ಪುಟ:ಜೀರ್ಣವಿಜಯನಗರಾದರ್ಶನಂ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶb - ೧೭ • : ಅವರಪ್ಪನೇ ಆಗಲಿ ಯಾರೂ ತರಲಾರರೆಂತಲೂ ಅಂತವನು ಈ ಪ್ರಪಂಚ ದಲ್ಲಿ ಇರುವುದು ಅಸಾಧ್ಯವೆಂತಲೂ ಅವರು ನಿಶ್ಚಯಿಸಿದರು ಹೀಗೆ ಆರು ತಿಂಗಳು ಕಳೆದು ವು, ಪಂಡಿತರು ತಮಗೆ ರಾಯರು ಕೊಟ್ಟ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳೊಂದಿಗೆ ದರ್ಬಾರಿಗೆ ಬರಬೇಕೆಂದು ರಾಜಾಜ್ಞೆಯಾ ಯಿತು ರಾಯರ ಪ್ರಶ್ನೆಗಳಿಗೆ ಪಂಡಿತರು ಕೊಡುವ ಉತ್ತರಗಳನ್ನು ಕೇಳುವುದಕ್ಕೆ ಪುರಜನರು ಹಲವರು ಗುಂಪುಗುಂಪಾಗಿ ರಾಜಸಭೆಗೆ ಬಂದು ಕಿಕ್ಕಿರಿದು ನಿಂತಿದ್ದರು. ಒಡೋಲಗದಲ್ಲಿದ್ದ ರಾಯರು ಪಂಡಿತರ ಕುಶಲ ವನ್ನು ಕ೪ ತರುವಾಯ ತಾವು ಕೊಟ್ಟಿದ್ದ ಪ್ರಶ್ನೆಗಳ ವಿಷಯವೇನಾ ಗಿದೆ ? ಎಂದು ಕೇಳಿದರು, ಆಗಲಾಪಂಡಿತರು “ ಬದಕಿದರೆ ಬದುಕೆತಕ್ಕೆವನು ” ಇವನು ಎಂದು ತಾವು ಕರೆದು ತಂದಿದ್ದವನನ್ನು ರಾಬರ ಮುಂದೆ ನಿಲ್ಲಿಸಿ ಅವನ ಎದೆಯಮೇಲಣ ವಸ್ತ್ರವನ್ನು ತೊಲಗಿಸಿ “ ಮಹಾಪ್ರಭುವೇ ! ತೆರಣೆ ಹಿಡಿದ ಮಂಚದ ಕಾಲುಗಳ ಹಾಗೆ ಇವನ ತೆಳುಗಳು ಹೇಗಿವೆಯೋ ? ಬಲಿತಿರುವ ಇವನ ಎದೆಯು ಹೇಗಿದೆಯೋ ? ಪರಾಂಬರಿಕೆಯಾಗಲಿ, ಬದು ಕಿದರೆ ಬದುಕದೆ ಇವನಿಗೇನು ತವು ? ಎಂದು ಬಿನ್ನವಿಸಿದರು, ಉಳಿದ ನಾಲ್ಕು ಪ್ರಶ್ನೆಗಳಿಗೆ ಬರತಕ್ಕ ಉತ್ತರಗಳ ಸ್ವಭಾವವನ್ನು ರಾಯರು ಕೂಡಲೇ ಗ್ರಹಿಸಿ ತಡೆಯಲಶಕ್ಯವಾಗಿ ಬರುತ್ತಿರುವ ನಗೆಯನ್ನು ಪ್ರಯಾ ಸದಿಂದ ತಡೆದುಕೊಂಡು “ ಸತ್ತರೆ ಬದುಕುವನೆಲ್ಲಿ. ? ?” ಎಂದು ಕೇಳಿದರು. ಅದಕ್ಕಾಪಂಡಿತರು ಅವನನ್ನು ತರಿಸುವುದಕ್ಕೆ ತಿಮ್ಮರಸನಿಗಲ್ಲಿ, ತ್ರಿನೇತ್ರನಿ ಗಾದರೂ ಶಕ್ಯವಲ್ಲವೆಂದು ಬಹು ಹಟದಿಂದ ತಿಳಿಸಿದರು, ಪಂಡಿತರ ಉತ್ತರ ಗಳನ್ನು ಸರಿಯಾಗಿ ಕೇಳದಿದ್ದರೆ ಅವರ ಮನಸ್ಸು ಕೊರಗಿ ಅವಮಾನ ಪಡುವರೆಂದು ತಿಳಿದು, ರಾಯರು ಉಳಿದ ಪ್ರಶ್ನೆಗಳಿಗೂ ಉತ್ತರಗಳನ್ನು ಕೇಳಿ ತಿಳಿದುಕೊಂಡರು. ಅವುಗಳೆಲ್ಲವೂ ಆಭಾಸವಾಗಿರುವುದೆಂದರೆ ಪಂ.