ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಿತ್ಪಾವನ ಬ್ರಾಹ್ಮಣರು ಮತ್ತು ಪರಶುರಾಮ ಹೀಗೆ ಚಿಂತಿಸುತ್ತಾ ಐತಿಹಾಸಿಕ ದೃಷ್ಟಿಯಿಂದ ಚಿತ್ಪಾವನ ಬ್ರಾಹ್ಮಣರ ಕುರಿತಾಗಿಯೂ ವಿವೇಚಿಸಿದ್ದಾರೆ.

ಹೀಗೆ ಈ ಪುಸ್ತಕ ಭಾರತೀಯ ತತ್ವಶಾಸ್ತ್ರದ ಕುರಿತಾಗಿ ಆಸಕ್ತರಲ್ಲಿಯೂ ಮತ್ತು ಭಾರತೀಯ ಸಂಸ್ಕೃತಿ ಇತಿಹಾಸದ ಆಸಕ್ತರಿಗೆ ಅತ್ಯಂತ ಅಗತ್ಯದ ಓದಾಗಿ ಪರಿಣಮಿಸುವುದ ರಲ್ಲಿ ಯಾವ ಸಂಶಯವೂ ಇಲ್ಲ. ಮುಖ್ಯವಾಗಿ ಯಕ್ಷಗಾನ ಅರ್ಥದಾರಿಗಳು ಈ ಗ್ರಂಥದಿಂದ ಉಪಕೃತರಾಗುತ್ತಾರೆ.

ಯಕ್ಷಗಾನ ಪದಕೋಶ

ಯಕ್ಷಗಾನ ಕಲೆಗೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ವಿವರಿಸುವ ಕೋಶ. 1994ರಲ್ಲಿ ಪ್ರಕಾಶಿತ, ಯಕ್ಷಗಾನ ಪದಕೋಶ- ತುಂಬಾ ಮಹತ್ವದ ಕೊಡುಗೆ. ಇಪ್ಪತ್ತನಾಲ್ಕು ವರುಷಗಳ ಬಳಿಕ ಅದರ ಪುನರ್ಮುದ್ರಣಕ್ಕೆ ಕೆಲವು ಬದಲಾವಣೆಗಳೊಡನೆ ಕೈಗೆತ್ತಿಕೊಂಡು ಅದರ ಕೆಲಸ ಸಾಗುತ್ತಿದೆ.

ಒಂದು ಉದಾ : ಅಂಡು ಕುಟ್ಟಿ: ಪೂರ್ವರಂಗದ ಕಟ್ಟು ಹಾಸ್ಯಗಳಲ್ಲಿ ಒಂದು ಬಗೆ, ಮಲೆಯಾಳಿ ಬೆಸ್ತರ ಹಾಸ್ಯ, ಬೆಸ್ತ ದಂಪತಿಗಳು 'ಕುಟ್ಟಿ ಕುಟ್ಟಿ ಪೇಶಲೆ ಅಂಡುಕುಟ್ಟಿ ಪೇಶಲೆ' ಎಂಬ ಪದ್ಯವನ್ನು ಹಾಡಿಕೊಂಡು ಬರುವರು. ಅನಂತರ ಅವರೊಳಗೆ ಜಗಳವಾಗಿ, ಗಂಡನು ಹೆಂಡತಿಗೆ ಹೊಡೆಯುವಾಗ, ಮಕ್ಕಳು (ಅಂಡುಕುಟ್ಟಿಗಳು) 'ಅಡಿಕ್ಕೊಲ್ಲಾ' (ಹೊಡೆಯಬೇಡ) ಎಂದು ತಡೆಯುವರು. `ಅಡಿಕ್ಕೊಲ್ಲ' ಹಾಸ್ಯವೆಂದರೂ ಇದೇ.

ಅತ್ಯಂತ ಆಸ್ಥೆಯಿಂದ ಗಂಭೀರವಾಗಿ ಸಂಶೋಧನೆ ಮಾಡಿ ಹೊರತಂದ ಮಹತ್ವದ ಕೃತಿ. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ಇವರ ಪ್ರಕಾಶನ, 172 ಪುಟಗಳು. ವಿವಿಧ ಲೇಖನಗಳು, ಸಂವಾದಗಳು, ವಿಮರ್ಶೆಗಳು ಹೀಗೆ ಹಲವು ಬರಹಗಳಿವೆ. ದಿ. ಸೇಡಿಯಾಪು ಕೃಷ್ಣ ಭಟ್ಟರು, ದಿ. ಕುಕ್ಕಿಲ ಕೃಷ್ಣ ಭಟ್ಟರು ದಿ. ಪೆರ್ಲ ಕೃಷ್ಣ ಭಟ್ಟರು, ಶಿವರಾಮ ಕಾರಂತರು, ಕೆ.ಎಂ. ರಾಘವ ನಂಬಿಯಾರರು, ಡಾ. ಪ್ರಭಾಕರ ಜೋಶಿಯವರು.. ಹೀಗೆ ಅನೇಕರ ಬರಹಗಳಿವೆ.

2009ರಲ್ಲಿ ಉಡುಪಿಯ ಕಲಾರಂಗ ಪ್ರಕಾಶಿಸಿದ್ದರು. ಕೃತಿಯ ಸಂಪಾದಕರು - ಡಾ. ಪಾದೆಕಲ್ಲು ವಿಷ್ಣು ಭಟ್ಟ ಮತ್ತು ಡಾ. ಎಂ. ಪ್ರಭಾಕರ ಜೋಶಿ, ಬೆಲೆ ರೂಪಾಯಿ ಮುನ್ನೂರು.

(ಇ-ಬರಹಗಳು)

ಜಾಗರದ ಜೋಶಿ / 64

(ಇ-ಬರಹಗಳು)