ವಿಷಯಕ್ಕೆ ಹೋಗು

ಪುಟ:ಜಾಗರದ ಜೋಶಿ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಯಕ್ಷಗಾನ ಪದಕೋಶ, 1994 ಪ್ರಾದೇಶಿಕ ಜಾನಪಕ ರಂಗಕಲೆಗಳ ಅಧ್ಯಯನ ಕೇಂದ್ರ

ಎಂ.ಜಿ.ಎಂ. ಕಾಲೇಜು, ಉಡುಪಿ
(ದಿ) ಪ್ರೊ. ಕು.ಶಿ. ಹರಿದಾಸ ಭಟ್ಟ

- ಯಕ್ಷಗಾನದ ಶಾಸ್ತ್ರೀಯ ವಿವೇಚನೆಯಲ್ಲಿ ಪಳಗಿದ ವಿಮರ್ಶಕ ಮಿತ್ರ ಡಾ.ಪ್ರಭಾಕರ ಜೋಶಿಯವರ ಒಂದು ಮುಖ್ಯ ಕೃತಿ ಯಕ್ಷಗಾನ ಪದಕೋಶ', ಯಕ್ಷಗಾನ ಕಲೆಯ ಸಮಗ್ರ ಪಾಂಡಿತ್ಯವನ್ನು ತನ್ನ ವ್ಯಕ್ತಿತ್ವದಲ್ಲಿ ಅನುಭವಪೂರ್ಣವಾಗಿ ಅಳವಡಿಸಿ ತನ್ನ ಉಪನ್ಯಾಸ - ಲೇಖನ ಕಲೆಯ ಪ್ರತ್ಯಕ್ಷ ಹಾಗೂ ನಿಕಟ ದರ್ಶನಗಳಿಂದಾಗಿ ಜೋಶಿಯವರು ಈಗಾಗಲೇ ಯಕ್ಷಗಾನ ಪ್ರಪಂಚದಲ್ಲಿ ಸುಪ್ರಸಿದ್ದರು. ಅವರ ತರ್ಕಶಕ್ತಿ, ವಾಗ್ನಿಯತೆಯನ್ನು ಅರಿಯದವರಿಲ್ಲ. ಮೆಚ್ಚಿಕೊಳ್ಳದವರಿಲ್ಲ. ಅವರ ಮಾತಿನ ಸಮ್ಮೋಹಿನಿಗೆ ಮರುಳಾಗದವರಿಲ್ಲ..

ಜಾಗರದ ಜೋಶಿ / 88