ಪುಟ:ಜೀರ್ಣವಿಜಯನಗರಾದರ್ಶನಂ .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೧೯ wommmmmmmmmm. ರಿಂದಲೂ ಟೀಪೆಟ್ಟುಗಳನ್ನು ತಿನ್ನುತ್ತಿರುವನು. (8) ಅಧಮಾಧಮನು, ಇವನು ತನಗೆ ಯಾವ ವಿಧವಾದ ಪ್ರಯೋಜನವೂ ಇಲ್ಲದೆ ಅತ್ತೆ ಮನೆಯ ವರ ಹತ್ತಿರ ಇದ್ದು ಹೊಟ್ಟೆ ಹೊರೆದುಕೊಳ್ಳುತ್ತಾ ತನ್ನ ಹೆಂಡತಿಯಿಂದಲೂ ಭಾವಮೈದುನ ಮೊದಲಾದವರಿಂದಲೂ ಮಾತುಗಳನ್ನು ಕೇಳುತ್ತಾ ಹೀನ ರಾಗಿ ಬದುಕುವನು. (೫) ನೀಚನು ಇವನು ತನ್ನ ತಾಯಿಯಿಂದಲೂ ಅಕ್ಕತಂಗಿಯರಿಂದಲೂ, ಭಾರೆಯರಿಂದಲೂ, ದ್ರವ್ಯಾರ್ಜನೆಗಾಗಿ ಹೇಳ ಬಾರದ ನೀಚ ಕೃತ್ಯಗಳನ್ನು ಮಾಡಿಸುವವನು. ತಿಮ್ಮರಸನು ಈ ಮಾತುಗಳನ್ನು ವಿವರಿಸಿದಮೇಲೆ ಪಂಡಿತರ ಮೋರೆಗಳು ಚಿಕ್ಕದಾಗಿ ಅಂತಹ ಮಹಾಸಭೆಯಲ್ಲಿ ತಮಗೆ ಆದ ಅವ ಮಾನಕ್ಕೆ ಬಹಳ ನೊಂದುಕೊಂಡು ಖಿನ್ನರಾಗಿ ಏನೂಮಾತನಾಡದೆ ಮೌನ ವಾಗಿದ್ದರು. ಆಗ ರಾ ಯರು ಪಂಡಿತರ ಕಡೆಗೆ ತಿರುಗಿ ಇಂತೆಂದರು. - ಪಂಡಿತೆಷ್ಟರಿರಾ ! ಲೌಕಿಕ ವ್ಯಾಪಾರಗಳಿಗೂ ಪಂಡಿತವ್ಯಾಪಾರಗೆ ೪ಗೂ ಇರುವ ವ್ಯತ್ಯಾಸಕ್ಕೆ ಕೋಪಿಸುವಿರಾ ! ಯಾವ ವೃತ್ತಿಯವರು ಯಾವ ಕೆಲಸಮಾಡಬೇಕೊ ಆ ವೃತ್ತಿಯನ್ನು ನಡಿಸಿದರೆ ಪ್ರಕಾಶಿಸು ವುದು, ತಿಮ್ಮರಸನು ನಿಮ್ಮ ಪಾಂಡಿತ್ಯ ಕೃತ್ಯಕ್ಕೆ ಕೈಹಾಕಿದರೂ, ನೀವು ಆತನ ಲೌಕಿಕ ವ್ಯಾಪಾರಗಳನ್ನು ನಡಿಸುವೆನೆಂದು ಯತ್ನಿಸಿದರೂ ಅಭಾಸ ವಾಗಿ ಹೋಗುವುದೆಂದು ಹೇಳಿ ಮಂತ್ರಿ ಪದವಿಯನ್ನು ಪಡೆಯಬೇಕೆಂದು ಪಂಡಿತರ ಮನಸ್ಸಿನಲ್ಲಿದ್ದ ಅಭಿಪ್ರಾಯವನ್ನು ತಿಮ್ಮರಸನ ಬುದ್ಧಿ ಬಲದಿಂದ ದೃಷ್ಟಾಂತಪೂರ್ವಕವಾಗಿ ಓಡಿಸಿಬಿಟ್ಟರು. - ವಾಚಕರೇ ! ತಿಮ್ಮರಸನ ಬುದ್ದಿ ವೈಭವವನ್ನು ಕೇಳಿದಿರಾ ? ಇವರ ಬುದ್ಧಿ ವಿಶೇಷವನ್ನು ಕುರಿತು ಇನ್ನೂ ಹಲವು ಕಥೆಗಳು ಆಂಧ್ರ ದೇಶದಲ್ಲಿ ಈಗ್ಗ ಪ್ರಚುರದಲ್ಲಿವೆ. ಈ ಮಂತ್ರಿಯು ತನ್ನ ಬಾಲ್ಯದಲ್ಲಿ ಬಹಳ ಬಡತನದಿಂದ ಕೆಲವು ದಿನಗಳ ತನಕ ದನಗಳನ್ನು ಮೇಯಿಸುತ್ತಿದ್ದು