ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಕ್ಷಗಾನದಲ್ಲಿ ಸಂಘಟನಾತ್ಮಕ
ವಿಮರ್ಶಾ ಪಂಥ ಬೆಳೆಯಬೇಕು

-ಡಾ. ಜೋಶಿ

ಸಂದರ್ಶನ: ನಾ ಕಾರಂತ ಪೆರಾಜೆ
ಸಂದರ್ಶನ:
ನಾ ಕಾರಂತ ಪೆರಾಜೆ



ಡಾ.ಎಂ. ಪ್ರಭಾಕರ ಜೋಶಿ ಯಕ್ಷಗಾನ ವಿಮರ್ಶಕ, ಅರ್ಥದಾರಿ. ವಿದ್ವಾಂಸ, ಯಕ್ಷಗಾನದ ವಿಮರ್ಶೆ, ಆಗುಹೋಗುಗಳ ಕುರಿತು ಅವರನ್ನು ಮಾತಿಗೆಳೆದಾಗ -

* ‘ಯಕ್ಷಗಾನದಲ್ಲಿ ವಿಮರ್ಶೆ’ಯ ಆರಂಭ ಕಾಲದ ಸ್ವರೂಪ ಹೇಗಿತ್ತು?

ಸುಮಾರು 1930ರಿಂದಲೇ ಯಕ್ಷಗಾನದ ವಿಮರ್ಶೆಗಳು ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಸಿಗುತ್ತವೆ. ಡಾ.ರಾಘವನ್ ಬರೆದ ಲೇಖನ, ಮುಳಿಯ ತಿಮ್ಮಪ್ಪಯ್ಯನವರು ಪಾರ್ತಿಸುಬ್ಬನ ಕುರಿತು ಬರೆದ ಬರೆಹ, ಎಂ.ಆರ್. ಶಾಸ್ತ್ರಿಗಳು, ರಾ.ಭಾ. ಹಾಸಣಗಿ - ಇವರೆಲ್ಲ ಯಕ್ಷಗಾನದ ವಿಮರ್ಶೆಗೆ ಬಹಳ ಗಟ್ಟಿಯಾದ ಅಡಿಗಟ್ಟು ಹಾಕಿದವರು. ಡಾ. ಶಿವರಾಮ ಕಾರಂತರು ತಾತ್ವಿಕವಾಗಿ, ಪ್ರಾಯೋಗಿಕವಾಗಿ ಮತ್ತು ರಚನಾತ್ಮಕವಾಗಿ ಕೂಡ ಕಾರ್ಯಾಗಾರಗಳ, ಕಮ್ಮಟಗಳ ಮೂಲಕ ಮಾಡಿ ತೋರಿಸಿದ್ದಾರೆ. ಒಂದರ್ಥದಲ್ಲಿ ಪರಿಪೂರ್ಣ ಯಕ್ಷಗಾನದ ವಿಮರ್ಶೆಯ ಮೂಲಪುರುಷ ಡಾ.ಕಾರಂತರು. ಸಂಶೋಧನೆಯಲ್ಲಿ ಅವರಷ್ಟೇ ಎತ್ತರದವರು ಕುಕ್ಕಿಲ ಕೃಷ್ಣ ಭಟ್ಟರು. ಬಳಿಕ ಮಹಾಬಲ ಭಟ್, ಡಾ. ಅಮೃತ ಸೋಮೇಶ್ವರ,

ಜಾಗರದ ಜೋಶಿ / 27