ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಿಸಿದ್ದು ಸುರತ್ಕಲ್ ಮೂಲದ ವಾಸುದೇವ ಐತಾಳರ ಪತ್ರ ಒಂದೂವರೆ ದಶಕದ ಹಿಂದೆ, ಇನ್ನೂ ನಮ್ಮಲ್ಲಿ ಗಣಕ, ಮಿಂಚಂಚೆ, ಜಾಲತಾಣವೆಲ್ಲ ಅಂತೆ ಕಂತೆ'ಗಳಾಗಿದ್ದಾಗಲೇ ಯಕ್ಷಗಾನದ ಬಗ್ಗೆ ತನ್ನದೇ ಒಂದು ಜಾಲತಾಣ ತೆರೆದು, ನಡೆಸಿದವರು ಈ ವಾಸುದೇವ ಐತಾಳ, ಆ ಜಾಲತಾಣದ ವಿಷಯಕ ವಿವರ ಮತ್ತು ಸಂಪಾದನಾ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸಿಕೊಟ್ಟವರು ಜೋಶಿ, ಆ ವಾಸು ಐತಾಳರು ಈಗ ಜೋಶಿಯವರೇ ಅಮೇರಿಕಾಕ್ಕೆ ಬರುತ್ತಾರೆಂದ ಮೇಲೆ ಸುಮ್ಮನೆ ಕೂರುವುದುಂಟೇ? ಈಗಾಗಲೇ ಅಲ್ಲಿನ ಆರೆಂಟು ವ್ಯಕ್ತಿ, ಕನ್ನಡ ಸಂಘಗಳನ್ನು ಸಂಪರ್ಕಿಸಿ ತಾಳಮದ್ದಳೆ, ಉಪನ್ಯಾಸ, ಸಂವಾದಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇನ್ನಷ್ಟು ಮಿತ್ರರ ಮೂಲಕ ಕಲಾಪಗಳನ್ನು ಸಂಯೋಜಿಸುವ ನಿಟ್ಟಿನಲ್ಲಿ ಮುಂದುವರಿದಿದ್ದಾರೆ. ಈ ಕಲಾಪಗಳಲ್ಲಿ ತೊಡಗಿದ ಮತ್ತು ಅದರಿಂದ ಸಂಗ್ರಹವಾದ ಅನುಭವಗಳನ್ನು ಸ್ವತಃ ಜೋಶಿಯವರೇ ಅನುಕೂಲದಲ್ಲಿ ಪತ್ರಮುಖೇನ ನನಗೆ ಬರೆಯುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಸಾರ್ವತ್ರಿಕ ಮೌಲ್ಯದ ಅಂಶಗಳನ್ನು, ಅಗತ್ಯವಿದ್ದರೆ ಕನ್ನಡಿಸಿ, ಅನಿಯತವಾಗಿ ಇಲ್ಲಿ ಸಾರ್ವಜನಿಕ ಗೊಳಿಸುವ ಕೆಲಸವನ್ನು ನಾನು ಪ್ರೀತಿಯಿಂದ ವಹಿಸಿಕೊಂಡಿದ್ದೇನೆ. ಆಗಸ್ಟ್ ಹನ್ನೊಂದರಂದು ಅಮೇರಿಕಾದಲ್ಲಿಳಿದೆ. ಮಗಳಂದಿರಾದ ಶ್ವೇತಾ ಸೂರ್ಯನಾರಾಯಣ ಮತ್ತು ಸ್ವಾತಿ ಕಾರ್ತಿಕ್ ಭಟ್ ಇವರ ಮನೆಗಳ ಭೇಟಿ ಪ್ರಧಾನ ಲಕ್ಷ. ಖಂಡಾಂತರ ಪಯಣದ ಸುಸ್ತು ಪರಿಹಾರಕ್ಕೆ ಎರಡು ದಿನ ವಿಶ್ರಾಂತಿ, ಬಹಳ ಕಾಲವಾಯ್ತು - ಹೀಗೆ ಮನೆಯಲ್ಲೇ, ಕುಟುಂಬದವರೊಡನೇ ಪೂರ್ಣ ವಿಶ್ರಾಂತಿ ಅನುಭವಿಸದೆ! ಹದಿನೈದರ ನಂತರ ನನ್ನ ತಿರುಗಾಟ (ಚಿಕ್ಕಮೇಳ) ಶುರುಮಾಡಿದ್ದೇನೆ! ಒಂದು ದಿನ ಚಾಂಟಿಲಿಯಲ್ಲಿ, ಪ್ರಕಾಶ ಭಟ್ಟರ ಕುಟುಂಬದೊಡನೆ, ಉತ್ತರಕನ್ನಡದ ಸಹೃದಯಿಗಳು, ನಿರ್ದಿಷ್ಟ ಕಲಾಪವೇನೂ ಇರಲಿಲ್ಲ, ಲೋಕಾಭಿರಾಮ. - - ಮತ್ತೊಂದು ದಿನ ನನ್ನ ಬಂಧು ವಿದ್ವಾನ್ ಸತ್ಯನಾರಾಯಣ ಮರಾಠ (ಕಾರ್ಕಳದ ದುರ್ಗದವರು), ಚಾಂಟಿಲಿಯಲ್ಲಿ ಪೌರೋಹಿತ್ಯವನ್ನು ನಡೆಸುತ್ತಾರೆ. ಅವರು ನಡೆಸಿಕೊಟ್ಟ ಒಂದು ಪೂಜೆಗೂ ಅನಂತರ ಅವರ ಮನೆಗೂ ಕೊಟ್ಟ ಭೇಟಿ ಕುತೂಹಲಕರ ವಾಗಿತ್ತು. ಇವರು ಮಾಡಿಸುವ ಪೂಜೆ ಇಂಗ್ಲಿಷಿನಲ್ಲಿ ವಿವರಣಾತ್ಮಕವಾಗಿಯೂ ಇರುತ್ತದೆ. ಇಂದು ನಾನು ವಾಶಿಂಗ್ಟನ್ ಡೀಸಿ ಅಮೇರಿಕಾದ ರಾಜಧಾನಿಗೆ ಭೇಟಿ ಕೊಟ್ಟೆ. ಸಾಲಿನಲ್ಲಿ ಮೂರು ಸ್ಮಾರಕಗಳು ಲಿಂಕನ್ ಸ್ಮಾರಕ, ವಾಶಿಂಗ್ಟನ್ ಯುದ್ಧ ಸ್ಮಾರಕ ಸ್ತಂಭ ಮತ್ತು ಇವನ್ನು ಪ್ರತಿಫಲಿಸುವ ಸರಸಿ (http://nationalmall.org/explore- national-mall/monuments-memorials/lincoln-memorial-reflecting -pool). ಎಲ್ಲ ಚೊಕ್ಕ, ಮಿತ ಉಲ್ಲೇಖಗಳ ಗಂಭೀರ ವಿಚಾರಪರ ಸ್ಮರಣಿಕೆಗಳು. ನ್ಯೂಸಿಯಂ (NEUSEUM) - ಒಂದು ವಿಶೇಷ ಪ್ರದರ್ಶಿಕೆ, ಎಲ್ಲ ಪ್ರದರ್ಶನಾಲಯ ಗಳು ಭೂತಕಾಲದ ಸಂಗತಿಗಳನ್ನು ಹಿಡಿದಿಟ್ಟರೆ, ಇದು ವರ್ತಮಾನದ ಸಂಗತಿಗಳನ್ನೇ ಜಾಗರದ ಜೋಶಿ / 53