ಪುಟ:ಜೀರ್ಣವಿಜಯನಗರಾದರ್ಶನಂ .djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೨೩ ೧/ ಯದ ಒಂದು ಪದ್ಯ ದಿಂದ ಗೊತ್ತಾಗುವುದು, ಅನ್ನಪೂರ್ಣಾದೇವಿಗೆ ಚೆನ್ನಾ ದೇವಿ ಎಂಬ ಮತ್ತೊಂದು ಹೆಸರು ಇತ್ತು. ಈತನ ದಿಗ್ವಿಜಯವು ಹಲವು ಆಂಧಗ್ರಂಥಗಳಲ್ಲಿ ಬಹಳ ವಾಗಿ ಬಣ್ಣಿಸಲ್ಪಟ್ಟಿದೆ. ಅವುಗಳನ್ನೆಲ್ಲಾ ತೆಗೆದು ಬರೆಯುವುದು ಅನಾವಶ್ಯಕ. - ಈ ಮಹನೀಯನ ಪಾಂಡಿತ್ಯವನ್ನೂ ಈತನ ಆಸ್ಥಾನದಲ್ಲಿ ಅಪ್ಪ ದಿಗ್ಗಜಗಳೆಂದು ಪ್ರಸಿದ್ಧಿಗೊಂಡಿದ್ದ ಎಂಟು ಮಂದಿ ಪಂಡಿತರ ಪಾಂಡಿತ್ಯ ನನ್ನ ಸಂಗ್ರಹವಾಗಿ ತಿಳಿಸುವೆವು ಈ ವಿಷಯವನ್ನು ಹೇಳುವುದಕ್ಕೆ ಮುಂಚೆ ಇವರ ಹಿಂದಿನ ಧೋರೆಗಳ ಆಸ್ಥಾನದಲ್ಲಿದ್ದ ಪಂಡಿತರ ವಿಚಾರ ವಾಗಿ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ. ನಮ್ಮ ಹಿಂದೂದೇಶದಲ್ಲಿನ ಉತ್ತಮ ಗ್ರಂಥಗಳೆಲ್ಲವೂ ಮೊತ್ತ ಮೊದಲು ಸಂಸ್ಕೃತಭಾಷೆಯದ್ಧಿಯೇ ರಚಿಸಲ್ಪಟ್ಟವು. ಈ ಭಾಷೆಯಲ್ಲಿ ಐಹಿಕಾಮುಕ ಸುಖಗಳನ್ನು ಉಂಟುಮಾಡತಕ್ಕ ಗ್ರಂಥರಾಣಿಗಳ ಸ್ಕೃತಿಸೂತ್ರಗಳ, ಇತಿಹಾಸಪುರಾಣಾದಿಗಳೂ, ಧರ್ಮಶಾಸ್ತ್ರಗಳ, ವೈದ್ಯ ಮಂತ್ರ ತಂತ್ರಾದಿಗಳ, ಗಣಿಸಲಶಕ್ಯಗಳಾಗಿವೆ. ಅವುಗಳಲ್ಲಿ ಶ್ರೀಮದ್ರಾಮಾಯಣವೂ, ಮಹಾಭಾರತವೂ ಸಮಸ್ತ ಧರ್ಮಗಳನ್ನೂ, ಬೋಧಿಸತಕ್ಕವುಗಳಾದುದರಿಂದ ಪೂರ್ವದಲ್ಲಿದ್ದ ರಾಜ ರುಗಳು ಅವುಗಳನ್ನು ಇತರ ಭಾಷೆಗಳಲ್ಲಿ ದೊಡ್ಡ ಕವಿಗಳಿಂದ ಭಾಷಾಂ ತರಿಸುತ್ತಾ ಬಂದರು. ರಾಜಮಹೇಂದ್ರ ನಗರಾಧಿಪನಾಗಿಯ ಕಾವ್ಯಗೀತಪ್ರಿಯನಾಗಿ ಯ ಇದ್ದ ರಾಜರಾಜನರೇಂದ್ರನೆಂಬ ವಿಷ್ಣುವರ್ಧನನು, ತನ್ನ ಆಸ್ಥಾನ ದಲ್ಲಿ ಬಹು ಜನ ಪಂಡಿತರನ್ನು ಸೇರಿಸಿಕೊಂಡಿದ್ದನು. ಈತನಿಗೆ ಯಾವಾ ಗಲೂ ಭಾರತವನ್ನು ಕೇಳುವುದರಲ್ಲಿ ಅಭಿರುಚಿ ಹೆಚ್ಚು, ಆದುದರಿಂದ ಹಲವು ಭಾಷೆಗಳಲ್ಲಿ ಹಲವು ವಿಧಗಳಾಗಿ ಬಹುಜನರಿಂದ ಹೇಳಲ್ಪಡು ಅ @