ಪುಟ:ಜೀರ್ಣವಿಜಯನಗರಾದರ್ಶನಂ .djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶ೦ ೨೧ MMmmmmmmmmmmmmmmmmmmmmmmmmmmmmmmmmmm ಬ ಬ ಮಲಯಾಳ, ಚೇರ, ಚೋಳ, ಪಾಂಡ್ಯರಾಜ್ಯಗಳನ್ನು ಜಯಿಸಿ ಈ ದೇಶಗ ಳನ್ನು ಮರುಭಾಗಗಳಾಗಿ ವಿಭಜಿಸಿ, ಒಂದೊಂದು ಭಾಗಕ್ಕೆ ಒಬ್ಬೊಬ್ಬ ನನ್ನು ತನ್ನ ಪ್ರತಿನಿಧಿಯಾಗಿ ನಿಯಮಿಸಿದನು. ೧೫೧೫ ನೆಯ ಸಂವತ್ಸರದಲ್ಲಿ ಪೂರ್ವ ದಿಗ್ವಿಜಯ ಯಾತ್ರೆ ಹೊರಟು ಕೊಂಡವೀಡು, ಬೆಲ್ಲ೦ಕೋಟೆ, ವಿನಕೊಂಡ, ಬೆಜವಾಡ, ಕೊಂಡಪಲ್ಲಿ, ವೇಗಿದೇಶದಲ್ಲಿರುವ ಜಮ್ಮುಲೋಯಿ, ತೋನಸೀಮೆ, ರಾಜಮಹೇಂದ್ರ ಮೊದಲಾದ ದೇಶಗಳನ್ನು ಜಯಿಸಿ ೧೫{೧೬ ನೇ ಸಂವತ್ಸರದಲ್ಲಿ ವಿಶಾಖ ಪಟ್ಟಣಮಂಡಲಕ್ಕೆ ಸೇರಿದ ಭೀಮನಪಟ್ಟಣಕ್ಕೆ ಐದು ಹರಿದಾರಿ ದೂರದಲ್ಲಿ ರುವ ಬೊಟ್ಟನೂರಿನ ಹತ್ತಿರ ಬಂದು ಕಲ್ಲಿನ ಜಯಸ್ತಂಭವನ್ನು ನೆಡಿಸಿ ಆ ಮಂಡಲದಲ್ಲಿನ ವೀರಪಲ್ಲಿ ತಾಲ್ಲೂಕಿನಲ್ಲಿದ್ದ ವಡ್ಡಾದಿಯನ್ನು ಜಯಿಸಿ ಉತ್ಕಲ ದೇಶದ ಕಟಕದ ತನಕ ಹೋಗಿ ಆ ಪಟ್ಟಣವನ್ನು ಸುಟ್ಟುಬಿಡಲು ಕಳಿಂಗದೇಶಾಧೀಶನಾಗಿ ಓತ ದೇಶವನ್ನು ಆಳುತ್ತಿದ್ದ ಪ್ರತಾಪರುದ್ರ ದೇವನು ತನ್ನ ಮಗಳಾದ ತಿರುಮಲಾದೇವಿಯನ್ನು ಮದುವೆ ಮಾಡಿಕೊಟ್ಟು ಸಂಧಿಮಾಡಿಕೊಂಡನು, ಇದರಿಂದ ಕೃಷ್ಣರಾಯರು ತಾವು ಜಯಿಸಿದ ರಾಜ ಮಹೇಂದ್ರದವರೆಗೂ ಇರುವ ಕಳಿಂಗದೇಶವನ್ನು ಮರಳಿ ಪ್ರತಾಪರುದ್ರ ದೇವನಿಗೆ ಕೊಟ್ಟು ಅದೇ ವರುಷದಲ್ಲಿ ಕಾಂಚೇ ಪುರವನ್ನು ಪ್ರವೇಶಿಸಿ ದರು. ಈ ಮಹಾರಾಯನೂ ಇವನ ಪಟ್ಟದರಸಿಯ ಹಲವು ಕಡೆಗಳಲ್ಲಿ ತಮ್ಮ ವಿಜಯವನ್ನು ಪ್ರಕಾಶಿಸಿ, ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ದಾನ ಧರಗಳನ್ನು ಮಾಡಿದರು, ಹೀಗೆ ಮಾಡಿದ್ದಕ್ಕೆ ದೃಷ್ಟಾಂತವಾಗಿ ಈತನು ನಿಂಹಾಚಲದ ದರ್ಶನಕ್ಕೆ ಬಂದಿದ್ದಾಗ ಭಾತ್ಯಾಸಹಿತನಾಗಿ ಮಾಡಿದ ದಾನ ಗಳ ವಿವರಣೆಯು ಸಿಂಹಾಚಲ ದೇವಾಲಯದ ಏಳನೆಯ ಸ್ಥಂಬದ ಮೇಲೆ ಕೆತ್ತಲ್ಪಟ್ಟಿರುವ ಶಾಸನದಿಂದ ಗೊತ್ತಾಗುವುದು, ಅದರ ಭಾಷಾಂತರವನ್ನು ಇಲ್ಲಿ ಉದ್ಧರಿಸಿದೆ. . - ಲ ಣ