ಜಿ.ಎಸ್. ಹೆಗಡೆ, ಡಾ. ಜಿ.ಎಸ್. ಭಟ್ ಸುಳ್ಯ, ಡಾ. ಕೆ.ಎಂ. ರಾಘವ ನಂಬಿಯಾರ್..
ಹೀಗೆ ವಿಮರ್ಶಾ ಕ್ಷೇತ್ರದ ಹಲವರನ್ನು ಹೆಸರಿಸಬಹುದು.
* ತಾವು ಕಂಡಂತೆ ಯಕ್ಷಗಾನದಲ್ಲಿ ವಿಮರ್ಶಾ ಸ್ವರೂಪ ಹೇಗಿರಬೇಕು?
ಕಲೆ ಹೇಗೋ ಬೆಳೆಯುತ್ತಾ ಇರುತ್ತದೆ. ವಿಮರ್ಶೆ ಮತ್ತೊಂದು ಕಡೆಯಿಂದ
ಬೆಳೆಯುತ್ತಾ ಇರುತ್ತದೆ. ಕಲಾವಿದನಿಗೆ ವಿಮರ್ಶಕನಿಂದ ಒಳ್ಳೆಯ ಅಭಿಪ್ರಾಯ
ಪಡೆಯಬೇಕು, ಮೆಚ್ಚಬೇಕು ಎಂದು ಮಾನಸಿಕವಾಗಿ ಇರುತ್ತದೆ. 'ನಾನು ಏನು ಬೇಕಾದರೂ
ಮಾಡುತ್ತೇನೆ. ಜನ ನನ್ನನ್ನು ಮೆಚ್ಚಿದ್ದಾರೆ. ನಾನು ವ್ಯವಸಾಯಿ ಕಲಾವಿದ' ಎಂದು
ಹೇಳುವವರೂ ಇದ್ದಾರೆ. ಅವರೂ ಒಳಗಿನಿಂದ ವಿಮರ್ಶಕನ ಅಭಿಪ್ರಾಯಕ್ಕೆ ಬೆಲೆ
ಕೊಡುತ್ತಾರೆ. ಒಂದು ಪ್ರದರ್ಶನದಲ್ಲಿ ಎತ್ತಿದ ದೋಷವನ್ನು ಮತ್ತೊಂದು ಪ್ರದರ್ಶನದಲ್ಲಿ
ಸರಿಪಡಿಸಿಕೊಳ್ಳವ ಹೊಣೆಗಾರಿಕೆ ಕಲಾವಿದನಿಗೆ ಇರಬೇಕು, ವಿಮರ್ಶೆಗೂ ಮರು
ವಿಮರ್ಶೆ ಬೇಕು. ಅದು 'ಆಚಾರ್ಯ ಪೀಠ'ವಾಗಬಾರದು. ಯಕ್ಷಗಾನದ ಸಂಶೋಧನೆಗೆ
ವಿಮರ್ಶೆಯ ಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು.
ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ 'ಒಟ್ಟಾರೆ ವಿಮರ್ಶೆ'ಯಾಗುತ್ತದೆ.
ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ. ವಿಮರ್ಶಾ ಪಂಥ ಬೆಳೆಯುತ್ತಿದೆ.
*ಕಲಾವಿದರು ವಿಮರ್ಶೆಯನ್ನುಹೇಗೆ ಸ್ವೀಕರಿಸಿದರು?
ಲಾವಿದರು ವಿಮರ್ಶೆಯನ್ನು ಸ್ವೀಕರಿಸುವ ರೀತಿ ಬೇರೆ. ತಜ್ಞರು ಸ್ವೀಕರಿಸುವ
ರೀತಿ ಬೇರೆ, ಕಲಾವಿದರು ವ್ಯಕ್ತಿ ಪರಿಚಯಗಳನ್ನು ಬಹಳ ಪ್ರೀತಿಯಿಂದ ಓದುತ್ತಾರೆ.
ಆದರೆ ಅಭಿಪ್ರಾಯಗಳನ್ನು ಅಷ್ಟಾಗಿ ಓದುವುದಿಲ್ಲ. 'ಅವನು ವೇಷ ಮಾಡ್ತಾನೋ?',
“ಅವನಿಗೆ ತಿರುಗಾಟ ಮಾಡಿದ ಅನುಭವ ಉಂಟೋ..?”.. ಎಂಬ ಪ್ರತಿಕ್ರಿಯೆ ನೀಡುತ್ತಾರೆ,
ವಿಮರ್ಶಕನು ಕುಣಿಯಬೇಕಾಗಿಲ್ಲ. ಹಾಡಬೇಕಾಗಿಲ್ಲ. ವೇಷ ತೊಡಬೇಕಾಗಿಲ್ಲ ಎಂಬ
ತಿಳಿವಳಿಕೆ ಇದ್ದರೂ, ಅವರು ಅದನ್ನು ಒಪ್ಪುವುದಿಲ್ಲ. ವಿಮರ್ಶಕರ ಅಭಿಪ್ರಾಯವು
ಯಕ್ಷಗಾನದ ಒಳಗಿದ್ದವರಿಗೆ 'ಇದು ಗೊತ್ತಿದ್ದ ವಿಷಯವೇ' ಎಂದಾದ್ರೆ ಹೊರಗಿನವರಿಗೆ'ಅದು ಯಕ್ಷಗಾನದ್ದು, ನಮಗೆ ಬೇಡ' ಎಂಬ ಭಾವ. ಹಾಗಾಗಿ ಯಕ್ಷಗಾನದ ವಿಮರ್ಶೆ
ಗಂಭೀರವಾಗಿ ಇನ್ನೂ ಪರಿಗಣಿತವಾಗಿಲ್ಲ.
* ವಿಮರ್ಶೆಯ ಕ್ಷೇತ್ರಾಧ್ಯಯನದ ತಮ್ಮ ಅನುಭವ?
ನಾನು ಸ್ವತಃ ಅರ್ಥದಾರಿಯಾಗಿ, ಯಕ್ಷಗಾನದಲ್ಲಿ ಪ್ರವೃತ್ತನಾಗಿದ್ದು, ತೆಂಕು-
ಬಡಗು ತಿಟ್ಟುಗಳಲ್ಲಿ ಏಕಪ್ರಕಾರವಾದ ಸಂಪರ್ಕವು ಯಕ್ಷಗಾನದ ವಿಮರ್ಶೆಯ
ಕ್ಷೇತ್ರಾಧ್ಯಯನಕ್ಕೆ ಸಹಕಾರಿಯಾಗಿತು. ಸಂಪರ್ಕ, ತಿರುಗಾಟ, ಅಧ್ಯಯನಗಳಿಗೆ ಸುಲಲಿತ
ವಾಯಿತು. ಇಷ್ಟು ವ್ಯಾಪಕ ಸಂಪರ್ಕ ಇಟ್ಟುಕೊಳ್ಳದೆ ವಿಮರ್ಶೆ ಸಾಧ್ಯವಿಲ್ಲ. ವಿಮರ್ಶೆಯಲ್ಲಿ
ಪುಟ:ಜಾಗರದ ಜೋಶಿ.pdf/೩೫
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಜಾಗರದ ಜೋಶಿ / 28