ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಂದುವರಿಯುವ ದೃಷ್ಟಿಯಿಂದ ಅತ್ಯವಶ್ಯ.
ಪತ್ರಿಕೆಗಳನ್ನು ನೋಡಿದರೆ ಯಕ್ಷಗಾನದ ಬಗೆಗೆ ಚಿಕ್ಕ, ದೊಡ್ಡ ಲೇಖನಗಳನ್ನು ಬರೆದ ವರು ಸುಮಾರು ಐನೂರು ಮಂದಿ ಇರಬಹುದು. ಸಾಂದರ್ಭಿಕವಾಗಿ ಒಂದೊಂದೇ ಲೇಖನಗಳನ್ನು ಬರೆದು ಲೇಖಕರಲ್ಲದೆಯೂ ಲೇಖಕರಾದವರು ಸುಮಾರು ಅಷ್ಟೇ ಸಂಖ್ಯೆಯಲ್ಲಿರಬಹುದು. ನನ್ನ 'ಯಕ್ಷಗಾನ ಗ್ರಂಥಸೂಚಿ'ಯಲ್ಲಿರುವ ಯಕ್ಷಗಾನದ ಬರಹಗಾರರ ಸೂಚಿಯಲ್ಲಿ 755 ಹೆಸರುಗಳು ದಾಖಲಾಗಿವೆ. (2006), ಈಗ (2016ರಲ್ಲಿ) ಈ ಸಂಖ್ಯೆ ಸುಮಾರು 1500ರ‍‍ಷ್ಟು ದಾಟಿರಬಹುದೆ೦ದು ಊಹಿಸುವಂತಿದೆ. ಇಷ್ಟು ಸಂಖ್ಯೆಯ ಬರಹಗಾರರೊಳಗೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಿದವರು ಕೆಲವರೇ ಆದರೂ ಇದೊಂದು ಸಣ್ಣ ವಲಯದಲ್ಲಿ ಈ ಕ್ಷೇತ್ರ ಎಷ್ಟು ಮಂದಿಗೆ ಬರವಣಿಗೆಯ ಮತ್ತು ವಿಷಯ ದಾಖಲಾತಿಯ ಪ್ರೇರಣೆಯನ್ನು ನೀಡಿದೆ ಎಂದರೆ ಆಶ್ಚರ್ಯವಾಗುತ್ತದೆ.
ಇದು ಯಕ್ಷಗಾನದ ವಿಶಿಷ್ಟವಾದ ಶಕ್ತಿ ಮತ್ತು ಆಕರ್ಷಣೆಯೆಂದೇ ಹೇಳಬೇಕಾಗುತ್ತದೆ. ಯಕ್ಷಗಾನದ ಈ ಶಕ್ತಿಯ ಒಳಮರ್ಮಗಳೇನೆಂಬುದನ್ನು ತಿಳಿಯುವ ಪ್ರಯತ್ನವೇ ಜೊಶಿಯವ ರ ಎಲ್ಲ ಬರವಣಿಗೆಗಳ ಹಿಂದಿನ ಮುಖ್ಯ ಉದ್ದೇಶ. ಈ ಶಕ್ತಿಯನ್ನು ತಿಳಿಯುವಲ್ಲಿ, ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವಬಾರದೆಂಬುದು ಅವರ ಕಾಳಜಿ. ಇದರಲ್ಲಿ ಇನ್ನೂ ತಿಳಿಯುವ ಭಾಗ ಬಹಳ ಇದೆ - ಈಗ ತಿಳಿದುದು ಅಂಶ ಮಾತ್ರ ಎಂಬ ನಿಲುವಿನಲ್ಲಿ ವಿಮರ್ಶೆಯ ವಿನಯವಿದೆ. ಇನ್ನಷ್ಟು ತಿಳಿಯಲು ವಿಸ್ತಾರವಾದ ಅಧ್ಯಯನ, ದೇಶದ ಮತ್ತು ವಿಶ್ವದ ಕಲಾಪ್ರಕಾರಗಳ ಪರಿಜ್ಞಾನ ಇರಲೇಬೇಕೆಂಬ ನಿಲುವಿನಲ್ಲಿ ವಾಸ್ತವತೆಯ ಅರಿವಿದೆ.
ಈ ಹಿನ್ನೆಲೆಯಿಂದ 'ಮುಡಿ'ಯ ಲೇಖನಗಳನ್ನೂ, ಇತರ ಕೃತಿಗಳ ಲೇಖನಗಳನ್ನೂ ಗಮನಿಸಬೇಕು. ಅವರ ಯಕ್ಷಗಾನ ಸಂಬಂಧಿಯಾದ ಎಲ್ಲ ಬರವಣಿಗೆಗಳು ಯಕ್ಷಗಾನವೆಂಬ ನಮ್ಮ ನಾಡಿನ ಅತ್ಯಾ‍ಶ್ಚರ್ಯಕರವಾದ ಕಲಾಸಂಪ್ರದಾಯವೊಂದನ್ನು 'ಅಡಿಯಿಂದ ಮುಡಿಯ ವರೆಗೆ' ಸಮಗ್ರವಾಗಿ ನೋಡುವ ಪ್ರಯತ್ನ. ಈ ಪ್ರಯತ್ನದಲ್ಲಿ ಅವರ ಇನ್ನಷ್ಟು ಲೇಖನಗ ಳು ಬರಲಿ; ಕೃತಿಗಳು ಬರಲಿ, ಲೇಖನಗಳನ್ನು ಬರೆಯುವ ಮತ್ತು ಹೊಸ ಹೊಳಹುದನ್ನ ನೀ ಡುವ ಚಿಂತನಶಕ್ತಿಯೂ, ಅಧ್ಯಯನ ಬಲವೂ ಅವರಿಗಿದೆ. ಹೊಳೆದುದನ್ನು ಸ್ಪಷ್ಟವಾಗಿ ನಿ ರೂಪಿಸುವ ಅಭಿವ್ಯಕ್ತಿ ಸಾಮರ್ಥ್ಯವೂ ಇದೆ. ಆದುದರಿಂದ ಅವರ ಮೂಲಕ ಹೆಚ್ಚಿನ ಬರವ ಣಿಗೆಯನ್ನು ನಿರೀಕ್ಷಿಸುವುದು ತಪ್ಪಲ್ಲ. ಈ ಲೇಖನಗಳನ್ನೆಲ್ಲಓದುವವರ ಸಂಖ್ಯೆ ಕಡಿಮೆಯೇ ಇರಬಹುದು. ಆದರೆ ಇವುಗಳ ನಿಜವಾದ ಬೆಲೆಯನ್ನು ಕಾಲವು ತಿಳಿಸಿಕೊಟ್ಟೀತು.
(ಉಡುಪಿ ಯಕ್ಷಗಾನ ಕೇಂದ್ರದ ನೂತನ ಭವನ 'ಶಿವಪ್ರಭಾ' ಉದ್ಘಾಟನೆಯ ಸಮಾರ೦ಭದಲ್ಲಿ (2006) ಬಿಡುಗಡೆಗೊ೦ಡ ಡಾ.ಎಂ.ಪ್ರಭಾಕರ ಜೋಶಿಯವರ 'ಮುಡಿ' ಯಕ್ಷಗಾನ ಲೇಖನ ಸಂಕಲನ ಕೃತಿಯ ಪರಿಚಯ ಭಾಷಣದ ಪರಿಷ್ಕೃತ ವಿಕೃತ ರೂಪ)

ಜಾಗರದ ಜೋಶಿ / 58