ಪುಟ:ಜೀರ್ಣವಿಜಯನಗರಾದರ್ಶನಂ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಎರಡನೆಯ ದೇವರಾಯನಿಗೆ ನಿಂಹಳ ದೇವಿಯಿಂದ ಮಲ್ಲಿಕಾರ್ಜು ನನು ಹುಟ್ಟಿದನು. ರಾಜನತರುವಾಯ ಈ ವಲ್ಲಿಕಾರ್ಜುನನೇ ಅರಸನಾ ದನು. ಈತನ ಆಳ್ವಿಕೆಯಲ್ಲಿ ರಾಜ್ಯದ ಕೆಲಸಗಳು ಯಾವುವೂ ಇರಲಿಲ್ಲ. ತಿಮ್ಮಣ್ಣ ಧಣಾಯಕನು ಈತನ ಮಂತ್ರಿಯಾಗಿದ್ದನು. ಈ ನರಪಾಲನು 1446 ರಿಂದ 1465 ರ ತನಕ ರಾಜವನ್ನಾಳಿದನು. ಈತನಿಗೊಬ್ಬ ಮಗ ನಿದ್ದನು. ಮಲ್ಲಿಕಾರ್ಜುನನ ತರುವಾಯ ಇವನ ತಮ್ಮನಾದ ವಿರೂಪಾಕ್ಷ ರಾಯನು ಪಟ್ಟವನ್ನೇರಿದನು. ಮಲ್ಲಿಕಾರ್ಜುನನ ಮಗನಿದ್ದರೂ ಈತನ ತಮ್ಮನೇ ರಾಜ್ಯಾಧಿಪತಿಯಾದುದರಿಂದ ಆ ಮಗನ ಗತಿ ಏನಾಯಿತೆಂಬುವದು ವಿಶದವಾಗಿತಿಳಿಯದು, ವಿರೂಪಾಕ್ಷ ರಾಯನು 1465 ರಿಂದ 1478 ರ ತನಕ ಆಳಿದನು. ಈತನು ಸುರಾಪಾನಮತ್ತನಾಗಿ, ಪ್ರಜೆಗಳಿಗೆ ಅಗೋಚರನಾಗಿ, ಯಾವಾಗಲೂ ಅಂತಃಪುರದಲ್ಲಿಯೇ ಇರುತ್ತಿದ್ದನು. ಈತನು ಅತಿ ಮೂರ್ಖ ನಾಗಿ ದಂಡನಾಯಕರಲ್ಲಿ ವಿರೋಧವನ್ನು ಕಟ್ಟಿಕೊಂಡುದರಿಂದ ಈತನ ರಾಜ್ಯದಲ್ಲಿ ತುರುಷ್ಕರು ಪ್ರವೇಶಮಾಡಿ ಅನೇಕ ದುರ್ಗಗಳನ್ನು ಸ್ವಾಧೀನ ಪಡಿಸಿಕೊಂಡರು, ವಿಷಯಾಸಕ್ತನಾದ ಈ ನರಪಾಲನನ್ನು ಇವನ ಹಿರಿಯ ಮಗನಾದ ರಾಜಶೇಖರರಾಯನು ಕೊಲ್ಲಿಸಿದನು. 1478 ರಲ್ಲಿ ಇವನ ತಮ್ಮನಾದ ಎರಡನೆಯ ವಿರೂಪಾಕ್ಷಿರಾಯನು ಈತನನ್ನು ಅಂತ್ಯಗೊಳ್ಳಿ ಸಿದನು. ಆದರೂ ಇಂತಹ ದುಷ್ಟನ ಆಳ್ವಿಕೆಯು ಪ್ರಜೆಗಳಿಗೆ ಅಸಹ್ಯವಾ ಗಿತ್ತು. ಬುಕ್ಕರಾಯನ ವಂಶಸ್ಥರಿಗೆ ಬಂಧುವಾಗಿಯೂ ಸಾಳುವವಂಶಜಾತ ನಾಗಿಯೂ ಇರುವ ಸಾಳುವ ನರಸಿಂಹರಾಜನು ನಗರದಲ್ಲಿ ಯ ಪ್ರಜೆಗಳ ವಿಶ್ವಾಸಪಾತ್ರನಾಗಿದ್ದುದರಿಂದ ಆ ರಾಜನನ್ನು ಹೊರಡಿಸಿ, ತಾನೇ ರಾಜ್ಯಾ ರೂಢನಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಪ್ರಭುವಾದನು ಇದಕ್ಕೆ ಮುಂಚೆ