ಪುಟ:ಜೀರ್ಣವಿಜಯನಗರಾದರ್ಶನಂ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ಪರರಾಯರಿಗೆ ಸ್ವಾಧೀನವಾಗಿ ಇವರಿಗೆ ಕೈತಪ್ಪಿ ಹೋಗಿದ್ದ ದೇಶಗಳನ್ನು ಪರಾಕ್ರಮಧುರಂಧರನಾದ ಈ ರಾಜನು ಮರಳ ಜಯಿಸಿ ಸ್ವಾಧೀನಮಾಡಿ ಕೊಂಡನು. ಈತನಿಗೆ ಅಷ್ಟರಲ್ಲಿಯೇ ಅವಸಾನಕಾಲವು ಸವಿಾಪವಾದುದ ರಿಂದ ಉದಯಗಿರಿ, ರಾಯಚೂರು, ಕೊಂಡವೀಡು ಎಂಬ ಮೂರು ದುರ್ಗ ಗಳನ್ನು ಮಾತ್ರ ಹಿಡಿದುಕೊಳ್ಳಲು ಅವಕಾಶ ತಪ್ಪಿತು. ಈ ಮಹಾರಾಜನಿಗೆ ಇಬ್ಬರು ಮಕ್ಕಳಿದ್ದರು. ಈತನ ಅಂತ್ಯ ಕಾಲದಲ್ಲಿ ತನ್ನ ಸೇನಾಪತಿ ಯಾಗಿಯ, ಈಶ್ವರರಾಜನ ಪುತ್ರನಾಗಿಯೂ, ಭಗವದ್ಭಕ್ತಿಪರಾಯಣ ನಾಗಿಯ, ಅತ್ಯಂತ ಪರಾಕ್ರಮಶಾಲಿಯಾಗಿ ಇದ್ದ ಸಾಳವ ನರಸ ರಾಜನನ್ನು ಕರೆಯಿಸಿ, ತನ್ನ ಪುತ್ರದ ಯವನ್ನೂ, ವಿಜಯನಗರದ ಸಾವಾ, ಜ್ಯವನ್ನೂ ಆತನ ಸ್ವಾಧೀನಮಾಡಿ, ಕೀರ್ತಿಶೇಷನಾದನು. ಈ ಸಾಳುವ ನರಸಿಂಹರಾಯನು 1487 ರಿಂದ 1490 ರ ವರೆಗೆ ಆಳಿದನು. ಈ ಸಾಳವ ನರಸಿಂಹರಾಜನು ಲೋಕಾಂತರವನ್ನೆಯಿದ ತರು ವಾಯ ಇವನ ಜೈಷ್ಣ ಪುತ್ರನಾದ ನರಸರಾಜನಿಗೆ ಪಟ್ಟವನ್ನು ಕಟ್ಟಿ ಈತನು ಅಪ್ರಾಪ್ತ ವಯಸ್ಕನಾದುದರಿಂದ ತುಳುವ ನರಸರಾಜನೇ ರಾಜ ಕಾರಗಳನ್ನು ನೋಡಿಕೊಳ್ಳುತ್ತಿದ್ದನು. ಆ ಕಾಲದಲ್ಲಿಯೇ ಯಾರೋ ಒಬ್ಬ ದುಷ್ಟನು ಬಾಲರಾಜನನ್ನು ಕೊಂದುಹಾಕಿ ಆ ತುಳವ ನರಸರಾಜನ ಮೇಲೆ ಅಪವಾದನನ್ನು ಹೊರಿಸಿದನು. ಆ ನರಸರಾಜನು ಈ ಅಪವಾದ ವನ್ನು ತಪ್ಪಿಸಿಕೊಳ್ಳಲೋಸುಗ ಆ ಬಾಲರಾಜನ ತಮ್ಮನಿಗೇನೆ ಪಟ್ಟವನ್ನು ಕಟ್ಟಿದನು. ಈ ಬಾಲರಾಜನು ತಮ್ಮಣ್ಣನನ್ನು ಕೊಂದುಹಾಕಿದ ದುಷ್ಟ ನನ್ನೇ ಗೌರವಿಸಿದುದರಿಂದ ಇವನನ್ನು ಸೆರೆಯಲ್ಲಿಟ್ಟು ನರಸರಾಜನೇ ಅರಸ ನಾದನು. ಆ ಬಾಲರಾಜನ ವಿಷಯವೇನಾಯಿತೆಂಬುವುದು ಗೊತ್ತಾಗಲಿಲ್ಲ. ಈ ತುಳುವ ನರಸರಾಜನು ಆಂಧಕವಿಗಳನ್ನಾದರಿಸಿದನು, ಈತನ ಆಸು ನದಲ್ಲಿದ್ದ ನಂದಿಮಲ್ಲಯ್ಯ ಫುಂಟೆ ಸಿಂಗಯ್ಯ ವರಾಹ ಪುರಾಣ, ಪ್ರಬೋಧ