ಪುಟ:ಜೀರ್ಣವಿಜಯನಗರಾದರ್ಶನಂ .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಜೀರ್ಣವಿಜಯನಗರಾದರ್ಶo


ಸಂಗಮನೆಂಬ ರಾಜಕುಮಾರನ ಮಕ್ಕಳಾದ ಹರಿಹರ, ಬುಕ್ಕರಾಯ ರೆಂಬುವರು ಓರುಗಲ್ಲು ರಾಜರ ಹತ್ತಿರ ಕೋಶಾಧ್ಯಕ್ಷರಾಗಿದ್ದು 1323 ರಲ್ಲಿ ಮಹಮ್ಮದೀಯರು ಓರಗಲ್ಲನ್ನು ಹಾಳುಮಾಡಿದಾಗ ಈ ಓರಗಲ್ಲನ್ನು ಬಿಟ್ಟು, ಆನೆಗೊಂದಿ ಸಂಸ್ಥಾನಾಧಿಪತಿಯ ಹತ್ತಿರಕ್ಕೆ ಬಂದರು. ಹರಿಹರನು ಆ ಸಂಸ್ಥಾನಕ್ಕೆ ಮಂತ್ರಿಯಾದನು. ಬುಕ್ಕರಾಯನು ಕೋಶಾಧ್ಯಕ್ಷನಾದನು. ದೆಹಲೀಶ್ವರನಾದ ಮಹಮ್ಮದ್ ತೊಗಲಖನ ಸೋದರಳಿಯನು ತನ್ನ ಸೋದರಮಾವನ ಆಗ್ರಹಕ್ಕೆ ಪಾತ್ರನಾದುದರಿಂದ ಆತನಿಗೆ ಹೆದರಿ ದೆಹಲಿಯಿಂದ ಓಡಿಬಂದು ಆನೆಗೊಂದಿರಾಜನನ್ನು ಆಶ್ರಯಿಸಿದನು. ಇದರಿಂದ ಆ ದೆಹಲೀ ಶರನು ಅತ್ಯಂತ ಕೋಪಾವಿಷ್ಟನಾಗಿ 1334 ರಲ್ಲಿ ಆನೆಗೊಂದಿಯ ಮೇಲೆ ದಂಡೆತ್ತಿ ಬಂದನು, ಆನೆಗೊಂದಿಯ ಅರಸನು ತನಗೆ ಪರಾಭವವಾಗುವುದು ನಿಜವೆಂದು ತಿಳಿದು, ಅದರಿಂದುಂಟಾಗುವ ಅಪಮಾನಗಳನ್ನು ಸಹಿಸಲಾರದೆ ತನ್ನ ಭಾರಾ ಪುತಾದಿಗಳನ್ನು ತನ್ನ ಕೈಗಳಿಂದಲೇ ಸಂಹರಿಸಿ, ಕೋಟೆಯಿಂದ ಹೊರಟು ಬಂದು ರಣಭೂಮಿಯಲ್ಲಿ ಘೋರವಾಗಿ ಕಾದಿ, ವೀರಶಯ್ಯವನೆಯ್ದಿದನು, ದೆಹಲೀಶ್ವರನು ಈ ರೀತಿಯಲ್ಲಿ ಸ್ವಾಧೀನಪಡಿಸಿ ಕೊಂಡ ರಾಜ್ಯದಲ್ಲಿ ತನ್ನ ಕಡೆಯ ಅಧಿಕಾರಿಯನ್ನೊಬ್ಬನನ್ನಿರಿಸಿ ದೆಹಲಿಗೆ ಹೋದನು. ಆನೆಗೊಂದಿಯ ಪ್ರಜೆಗಳೆಲ್ಲರೂ ಈ ಮಹಮ್ಮದೀಯರ ಆ೪ಕೆಯನೊಲ್ಲದೆ ಆ ಅಧಿಕಾರಿಯ ಮೇಲೆ ತಿರುಗಿಬಿದ್ದರು. ದೆಹಲೀಠ ರನು ಇದನ್ನು ಕೇಳಿ ಆನೆಗೊಂದಿರಾಜ್ಯವನ್ನು ಪಾಲಿಸುವುದು ತನಗೆ ಅತಿ ದುರ್ಘಟವೆಂದು ತಿಳಿದು, ಆನೆಗೊಂದಿ ರಾಜವಂಶಸ್ಥರು ಒಬ್ಬರೂ ಇಲ್ಲದ ರಿಂದ ಅದುವರೆಗೆ ತಾನು ಹಿಡಿದುಕೊಂಡುಹೋಗಿ ಸೆರೆಯಲ್ಲಿ ವೃದ್ದ ಆರುಜನ ರಾಜಕುಮಾರರನ್ನು ಕರೆಯಿಸಿ, ಆನೆಗೊಂದಿ ರಾಜನಹತ್ತಿರ ಅದುವರೆಗೂ ಮಂತ್ರಿ ಪದವಿಯನ್ನು ಹೊಂದಿದ್ದ ಹರಿಹರರಾಯನಿಗೆ ರಾಜ್ಯವನ್ನಿತ್ತು ಆತ ನನ್ನು ತನ್ನ ಸಾಮಂತರಾಜನನ್ನಾಗಿ ಒಡಂಬಡಿಸಿಕೊಂಡು ಅವನ ತಮ್ಮ