲ ವಾಗ್ದಾಲಗಳು - ಈ ಎಲ್ಲವುಗಳಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರು.ಸರಕಾರದಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಜೋಶಿಯವರು ಪಡೆದಿರುವುದು ನಿಜ. ಯಕ್ಷಗಾನೋದ್ಧಾರದ ಸಾಂಘಿಕ ಪ್ರಯತ್ನದಲ್ಲಿ ಸರಕಾರವು ಇವರ ಸಾಮರ್ಥ್ಯವನ್ನು ಇನ್ನೂ ಸರಿಯಾಗಿ ಗುರುತಿಸಿ ಬಳಸಿಲ್ಲ ಎನ್ನುವುದು ಒಪ್ಪಬಹುದಾದ ಸಂಗತಿ, ತಾನು ಪ್ರತಿಪಾದಿಸುವ ಯಾವುದೇ ವಿಷಯದ ಬಗ್ಗೆ ಸೈದ್ಧಾಂತಿಕವಾಗಿ, ಶಾಸ್ತ್ರೀಯ ಶಿಸ್ತಿನಿಂದ ಚಿಂತಿಸುವ ಕೆಲವರಲ್ಲಿ ಒಬ್ಬರು.

(ಕೃಪೆ : ವಾಗರಿ, ಈ ಕಲಾರಂಗ ಉಡುಪಿ - 2009)


             'ಯಕ್ಷಗಾನದ ಅತಿ ವೈಭವೀಕರಣ ವಿಷಾದಕರ'
       “ಮಂಗಳೂರು ವಿವಿಯಲ್ಲಿ ನೀಡುವ ಯಕ್ಷಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯ
        ವಿದೆ. ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನಕ್ಕೆ
        ನೂರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ
        ಯಕ್ಷಗಾನ ವಿಕಾರ ವೈಭವೀಕರಣಗೊಳ್ಳುತ್ತಿರುವುದು ವಿಷಾದನೀಯ
        ಸಂಗತಿಯಾಗಿದೆ. ಯಕ್ಷಗಾನದಲ್ಲಿ ಬೆಳಕು-ಜ್ಞಾನ ಎಂಬ ಮಾತಿದೆ.
        ಯಾವುದೇ ಕಲೆಯಲ್ಲಿ ವೈವಿಧ್ಯ ಹಾಗೂ ಅದರ ಬಗ್ಗೆ ಪ್ರಯೋಗಗಳು
        ಬೇಕು. ಆದರೆ ಯಾವುದೇ ಕಾರಣಕ್ಕೂ ಅದರ ಸಾಹಿತ್ಯ ಹಾಗೂ
        ಕುಣಿತದಲ್ಲಿ ಬದಲಾವಣೆಗಳಾಗಬಾರದು. ಸಾಂಪ್ರದಾಯಿಕ ಕಲೆಯಲ್ಲಿ
        ಅನಾವಶ್ಯಕವಾದ ಅಂಶವನ್ನು ಒಳಗೆ ಬರುವಂತಹ ಕೆಲಸ
        ಮಾಡಬಾರದು."
                  ಯಕ್ಷಮಂಗಲ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲ...


ಜಾಗರದ ಜೋಶಿ / 26