ಪುಟ:ಜೀರ್ಣವಿಜಯನಗರಾದರ್ಶನಂ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶ೦ MMww೧ ತನ್ನ ತಂದೆತಾತಂದಿರಂತೆಯೇ ಈ ವಿಜಯನಗರದ ಸಾಮ್ರಾಜ್ಯವನ್ನು ವಿಸ್ತ ರಿಸಿದನು. ಈ ನರಪಾಲನು ನಗರದಲ್ಲಿದ್ದ ಅನೇಕ ತಗ್ಗು ಪ್ರದೇಶಗಳನ್ನು ಮುಚ್ಚಿಸಿ, ಪ್ರಾಕಾರಗಳನ್ನು ಕಟ್ಟಿಸಿದನು. ಈ ಪ್ರಾಕಾರಗಳು ಈಗ ಶಿಥಿಲರೂಪವನ್ನು ಹೊಂದಿವೆ. ತುಂಗಭದ್ರಾ ನದಿಗೆ ಅಣೆಕಟ್ಟೆಯನ್ನು ಕಟ್ಟಿಸಿ, ಪಟ್ಟಣ ದೊಳಕ್ಕೆ ಕಾಲುವೆಗಳನ್ನು ತಿರುಗಿಸಿ, ನಗರದಲ್ಲಿ ಯಾವಾ ಗಲೂ ಜಲಸಮೃದ್ಧಿಯಾಗಿರುವಂತೆ ಮಾಡಿದುದೇ ಈ ಮಹಾಪಟ್ಟಣಕ್ಕೆ ಈ ರಾಜನು ಮಾಡಿದ ಮಹದುಪಕಾರವಾಗಿರುವುದು, ಹೀಗೆ ಪಟ್ಟಣದಲ್ಲಿ ಜಲಸಮೃದ್ಧಿಯಾಗಿರುವುದರಿಂದ ಎಲ್ಲಿ ನೋಡಿದರಲ್ಲಿ ಲತಾವಿಕುಂಜಗಳ, ಪುಪ್ಪೋದ್ಯಾನಗಳ, ದ್ರಾಕ್ಷಾ ತಾಂಬೂಲಾದಿವನಗಳ ಸಮೃದ್ಧಿಯಾಗಿ ವೃದ್ಧಿಯಾಗಿ, ೫ನರಿಗೆ ಸಂಪದಭಿವೃದ್ಧಿಯಾದುದರಿಂದ ಪ್ರಭುವಿಗೆ ನೂತನ ವಾಗಿ ಹನ್ನೆರಡು ಲಕ್ಷ ವರಹಗಳ ಆದಾಯ ಉಂಟಾಯಿತಂತೆ ! ಈ ಕಾಲುವೆಯು ಈಗಲೂ ಅಭಿವೃದ್ಧಿ ಸ್ಥಿತಿಯಲ್ಲಿಯೇ ಇದೆ. ಈತನು 1422ರ ವರೆಗೆ ರಾಜ್ಯವನ್ನಾಳಿದನು. ಎರಡನೆಯ ಬುಕ್ಕರಾಯನ ತರುವಾಯ ಈತನ ಮೊಮ್ಮಗನಾದ ಎರಡನೆಯ ದೇವರಾಯ ಅಥವಾ ಇಮ್ಮಡಿ ದೇವರಾಯನೆಂಬುವನು ಪಟ್ಟಕ್ಕೆ ಬಂದನು. ಈತನ ಆಳ್ವಿಕೆ 1423 ರಿಂದ 1446 ರ ವರೆಗೆ ಇತ್ತು, ಈತನು ಹಲವು ದಿಗ್ವಿಜಯಗಳನ್ನು ಮಾಡಿ ಘನತೆಯನ್ನು ಪಡೆದನು. ಈ ನರಪಾಲ ನಿಗೆ ನಿಂಹಳ, ಕೀರ್ತಿ , ಮೊದಲಾದ ಅನೇಕ ದೇಶಾಧೀಶರು ಸಾಮಂತರಾಗಿ ಪೊಗುದಿಯನ್ನು ಕೊಡುತ್ತಿದ್ದರಂತೆ ! 1443 ರಲ್ಲಿ ಈ ರಾಜಧಿರಾಜನ ಬಳಿಗೆ ಪ್ರತ್ಯಾಚಕ್ರವರ್ತಿಯು ಒಬ್ಬರಾಯಭಾರಿಯನ್ನು ಕಳುಹಿಸಿದ್ದ .ನಂತೆ ! ಇದರಿಂದ ಈ ಮಹನೀಯನ ಸಾಮ್ರಾಜ್ಯವೈಭವವು ಪ್ರಕಾಶ ಪಡುವುದು, Q @. 0 ೧.