ಪುಟ:ಜೀರ್ಣವಿಜಯನಗರಾದರ್ಶನಂ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೧೩ ಸಂದರ್ಶನವನ್ನು ಮಾಡಿಕೊಂಡನು. ಕೃಷ್ಣರಾಯನು ತನ್ನ ಪಂಡಿತಸಭೆಯು ಸೋತುಹೋಯಿತೆಂಬ ಶಾಶ್ವತವಾದ ಅಪಕೀರ್ತಿಯನ್ನು ಹೊಂದಲು ಇಷ್ಟ ಪಡದೆ ಪ್ರಸಂಗಮಾಡದೆಯೇ ಆ ದೊಡ್ಡಪಂಡಿತನನ್ನು ಸನ್ಮಾನಿಸಿ ಕಳುಹ ಬೇಕೆಂದು ಯೋಚಿಸಿ, ಅನೇಕ ಬಹುಮಾನಗಳನ್ನು ತರಿಸಿ ಆತನಿಗೆ ಕೊಟ್ಟು ಇವುಗಳನ್ನು ಸ್ವೀಕರಿಸೆಂದನು. ಅದಕ್ಕಾಪಂಡಿತನು ಒಡಂಬಡದೆ, “ಮಹಾ ರಾಜಾ ! ತಮ್ಮ ದಯೆಯಿಂದ ಇಂತಹ ಬಹುಮಾನಗಳು ಅನೇಕವಾಗಿ ಬಂದಿವೆ, ನಾನೀ ಬಹುಮಾನಗಳಿಗಾಗಿ ಬಂದವನಲ್ಲ, ವಾದಭಿಕ್ಷವನ್ನು ಬಯಸಿ ಬಂದಿರುವನು ” ಎಂದನು. - ಅದಕ್ಕೆ ರಾಯನು ನಿಮ್ಮ ಇಷ್ಟದಂತೆಯೇ ಆಗಬಹುದೆಂದು ಹೇಳಿ, ತನ್ನ ಸಭೆಯ ಪಂಡಿತರನ್ನೆಲ್ಲಾ ಕರೆಯಿಸಿ ಶಾಸ್ತ್ರವಾದಮಾಡಲು ಏರಡಿಸಿ ದನು. ರಾಯನ ಆಸ್ಥಾನಪಂಡಿತರು ಹಿಂದೆಗೆಯದೆ ಹದಿನೈದು ದಿನಗಳ ತನಕ ಆ ಜಗದೇಕ ಪಂಡಿತನ ಸಂಗಡ ಶಾಸ್ತ್ರವಾದಮಾಡಿ ಹೇಗೋ ಆ ಪಂಡಿತನನ್ನು ಸೋಲಿಸಿ ರಾಯರ ಎದುರಿಗೆ ಆತನ ಬಿರುದುಗಳನ್ನೆಲ್ಲಾ ತೆಗೆದು ಇರಿಸಿ, ನಾನು ಜಯಿಸಲ್ಪಟ್ಟೆನೆಂದು ಅನ್ನಿಸಿದರು, ರಾಯನು ಉದಾರಗುಣ ಸಂಪ «ನೂ, ನವರಸರನಿಕನೂ ಆದುದರಿಂದ ಮೊದಲು ತರಿಸಿಟ್ಟಿದ್ದ ಬಹುಮಾನ ಗಳನ್ನೆಲ್ಲಾ ಆ ಪಂಡಿತನಿಗೆ ಕೊಟ್ಟು ಸನ್ನಾನಮಾಡಿ ಕಳುಹಿಸಿದನು. ತರು ವಾಯ ಆ ಕೃಷ್ಣರಾಯನು ತನ್ನ ಆಸ್ಥಾನಪಂಡಿತರು ಇಂತಹ ಮಹಾಪಂಡಿತ ನನ್ನು ಜೈಸಿದರಲ್ಲಾ ಎಂಬ ಸಂತೋಷದಿಂದ “ ನಿಮಗೆ ಬೇಕಾದುದನ್ನು ಕೇಳಿಕೊಳ್ಳಿರಿ ಕೊಡುವೆನು ” ಎಂದು ತನ್ನ ಪಂಡಿತರಿಗೆ ಹೇಳಿದನು, ಈ ಪಂಡಿತರಲ್ಲಿ ಅನೇಕರಿಗೆ ತಮ್ಮ ವಿದ್ಯಾ ಪಾಂಡಿತ್ಯದ ಮದದಿಂದ ರಾಯರಲ್ಲಿ ಮಂತ್ರಿತ ವನ್ನು ಪಡೆಯಬೇಕೆಂಬ ಆಸೆಯು ಬಹುಕಾಲದಿಂದ ಬಲವಾಗಿ ನೆಲೆಗೊಂಡಿತ್ತು. ಇದಲ್ಲದೆ ಈ ಪಂಡಿತರಿಗೆ ರಾಯರ ಮಂತ್ರಿಯಾದ ತಿನ್ನು ರಸಸ ಮೇಲೆ ಸ್ವಲ್ಪ ಅಸೂಯೆಯ ಮನಸ್ಸಿನಲ್ಲಿ ಬಾಧಿಸುತ್ತಿತ್ತು.