ಪ್ರಧಾನವಾದ ಒಂದು ಸಂಕೀರ್ಣ ಆಶುನಾಟಕವಾಗಿ ರೂಪುಗೊಳ್ಳುವ ಬಗೆಯನ್ನು,ತಾಳಮದ್ದಳೆಯ ಅರ್ಥದಾರಿಯ ವ್ಯಕ್ತಿತ್ವ, ಪಾತ್ರಗಳೊಳಗಿನ ಸಂಬಂಧ, ಪಾತ್ರಧಾರಿಗಳೊಳಗಿನ ವೈಯಕ್ತಿಕ ಸಂಬಂಧಗಳು ಈ ರಂಗಾಪಾರವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಅರ್ಥಗಾರಿಕೆ, ನಟ ವ್ಯಕ್ತಿ ಸಂಬಂಧ ಮತ್ತು ಪಾತ್ರಸೃಷ್ಟಿ” – ಎಂಬ ಲೇಖನ ಸಮರ್ಥವಾಗಿ ಸಾದರ ಪಡಿಸುತ್ತದೆ. 'ಅಭಿನಯವೆಂದರೆ ವ್ಯಕ್ತಿತ್ವದ ಹೊರಚಾಚುವಿಕೆ” ಎಂಬುದನ್ನು ಪುಷ್ಟಿಕರಿಸುತ್ತ, ಪ್ರದರ್ಶನ ಹೇಗೆ ಪ್ರಸಂಗ ಮೀರಿ ಬೆಳೆಯುತ್ತದೆ, ಬೆಳೆಯಬೇಕು ಎಂಬುದನ್ನು ಲೇಖಕರು ವಿಶದೀಕರಿಸುತ್ತಾರೆ. ಈ ರಂಗದ ಎಲ್ಲಾ ಧನಾತ್ಮಕ ಅಂಶಗಳನ್ನು ಸರ್ವಂಕಷವಾಗಿ ಸಮೀಕ್ಷಿಸುತ್ತ ಇದರೊಂದಿಗೆ ಬೆಳೆದುಬಂದ ಕೆಲವು 'ಪಿಡುಗು'ಗಳನ್ನು ಪ್ರಸ್ತಾವಿಸಲು ಮರೆಯುವುದಿಲ್ಲ. “ಈ ರಂಗಕ್ಕೆ ದೊಡ್ಡ ಕೊಡುಗೆಗಳನ್ನಿತ್ತ ಕಲಾವಿದರೇ ಈ ಪ್ರವೃತ್ತಿಗಳಿಗೂ ಆಚಾರ್ಯಪುರುಷರಾಗಿರುವುದು ಖೇದಕರ” ಎಂಬ ನಿಷ್ಠುರ ಸತ್ಯವನ್ನು ಪ್ರಕಟಿಸಿದ್ದು ಶ್ಲಾಮ್ಯವೇ ಆಗಿದೆ.
ಯಕ್ಷಗಾನ ಕಲಾವಿದನ 'ಅರ್ಥಪ್ರಕ್ರಿಯೆ'ಯಲ್ಲಿಕ್ರಿಯಾಶೀಲವಾಗುವ ಅನೇಕ ಆಕರ ಅಂಶಗಳ ವಿಷಯವನ್ನು 'ಅರ್ಥಗಾರಿಕೆ, ಆಕರ-ಪಠ್ಯ-ನಿರ್ವಹಣೆ' ಎಂಬ ಲೇಖನ ಸೂಕ್ಷ್ಮವಾಗಿ ಚರ್ಚಿಸುತ್ತದೆ. ಇಲ್ಲಿ ಆಕರವೆಂಬುದನ್ನು ಕೇವಲ ಪ್ರಸಂಗ ಪಠ್ಯ ಅಥವಾ ಕೆಲವು ಪುರಾಣ ಗ್ರಂಥಗಳಿಗಷ್ಟೇ ಸೀಮಿತಗೊಳಿಸದೆ ಕಲಾವಿದನಿಗೆ ಮುಖಾಮುಖಿಯಾಗ ತಕ್ಕ ಹಲವಾರು ವಿಚಾರ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳುವ ಎಚ್ಚರ ಕಾಣಿಸುತ್ತದೆ.ಇಲ್ಲಿಯೂ ಸಾಕಷ್ಟು ಸಂದರ್ಭೋಚಿತ ದೃಷ್ಟಾಂತಗಳ ಪುಷ್ಟಿ ಇದೆ. ಔಚಿತ್ಯ- ವಿಚಾರ ಉದ್ದಕ್ಕೂ ಪ್ರಸ್ತಾವಿತವಾಗಿದೆ. ಅರ್ಥಗಾರಿಕೆಯ ಆಕರ ಸಾಮಗ್ರಿಯ ನಿರ್ವಹಣೆಯಲ್ಲಿ “ಅನುಶಾಸನ-ಸಂಘರ್ಷ-ಸಮನ್ವಯ'ಗಳು ಹೇಗೆ ಸಮುಚಿತವಾಗಿ ಸಮ್ಮಿಶ್ರಿತವಾಗಿವೆಎಂಬುದನ್ನು ಖಚಿತೋಚಿತವಾಗಿ ವಿವೇಚಿಸಿದ್ದಾರೆ. - 'ಯಕ್ಷಗಾನ ಪಠ್ಯ : ವಿವಿಧ ಹಂತಗಳು' ಎಂಬ ಚಿಕ್ಕ ಲೇಖನವು 'ರಂಗಪರ'ಭಿನ್ನ ಭಿನ್ನ ಆಯಾಮಗಳನ್ನು ಪರಿಶೀಲಿಸಿ,ಸಂದರ್ಭೋಚಿತ ಪರಿವರ್ತನೆಯ ತತ್ವಮತ್ತು ಪಾಠಗಳ ಬಹುತ್ವವೇ ಕಲಾಕೃತಿಯ ಜೀವಾಳ ಎಂಬುದನ್ನು ಒತ್ತಿಹೇಳುತ್ತದೆ.
ಜೀವನದ ಪ್ರತಿಯೊಂದು ವಿಚಾರದಲ್ಲೂ ಭವಿಷ್ಯದ ಒಂದುಕಲ್ಪನೆ, ಕನಸು,ನಿರೀಕ್ಷೆ ಇದ್ದೇ ಇರುತ್ತದೆ. ಯಕ್ಷಗಾನದಂಥ ಜನಪ್ರಿಯ ಕಲೆಯ ಬಗೆಗೂ ಭವಿಷ್ಯದಕಲ್ಪನೆ ಸಹಜವೇ. “ಇಪ್ಪತ್ತೊಂದನೆಯ ಶತಮಾನದಲ್ಲಿ ಯಕ್ಷಗಾನ : ಪ್ರಸಂಗಗಳು”
ಎಂಬ ಲೇಖನವು ಯಕ್ಷಗಾನ ಪ್ರಸಂಗ ಸಾಹಿತ್ಯದ ಚರಿತ್ರೆಯಸ್ಕೂಲ ನೋಟದೊಂದಿಗೆಪ್ರಸ್ತುತ ಕಾಲದ ಜೀವನ ದರ್ಶನ ಹಾಗೂ ಭವಿಷ್ಯದ ಪ್ರಸಂಗ ರಚನೆಯ ಮುನ್ನೋಟವನ್ನೂ ಒದಗಿಸುತ್ತದೆ.
ಒಟ್ಟಿನಲ್ಲಿ ಈ ಸಂಕಲನವು ಸಂವೇದನಾಶೀಲನೂ,ಬಹುಶ್ರುತನೂ, ಕಲೆಯಬಗೆಗೆ ಅತೀವ ಕಾಳಜಿ ಇದ್ದವನೂ ಆದೊಬ್ಬ ಜವಾಬ್ದಾರಿಯುತ ವಿಮರ್ಶಕನ ಪ್ರೌಢವಿಚಾರ ಸಂಚಯವಾಗಿದೆ. ಉತ್ತಮ ವೀಮಾಂಸಾ ಕೃತಿಯಾಗಿದೆ. ವಸ್ತುನಿಷ್ಠತೆಯ
ಜಾಗರದ ಜೋಶಿ