ಕೃಷ್ಣಸಂಧಾನ-ಪ್ರಸಂಗ ಮತ್ತು ಪ್ರಯೋಗ, 1998
ಜಾನಪದ ರಂಗಗಕಲೆಗಳ ಅಧ್ಯಯನ ಕೇಂದ್ರಚಕ್ರದೃಷ್ಟಿಯ ಸಂಶೋಧನೆ ಪ್ರೊ. ಕು.ಶಿ. ಹರಿದಾಸ್ ಭಟ್ಟ (ದಿ.)
'ಕೃಷ್ಣಸಂಧಾನ : ಪ್ರಸಂಗ ಮತ್ತು ಪ್ರಯೋಗ' - ಇದು ಪ್ರಸಿದ್ಧ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಅವರು ಮಂಗಳೂರು ವಿವಿ, ಪಿಎಚ್.ಡಿ.ಗೆ ಸಾದರಪಡಿಸಿದ ಮಹಾಪ್ರಬಂಧ, ಒಂದು ಪ್ರಸಂಗವನ್ನೇ ಕೇಂದ್ರೀಯ ಸ್ಥಾನದಲ್ಲಿರಿಸಿ ಅದರ ಸುತ್ತಲೂ ಚಕ್ರದೃಷ್ಟಿ ಬೀರುತ್ತ ಯಕ್ಷಲೋಕದ ಸಾರಸರ್ವಸ್ವವನ್ನು ಸ್ವಾರಸ್ಯಕರವಾಗಿ ವಿಶ್ಲೇಷಿಸುವ ಈ ಪ್ರಬಂಧ ಜಿಜ್ಞಾಸುಗಳಿಂದ ಆದರ ಸಮ್ಮಾನಗಳನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ತಾಳಮದ್ದಳೆಯನ್ನುಒಂದು ವಿಶಿಷ್ಟ ಕಲಾಸ್ವರೂಪವನ್ನಾಗಿ ನಿರ್ಮಿಸಿದ ಹಳೆತಲೆಮಾರಿನಪೊಳಲಿ ಶಾಸ್ತ್ರಿಯವರು, ಕೆ.ಪಿ.ವೆಂಕಪ್ಪ ಶೆಟ್ಟರು, ಕುಬಣೂರು ಬಾಲಕೃಷ್ಣರಾಯರು, ಶಂಕರನಾರಾಯಣ ಸಾಮಗರು, ಎನ್.ಎಸ್.ಕಿಲ್ಲೆಯವರು ಹಾಗೂ ಇಂದಿಗೂ ಕಾರ್ಯನಿರತರಾಗಿರುವ ಸುಪ್ರಸಿದ್ದ ಅರ್ಥದಾರಿಗಳಾದ ಶೇಣಿ, ಪೆರ್ಲರಂತಹ ಎಷ್ಟೋ ಎಳೆಯವರಾದರೂ ಅವರ ಜತೆಯಲ್ಲಿ ಸರಿದೊರೆಯಾಗಿ ಅರ್ಥ ಹೇಳುವ ಅಪ್ರತಿಮ ಕೌಶಲದಿಂದ ರಸಿಕರನ್ನು ಬೆರಗುಗೊಳಿಸುವ ಪ್ರತಿಭಾಶಾಲಿ ಅರ್ಥಕೋವಿದರು,ಡಾ.ಪ್ರಭಾಕರ ಜೋಶಿ, ಹೆಚ್ಚಿನ ಪಿಎಚ್.ಡಿ. ಪ್ರಬಂಧಗಳಲ್ಲಿ ಅಷ್ಟೋಇಷ್ಟೋ ಮೌಲಿಕ ಅನ್ವೇಷಣೆ ಏನೋ ಇರುತ್ತದೆ. ಆದರೆ ಜೋಶಿಯವರ ಅನ್ವೇಷಣೆ ಗಂಗಾಪ್ರವಾಹದಂತೆ ಸುತ್ತಿನೆಲ್ಲವನ್ನು ಒಳಗೊಂಡು ಮುನ್ನಡೆ
ಜಾಗರದ ಜೋಶಿ / 89