ಇಂದಿನ ಅತ್ಯಾಧುನಿಕತೆಯಲ್ಲಿ ಯಕ್ಷಗಾನವನ್ನು ಪ್ರಭಾವಿಸುವ ಹಲವಾರು ಸನ್ನಿವೇಶಗಳಲ್ಲಿ ಕತೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡೇ ಅಥವಾ ಬಾಹ್ಯದಿಂದ ಸ್ವೀಕರಿಸುವ ಪ್ರಕ್ರಿಯೆಯಲ್ಲಿರಬೇಕಾದ ಜಾಗ್ರತೆ ಮತ್ತು ಅಗತ್ಯತೆಯನ್ನು ಜೋಶಿಯವರು
ಹೇಳುತ್ತಾರೆ “ತನ್ನತನವನ್ನು ಜಿಗುಟುತನದಿಂದ ಕಾಪಾಡಿಕೊಳ್ಳುತ್ತಾ ಸ್ವೀಕೃತ ಪ್ರಭಾವಗಳನ್ನು ಅರಗಿಸಿ ತನ್ನ ರೂಪದಲ್ಲಿ ಎರಕಗೊಳಿಸುತ್ತಾ ತನ್ನೊಳಗಿಂದ ಬೆಳೆಯುತ್ತಾ ನಾಜೂಕಾಗುತ್ತಾ ಹೊಸ ವಸ್ತು ಆಶಯ ಅಭಿವ್ಯಕ್ತಿಗಳತ್ತ ಸತತವಾಗಿ ತುಡಿಯಬೇಕಾದುದು ಕಲೆಗೆ ಸಹಜ. ಅದಕ್ಕೆ ತನ್ನ ಹೆಮ್ಮೆ ಮತ್ತು ಅತೃಪ್ತಿ ಎರಡೂ ಬೇಕು. ಅದು ವಿಕಾಸಕ್ಕೆ ಪ್ರೇರಕವಾದ ದ್ವಂದ್ವಾತ್ಮಕ ಶಕ್ತಿ”.
ಯಕ್ಷಗಾನದ ಹಾಡುಗಾರಿಕೆಯನ್ನು ವಿವೇಚಿಸುತ್ತಾ ಡಾ.ಪ್ರಭಾಕರ ಜೋಶಿಯವರೆನ್ನುವುದು - “ಯಕ್ಷಗಾನ ಸಂಗೀತವೆನ್ನುವುದು ಕರ್ಣಾಟಕೀ ಸಂಗೀತದ ಒಂದು ಪ್ರಾಚೀನ ಘನೀಕೃತ ರೂಪವೆಂದು. ವೆಂಕಟಮುಖಿಯ ಎಪ್ಪತ್ತೆರಡು ಮೇಳಕರ್ತ ರಾಗಗಳ ವಿಭಾಗೀಕರಣಕ್ಕಿಂತಲೂ ಮೊದಲೇ ಇದ್ದ ಈ ಶೈಲಿಯಲ್ಲಿ ಸುಮಾರು ನಲವತ್ತರಷ್ಟು ರಾಗಗಳ ಬಳಕೆ ಇದ್ದುದು ಕಾಲ ಕಾಲಕ್ಕೆ ಸೇರ್ಪಡೆ, ಪರಿವರ್ತನೆಗಳಾಗಿವೆ ಯಾದರೂ ಈಗಲೂ ಇದು 'ಯಕ್ಷಗಾನ ಸಂಗೀತ' ಎಂದು ಹೇಳುವ ಸ್ಪಷ್ಟರೂಪ ಅದಕ್ಕೆ ಉಳಿದು ಬಂದಿದೆ”.
ಯಕ್ಷಗಾನ ತೆಂಕಣ ಮಟ್ಟಿನ ಹಿಮ್ಮೇಳದ ನೈತಿಕ ಕೇಂದ್ರದ personification ಆದ ನೆಡ್ಲೆ ನರಸಿಂಹ ಭಟ್ಟರ ಈ ಹೇಳಿಕೆಯನ್ನು ಡಾ. ಜೋಶಿಯವರು ಭಾಗವತಿಕೆಯ ಕುರಿತು ವಿವೇಚಿಸುವಾಗ ಹೇಳುತ್ತಾರೆ: “ಹಿಮ್ಮೇಳವನ್ನು ರಿಪೇರಿ ಮಾಡಬೇಕು". ಜೋಶಿಯವರು ಹೀಗೆ ಹೇಳುತ್ತಾರೆ. “..ಭಾಗವತನ ಸ್ಥಾನವು ಮುಖ್ಯವೆಂದು ಹೇಳುವಾಗ ಆತನ ಹೊಣೆಯನ್ನು ನಿರ್ವಹಿಸಲು ಬೇಕಾದಂತಹ ಅರಿವು ಮತ್ತು ಅಭ್ಯಾಸಗಳೇ ಮುಖ್ಯವೆಂಬುದು ಭಾವ. ವ್ಯಕ್ತಿಗತವಾಗಿ ಆತನೇ ಕೇಂದ್ರವಲ್ಲ. ಪ್ರದರ್ಶನ ಕಲಾಕೃತಿಯಾಗಲು ಹಿಮ್ಮೇಳದವರಿಗೆ ತಮ್ಮ ಕೆಲಸವೇನು, ತಿಳಿವು ಸಿದ್ಧತೆ ಇಲ್ಲದಾಗ ಹಿಮ್ಮೇಳವೇ ಗೊಂದಲಗಳಿಗೆ ಕಾರಣವಾಗುತ್ತದೆ. ಡಾ.ಜೋಶಿಯವರು ಗಂಭೀರವಾದ ಆತಂಕವನ್ನು ವ್ಯಕ್ತಪಡಿಸುತ್ತಾರೆ. “ಹಿಮ್ಮೇಳಕ್ಕೆ ತಾನೇನೆಂಬ ಅರಿವಿಲ್ಲ, ತಾನೇನು ಅಲ್ಲವೋ ಆದಾಗುವ ಆಸೆ”. ಭಾಗವತಿಕೆಯ ಮೇಲೆ ಇತರ ಪ್ರಭಾವಗಳನ್ನು ವಿಶ್ಲೇಷಿಸುತ್ತಾ ...:”ಯಕ್ಷಗಾನದ ಪದ್ಯಗಳ ಸಹಜ ಛಂದೋಲಯದ ಅಂದ, ಸಂಧಿ, ಸಮಾಸ ಬಂಧದ ಸೊಗಸು, ಉಚ್ಚಾರ ನಿಖರತೆಯ ರೂಪವು (ಹೇಳುವಣಿಗೆ) ಚೂರು ಚೂರಾಗಿ ರೇಷ್ಮೆ ಬಟ್ಟೆಯೊಂದನ್ನು ಏಳೆಂಟು ಕಡೆ ಹರಿದು ಅದರಲ್ಲಿ ಆನೆ ಕುದುರೆ ಬೊಂಬೆ ಮಾಡುವ ಮಕ್ಕಳಾಟಿಕೆಯಂತೆ ಕಾಣುತ್ತದೆ -- ಹೊಸ ಹಾಡುಗಾರಿಕೆ, ಈ 'ಹೊಸ ಪದ್ಧತಿ(?) ತೆಂಕು ಬಡಗು ತಿಟ್ಟುಗಳನ್ನೆಲ್ಲ ವ್ಯಾಪಿಸಿರುವುದು ಆಘಾತಕಾರಿ.
ಯಕ್ಷಗಾನದಲ್ಲಿ ವಸ್ತು ಮಂಡನೆ ಎಂಬ ಪ್ರಬಂಧದಲ್ಲಿ ಮುಖ್ಯವಾಗುವುದು ಡಾ.ಜೋಶಿಯವರು ಪ್ರಸ್ತಾವಿಸಿದ ಯಕ್ಷಗಾನವೆಂಬುದು ಶೈಲಿ ಬದ್ಧವಾದ (stylized,
ಜಾಗರದ ಜೋಶಿ / 60