ಪುಟ:ಜೀರ್ಣವಿಜಯನಗರಾದರ್ಶನಂ .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಕರ್ಣಾಟಕ ಗ್ರಂಥಮಾಲೆ MonwommmmmmmmmmwwwnMow ಸತ್ಕಾವ್ಯಗಳನ್ನು ಬಹಳವಾಗಿ ಬರೆಯಿಸಿದನೆಂಬುದನ್ನು ವಾಚಕರು ಮುಂದೆ ಗ್ರಹಿಸಬಲ್ಲರು. ಕೃಷ್ಣರಾಯನು ಅಡಿಗಡಿಗೆ ತೊಡಕಿಲ್ಲದ ಜಯಗಳನ್ನೇ ಪಡೆಯು ತಿದ್ದನು. ಆತನ ದಿಗ್ವಿಜಯಗಳನ್ನು ವಿವರಿಸಲಿಕ್ಕೆ ಮುಂಚೆ ಆ ದಿಗ್ವಿಜಯ ಗಳ ಕಾರಕನಾಗಿಯ, ರಾಯರಿಗೆ ಬಲಭುಜವಾಗಿಯ, ಪಿತೃ ತುಲ್ಯ ನಾಗಿಯ, ಈತನ ಅಮಾತ್ಯ ಶೇಖರನಾಗಿಯೇ ಇದ್ದ ತಿಮ್ಮರಸನ ವೃತ್ತಾಂತವನ್ನು ತಿಳಿದುಕೊಳ್ಳುವುದು ಅಗತ್ಯವಾದುದರಿಂದ ಅದನ್ನು ಸಂಗ್ರಹವಾಗಿ ತಿಳಿಸುವೆವು. ಈತನು ಆರವೇಲು ಕುಲದವನು. ಮನೆತನದ ಹೆಸರು ಸಾಳುವರು, ತಂದೆ ರಾಚಯ್ಯ, ಈ ತಿಮ್ಮರಸನ ಕೀರ್ತಿಯು ಆಂಧ್ರದೇಶದ ಎಲ್ಲಾ ಕಡೆ ಗಳಲ್ಲಿಯ ಈಗಲೂ ಹರಡಿಕೊಂಡಿದೆ. ಈತನ ಬುದ್ದಿ ವೈಭವಗಳನ್ನು ವಿಶದೀಕರಿಸುವ ಅನೇಕ ಕಥೆಗಳು ಆ೦ಧ್ರದೇಶದಲ್ಲಿ ಪ್ರಸಿದ್ದಿ ಗೊಂಡಿವೆ. ಅವುಗಳಲ್ಲಿ ಒಂದು ಕಥೆಯನ್ನು ದೇಶವಾತೆಯಿಂದ ಉದ್ದರಿಸಿ ಇಲ್ಲಿ ತಿಳಿಸುವೆವು. ಒಬ್ಬ ಬ್ರಾಹ್ಮಣನು ಕಾತೀಹಟ್ಟಣದಲ್ಲಿ ಬಹುಕಾಲದ ತನಕ ವಿದ್ಯಾ ಬ್ಯಾಸಮಾಡಿ ಜಗದೇಕ ಪಂಡಿತನೆಂದು ಹೆಸರುಪಡೆದನು. ಆ ಪಂಡಿತನು ನಮ್ಮ ಆರಾವರ್ತದ ದೇಶಗಳಲ್ಲೆಲ್ಲಾ ಸಂಚರಿಸಿ, ಎಲ್ಲೆಲ್ಲಿ ಪಂಡಿತಸಭೆಗಳು ಇರುವುವೋ ಅಲ್ಲೆಲ್ಲಾ ಹೋಗಿ ಸಮಸ್ತ ಶಾಸ್ತ್ರಗಳಲ್ಲಿಯೂ ಪ್ರಸಂಗ ಗಳನ್ನು ಮಾಡಿ, ಜಯವನ್ನು ಹೊಂದಿ ಸನ್ಮಾನ ಪತ್ರಗಳನ್ನೂ, ಜಯದ ಬಿರುದುಗಳನ್ನೂ ಪಡೆಯುತ್ತಾ ಬಂದನು. ಈತನಿಗೆ ಅಪಜಯವೆಂಬುವುದು ಯಾವುದೋ ತಿಳಿಯದೆಂದು ಹೇಳಬಹುದು, ಈತನು ಎಂದಾದರೂ ಒಂದು ದಿನ ತನ್ನ ಸಭೆಗೆ ಬಂದಾನೇ ಎಂದು ಕೃಷ್ಣರಾಯನು ಅಂದುಕೊಳ್ಳುತಿ ದ್ದನು. ಹೀಗಿರುವಲ್ಲಿ ಒಂದು ದಿನ ಆ ಜಗದೇಕ ಪಂಡಿತನು ರಾಯನ - ಬ - ೩