ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೆಸರಿನಲ್ಲಿ ಲೇಖಕರು ನೀರಸ ನಿರೂಪಕರಾಗುವುದಿಲ್ಲ. ಎಲ್ಲಾ ಲೇಖನಗಳಲ್ಲೂ ಸಮತೋಲನ ದೃಷ್ಟಿ ಮತ್ತು ಪ್ರಬುದ್ಧತೆ ಗೋಚರಿಸುತ್ತದೆ. ಹಲವು ಆಧುನಿಕ ವಿಮರ್ಶಾ ಗ್ರಂಥಗಳಂತೆ ಇವರ ಶೈಲಿ ಅನಾವಶ್ಯಕವಾದ ಕ್ಲಿಷ್ಟತೆಯನ್ನೂ, ಪೆಡಸುತನವನ್ನೂ ಹೊಂದಿರದೆ ಮಿತವಾದ ಪಾರಿಭಾಷಿಕ ಶಬ್ದಗಳಿಂದ ಕೂಡಿ ಆಪ್ಯಾಯಮಾನವಾಗಿದೆ.

 ಗೆಳೆಯ ಡಾ. ಜೋಶಿಯವರ ಈ ಇಷ್ಟವೃತ್ತಿ ಹೀಗಿಯೇ ಸಾಗಲೆಂದೂ, ಯಕ್ಷಗಾನ ವಿಮರ್ಶಾ ದಿಗಂತವನ್ನು ವಿಸ್ತರಿಸಿದ ಈ ಕೃತಿಯು ಯಕ್ಷಗಾನ ಅಧ್ಯಯನಶೀಲರಿಗೆ

ಮೆಚ್ಚುಗೆಯಾಗಲೆಂದೂ ಹಾರೈಸುತ್ತೇನೆ.

(14-02-1998)

ಜಾಗರದ ಜೋಶಿ / 87