ವಾಗರ್ಥ, 1998 ಕರ್ನಾಟಕ ಸಂಘ ಪುತ್ತೂರು
ಜೋಶಿಯವರ ವಾಗರ್ಥಕ್ಕೊಂದು ಕೆಳೆನುಡಿ
ಡಾ. ಅಮೃತ ಸೋಮೇಶ್ವರ
ಡಾ. ಎಂ. ಪ್ರಭಾಕರ ಜೋಶಿ ಅವರು ನಾಡಿನ ಸಾಂಸ್ಕೃತಿಕ ವಕ್ತಾರರಲ್ಲಿ ಒಬ್ಬರಾಗಿದ್ದಾರೆ. ಬಹುಮುಖ ಪ್ರತಿಭೆಯ, ವೈವಿಧ್ಯಪೂರ್ಣ ಆಸಕ್ತಿಯ ಶ್ರೀಯುತರು, ಪ್ರಾಧ್ಯಾಪಕರಾಗಿ, ಯಕ್ಷಗಾನ ಕಲಾವಿದರಾಗಿ, ಸಂಘಟಕ ರಾಗಿ, ಲೇಖಕರಾಗಿ, ಭಾಷಣಗಾರರಾಗಿ, ಸಂಭಾಷಣಪಟುವಾಗಿ, ಚಿಂತಕರಾಗಿ ಆಯಾ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.ಯಕ್ಷಗಾನದಂತಹ ಜೀವಂತ ಕಲೆಯಲ್ಲಿ ಎಳವೆಯಿಂದಲೇ ತಮ್ಮನ್ನುತೊಡಗಿಸಿಕೊಂಡು, ಅದರೊಂದಿಗೆಆವರೂಬೆಳೆದಿದ್ದಾರೆ. ಆ ಕಲೆಯಜೀವನಾಡಿಯನ್ನುಹಿಡಿಸಿದ್ದಾರೆ. ಮಿಡಿದಿದ್ದಾರೆ. ಆ ಕಲೆಯರಂಗದಒಳಗಿನವರಾಗಿಯೂ ಅದರ ವಿಶ್ವರೂಪ ದರ್ಶನಮಾಡಬಲ್ಲರು;ಮಾಡಿಸಬಲ್ಲರು. ಹಾಗೆಯೇ ಕಲೆಯಚೌಕಟ್ಟಿನಹೊರಗೆವಿಮರ್ಶಕನನೆಲೆಯಲ್ಲಿನಿಂತು ವೈಚಾರಿಕನಿರ್ಪ್ತತೆಯಿಂದಲೂ ಕಲೆಯ ಆಗುಹೋಗುಗಳನ್ನು ವಿಶೇಷಿಸಬಲ್ಲರು. ಈ ವಸ್ತುನಿಷ್ಠತೆ ಅವರನ್ನು ಯಕ್ಷಗಾನದ ಶ್ರೇಷ್ಠ ವಿಮರ್ಶಕರನ್ನಾಗಿ ಮಾಡಿದೆ.
ಈ ಮೊದಲಿನ ತಮ್ಮ ಗ್ರಂಥಗಳಾದ 'ಕೇದಗೆ', 'ಜಾಗರ', “ಮಾರುಮಾಲೆ', 'ಪ್ರಸ್ತುತ'ಗಳಲ್ಲಿ ಯಕ್ಷಗಾನದ ಹಲವು ಮಗ್ಗುಲುಗಳಿಗೆ ವಿಚಾರದ ಬೆಳಕನ್ನು ಹಾಯಿಸಿದ್ದಾರೆ. ಹೊಸ ಹೊಳಹನ್ನು ನೀಡಿದ್ದಾರೆ. ಇವರ ಪಿಹೆಚ್.ಡಿ. ಸಂಶೋಧನಾ ಮಹಾಪ್ರಬಂಧ 'ಯಕ್ಷಗಾನ
ಜಾಗರದ ಜೋಶಿ / 83