ಪುಟ:ಜೀರ್ಣವಿಜಯನಗರಾದರ್ಶನಂ .djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಜೀರ್ಣವಿಜಯನಗರಾದರ್ಶಂ

ಪೂರ್ವಭಾಗ.

ಅತಿತ್ವರ್ಯದಲ್ಲಿಯೇ ಅಭಿವೃದ್ಧಿಯನ್ನು ಪಡೆದು ಅಚಿರಕಾದಲ್ಲಿಯೇ ಕ್ಷೀಣದಶೆಯನ್ನು ಹೊಂದಿ ಅಸ್ತಮಿಸಿದ ರಾಜ್ಯಗಳ ವಿಜಯನಗರದ ರಾಜ್ಯವು ಒಂದಾಗಿದೆ. ರಮಾರಮಿ ಮುನ್ನೂರು ಸಂವತ್ಸರಗಳು ಈ ರಾಜ್ಯವು ಅತಿವೈಭವದಿಂದ ಮೆರೆಯುತಿತ್ತು. ಪ್ರಸಿದ್ಧ ಯಾತ್ರಾಸ್ಥಾನವಾದ ಹಂಪೆಯು ಈ ವಿಜಯನಗರರಾಜ್ಯಕ್ಕೆ ಮುಖ್ಯ ಪಟ್ಟಣವಾಗಿದ್ದುದು. ಒಂದಾನೊಂದು ಕಾಲದಲ್ಲಿ ಈ ಪ್ರಪಂಚದ ನಗರಗಳಲ್ಲೆಲ್ಲಾ ಸಕಲ ವಿಧಗಳಲ್ಲಿಯ ಅಗ್ರಗಣ್ಯವಾಗಿ ಕಡುಪ್ರಖ್ಯಾತಿಯನ್ನು ತಳೆದಿದ್ದುದು ಈ ವಿಜಯನಗರವೇ. ಈ ನಗರರಾಜ್ಯವು ಪ್ರಕೃತದಲ್ಲಿ ಶಿಥಿಲರೂಪದಿಂದ ಆಯಾಚಿಹ್ನೆಗಳನ್ನು ತೋರಿಸುತ್ತಲಿದೆ. ಈ ಜೀರ್ಣವಿಜಯನಗರವನ್ನೂ, ಅದರಲ್ಲಿನ ವಿಷಯಗಳನ್ನೂ ವರ್ಣಿಸತೊಡಗುವುದಕ್ಕೆ ಮೊದಲು ವಿಜಯನಗರ ಸಾಮ್ರಾಜ್ಯವನ್ನು ಕುರಿತ ಇತಿಹಾಸವನ್ನು ಸಂಗ್ರಹವಾಗಿ ತಿಳಿಸುವುದು ಅಗತ್ಯ.

ಉತ್ತರಹಿಂದೂಸ್ಥಾನದಿಂದ ಮಹಾಪ್ರವಾಹವಾಗಿ ಹೊರಟು, ದಕ್ಷಿಣ ಹಿಂದೂದೇಶದಲ್ಲಿನ ಹಿಂದೂಮತವನ್ನೂ, ಹಿಂದೂರಾಜ್ಯವನ್ನೂ ರೂಂಪಳಿಸುವುದಕ್ಕೆ ಸಿದ್ಧವಾಗಿದ್ದ ಮಹಮ್ಮದೀಯರೆಂಬ ಮಹಾನದಿಯನ್ನು ಇನ್ನೂರೈವತ್ತು ವರುಷಗಳವರೆಗೆ ಅಡಗಿಸಿ, ಹಿಂದೂಮತವನ್ನೂ, ಹಿಂದುಗಳ ಸ್ವಾತಂತ್ರಗಳನ್ನೂ ರಕ್ಷಿಸಿದ ವಿಜಯನಗರಸಾಮ್ರಾಜ್ಯವನ್ನು ವರ್ಣಿಸಲಿಕ್ಕೆ ಸಹಸ್ರಜಿಹ್ವನಾದ ಆದಿಶೇಷನೂ ಶಕ್ತನಾಗನು. ಕ್ರಿ. ಶ. 1307 ರಲ್ಲಿ