ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃತಿ ನೋಟ ಅಡಿಯಿಂದ ಮುಡಿಯವರೆಗೆ ಡಾ. ಪಾದೆಕಲ್ಲು ವಿಷ್ಣು ಭಟ್ಟ ಯಕ್ಷಗಾನ ವಿಮರ್ಶೆಯ ಕ್ಷೇತ್ರದಲ್ಲಿ ತಮ್ಮದೇ ಆದ ಮಾರ್ಗ ನಿರ್ಮಾಣ ವನ್ನು ಮಾಡಿ ಅದರಲ್ಲಿ ಸಾಕಷ್ಟು ದೂರ ಕ್ರಮಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ವಿಮರ್ಶಾ ಲೇಖನಗಳ ಸಂಕಲನ 'ಮುಡಿ' ಕೃತಿ. ನಮ್ಮ ಪರಿಸರದ ಇಬ್ಬರು ಯಕ್ಷಗಾನ ವಿಮರ್ಶಕರು ಡಾ. ಜೋಶಿ ಮತ್ತು ಡಾ.ರಾಘವ ನಂಬಿಯಾರ್. ಇವರಿಬ್ಬರೂ ಕಾರ್ಕಳದಿಂದ ಬಂದವರೆಂಬುದು ಒಂದು ವಿಶೇಷ. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು; ಇಬ್ಬರೂ ಬಾಲ್ಯದಿಂದಲೇ ಯಕ್ಷಗಾನಾಸಕ್ತಿಯನ್ನು ಬೆಳೆಯಿಸಿಕೊಂಡವರು; ಇಬ್ಬರೂ ಲೇಖಕರಾಗಿ ಪ್ರಸಿದ್ಧರಾದವರು. ವಿಭಿನ್ನ ವಿಷಯಗಳನ್ನು ಅಧ್ಯಯನ ಮಾಡಿ ಇಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿಯೇ ಡಾಕ್ಟರೇಟ್ ಪದವಿ ಪಡೆದವರು (ಡಾ. ಜೋಶಿಯವರು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾದರೆ, ಡಾ. ನಂಬಿಯಾರರು ಸಂಸ್ಕೃತ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು). ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧನೆ ಬಹಳ ವರುಷಗಳಿಂದ ನಡೆದಿದೆ. ವಿಮರ್ಶೆಯೂ ಬಹಳ ವರುಷಗಳಿಂದ ನಡೆಯುತ್ತಿದೆ. ಡಾ.ಜೋಶಿಯವರು ವಿಮರ್ಶೆಯ ಮಾರ್ಗದಲ್ಲೂ, ಸಂಶೋಧನೆಯ ಮಾರ್ಗದಲ್ಲೂ ನಡೆದವರು. ಎಷ್ಟೋ ಬಾರಿ ಈ ಕ್ಷೇತ್ರದ ಬರಹಗಳನ್ನು ಗಮನಿಸಿದಾಗ ಸಂಶೋಧನೆ ಮತ್ತು ವಿಮರ್ಶೆ ಎಂಬ ಎರಡು ವಿಷಯ ಜಾಗರದ ಜೋಶಿ / 55